Red fort ಅನಿರ್ದಿಷ್ಟಾವಧಿ ಬಂದ್ ಮಾಡಿ ASI ಆದೇಶ

ಏವಿಯನ್ ಇನ್ಫ್ಲುಯೆನ್ಸ ಹರಡುವುದನ್ನು ತಡೆಗಟ್ಟಲು ಮುಂದಿನ ಆದೇಶದವರೆಗೆ ಕೆಂಪು ಕೋಟೆ ಮುಚ್ಚಲು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಆದೇಶ ಹೊರಡಿಸಿದೆ.

Written by - Yashaswini V | Last Updated : Feb 3, 2021, 03:10 PM IST
  • ಮುಂದಿನ ಆದೇಶದವರೆಗೆ ಕೆಂಪು ಕೋಟೆ ಮುಚ್ಚಲ್ಪಡುತ್ತದೆ
  • ಕೆಂಪು ಕೋಟೆಯನ್ನು ಅನಿರ್ದಿಷ್ಟಾವಧಿ ಮುಚ್ಚಲು ಎಎಸ್‌ಐ ಆದೇಶ ಹೊರಡಿಸಿದೆ
  • ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೆಂಪು ಕೋಟೆಯನ್ನು ಮುಚ್ಚಲಾಗಿದೆ
Red fort ಅನಿರ್ದಿಷ್ಟಾವಧಿ ಬಂದ್ ಮಾಡಿ ASI ಆದೇಶ title=
Red Fort will remain closed until further orders

ನವದೆಹಲಿ: ಏವಿಯನ್ ಇನ್ಫ್ಲುಯೆನ್ಸ ಹರಡುವುದನ್ನು ತಡೆಗಟ್ಟಲು ಮುಂದಿನ ಆದೇಶದವರೆಗೂ ಕೆಂಪು ಕೋಟೆಯನ್ನು ಮುಚ್ಚುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿ (ಎಎಸ್‌ಐ) ಆದೇಶ ಹೊರಡಿಸಿದೆ. 

ರೋಗ ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಎಎಸ್‌ಐಗೆ (ASI) ಪತ್ರ ಬರೆದ ನಂತರ ಜನವರಿ 19 ರಿಂದ ಕೆಂಪು ಕೋಟೆಯನ್ನು ಸಂದರ್ಶಕರಿಗೆ ಮುಚ್ಚಲಾಗಿದೆ.

ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರದ ನಂತರ ಕೆಂಪು ಕೋಟೆಯನ್ನು ಮುಚ್ಚಲಾಗಿದೆ. ಮೊದಲಿಗೆ ಗಣರಾಜ್ಯೋತ್ಸವದ ಆಚರಣೆ ಹಿನ್ನಲೆಯಲ್ಲಿ ಕೆಂಪು ಕೋಟೆಯನ್ನು ಜನವರಿ 22 ರಿಂದ 26 ರವರೆಗೆ ಮುಚ್ಚಲಾಯಿತು. ಅದನ್ನು ಮರುದಿನ ತೆರೆಯಬೇಕಿತ್ತು, ಆದರೆ 26 ರಂದು ರೈತ ಚಳವಳಿಗೆ (Farmers Protest) ಸಂಬಂಧಿಸಿದ ಹಿಂಸಾಚಾರದ ನಂತರ, ಎಎಸ್ಐ ಇದನ್ನು ಜನವರಿ 31 ರೊಳಗೆ ಮುಚ್ಚುವುದಾಗಿ ಘೋಷಿಸಿತು. ಇದಕ್ಕೆ ಎಎಸ್ಐ ಪಕ್ಷಿ ಜ್ವರದ (Bird Flu) ಕಾರಣವನ್ನು ನೀಡಿತ್ತು.

ಇದನ್ನೂ ಓದಿ - Bird Flu Guidelines: ಪಕ್ಷಿ ಜ್ವರ ಕುರಿತು ಕೇಂದ್ರ ಸರ್ಕಾರದ ಎಚ್ಚರಿಕೆ

ಏವಿಯನ್ ಇನ್ಫ್ಲುಯೆನ್ಸದಿಂದಾಗಿ ಕೆಂಪು ಕೋಟೆ ಮುಚ್ಚಲಾಗಿದೆ:
ಫೆಬ್ರವರಿ 1 ರಂದು ಹೊರಡಿಸಲಾದ ಆದೇಶವು ಜಿಲ್ಲಾ ಮ್ಯಾಜಿಸ್ಟ್ರೇಟ್ (ಕೇಂದ್ರ) -ಕೊ-ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪಡೆದ ಆದೇಶದ ಪ್ರಕಾರ, ದೆಹಲಿ ಎನ್‌ಸಿಟಿ ಆಡಳಿತವು ಕೆಂಪು ಕೋಟೆ ಸೋಂಕಿತ ಪ್ರದೇಶದಲ್ಲಿ ಬರುತ್ತದೆ ಎಂದು ನಿರ್ದೇಶಿಸಿದೆ, ಆದ್ದರಿಂದ ಏವಿಯನ್ ಇನ್ಫ್ಲುಯೆನ್ಸ ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೆಂಪು ಕೋಟೆಯನ್ನು (Red fort) ಸಾರ್ವಜನಿಕರಿಗೆ ಮುಚ್ಚಲಾಗುವುದು.

ಇದನ್ನೂ ಓದಿ - Bird Flu : ಕೆಂಪು ಕೋಟೆಯಲ್ಲಿ ಪಕ್ಷಿ ಜ್ವರದಿಂದಾಗಿ ಕಾಗೆಗಳ ಮಾರಣಹೋಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News