ನವದೆಹಲಿ: ದೇಶದ ಜನತೆಯ ತೀರ್ಪು ಹೊರಬಂದಿದೆ. ಈ ಬಾರಿ ಬಿಜೆಪಿ 2014ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ವಶಪಡಿಸಿಕೊಂಡಿದೆ. ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷ ವಿಜಯ ಪತಾಕೆ ಹಾರಿಸಿ, ಆಡಳಿತಾರೂಢ ತೆಲಗು ದೇಶಂ ಪಕ್ಷ(ಟಿಡಿಪಿ)ವನ್ನು ಧೂಳಿಪಟ ಮಾಡಿದೆ. ಈ ಹಿನ್ನೆಲೆಯಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರನ್ನು ಅಭಿನಂಧಿಸಿದ್ದಾರೆ. ಇದೇ ವೇಳೆ ಟಿಡಿಪಿ ಮುಖಂಡ ಎನ್. ಚಂದ್ರಬಾಬು ನಾಯ್ಡು ಅವರ ಹೀನಾಯ ಸೋಲಿನ ಬಗ್ಗೆ ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದಾರೆ.
ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ವಿರುದ್ಧ ಆರೋಪ ಮಾಡಿರುವ ವರ್ಮಾ, ರಾಜ್ಯದಲ್ಲಿ ಆಡಳಿತ ಪಕ್ಷದ ಸಾವಿನ(ಸೋಲಿನ) ಕಾರಣ 'ಸುಳ್ಳು' ಮತ್ತು 'ಭ್ರಷ್ಟಾಚಾರ' ಎಂದಿದ್ದಾರೆ.
He is remembering what he did to NTR 😢 pic.twitter.com/YM4tk9Yrnl
— Ram Gopal Varma (@RGVzoomin) May 23, 2019
"ಟಿಡಿಪಿ,
ಜನನ: ಮಾರ್ಚ್ 29, 1982,
ಮರಣ: 23 ಮೇ 2019, ಮರಣದ
ಕಾರಣ: ಸುಳ್ಳು, ಬೆನ್ನಿಗೆ ಚೂರಿ ಹಾಕುವುದು, ಭ್ರಷ್ಟಾಚಾರ, ಅಜಾಗರೂಕತೆ ಎಂದು ಇನ್ನೊಂದು ಟ್ವೀಟ್ ಮಾಡಿದ್ದಾರೆ.
Name: TDP
Born : 29th March 1982
Died : 23rd May 2019
Causes of death : Lies , Back Stabbings , Corruption , Incompetence , Y S Jagan and Nara Lokesh
— Ram Gopal Varma (@RGVzoomin) May 23, 2019
ಮತ್ತೊಂದು ಟ್ವೀಟ್ ನಲ್ಲಿ, 'ವೈ.ಎಸ್. ಜಗನ್ ಅವರಿಗೆ ಅಭಿನಂದನೆಗಳು ಮತ್ತು ನಾಯ್ಡುಗೆ ಸಂತಾಪ' ಎಂದು ಬರೆದಿದ್ದಾರೆ.
Hearty congratulations to @ysjagan and Heart felt condolences to @ncbn
— Ram Gopal Varma (@RGVzoomin) May 23, 2019
ಆಂಧ್ರ ಪ್ರದೇಶದಲ್ಲಿ 2019ರ ಲೋಕಸಭಾ ಚುನಾವಣೆ ಜೊತೆಗೆ ವಿಧಾನಸಭಾ ಚುನಾವಣೆ ಕೂಡ ನಡೆಸಲಾಗಿತ್ತು. ಆಂಧ್ರ ಪ್ರದೇಶದ 175 ವಿಧಾನಸಭಾ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ 2019ರ ಎಪ್ರಿಲ್ 11ರಂದು ಒಂದೇ ಹಂತದಲ್ಲಿ ಚುನಾವಣಾ ನಡೆದಿತ್ತು. 175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 88 ಸ್ಥಾನಗಳ ಅಗತ್ಯವಿದೆ. ಈ ಬಾರಿಯ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹೀನಾಯ ಸೋಲುಂಡಿದ್ದು, ವೈಎಸ್ ಆರ್ ಕಾಂಗ್ರೆಸ್ ಬರೋಬ್ಬರಿ 148 ಸ್ಥಾನಗಳನ್ನು ಪಡೆದಿದ್ದು ಜಗನ್ ಗೆ ಮುಖ್ಯಮಂತ್ರಿ ಪಟ್ಟ ಖಚಿತವಾಗಿದೆ.