Rajasthan Politics: ರಾಜಸ್ಥಾನದಲ್ಲಿ ತೀವ್ರಗೊಂಡ ರಾಜಕೀಯ ಹಲ್ಚಲ್, ಪಕ್ಷದ ಶಾಸಕರನ್ನು ಭೇಟಿ ಮಾಡಿದ ಸಚಿನ್ ಪೈಲಟ್

Rajasthan Congress: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಅಶೋಕ್ ಗೆಹಲೋಟ್ ಘೋಷಿಸಿದ ಬಳಿಕ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ರಾಜಕೀಯ ಕಸರತ್ತು ತೀವ್ರಗೊಂಡಿದೆ. ಸಿಎಂ ಸ್ಥಾನದ ಆಕಾಂಕ್ಷಿ ಎಂದೇ ಪರಿಗಣಿಸಲಾಗುವ ಸಚಿಕ್ ಪೈಲಟ್ ಸಕತ್ ಹಲ್ಚಲ್ ನಡೆಸಿದ್ದಾರೆ.  

Written by - Nitin Tabib | Last Updated : Sep 23, 2022, 07:18 PM IST
  • ಸಚಿನ್ ಪೈಲಟ್ ಸೆಪ್ಟೆಂಬರ್ 20 ರಂದು ಕೊಚ್ಚಿಗೆ ಹೋಗಿದ್ದರು ಮತ್ತು ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
  • ಇಬ್ಬರ ನಡುವೆ ಕೆಲ ಮಹತ್ವದ ಚರ್ಚೆಗಳೂ ಕೂಡ ನಡೆದಿವೆ ಎಂದು ಹೇಳಲಾಗುತ್ತಿದೆ.
  • ಪೈಲಟ್ ಸೋನಿಯಾ ಗಾಂಧಿ ಭೇಟಿಗಾಗಿ ಅಪಾಯಿಂಟ್‌ಮೆಂಟ್ ಕೇಳಿದ್ದಾರೆ ಎನ್ನಲಾಗಿದೆ.
Rajasthan Politics: ರಾಜಸ್ಥಾನದಲ್ಲಿ ತೀವ್ರಗೊಂಡ ರಾಜಕೀಯ ಹಲ್ಚಲ್, ಪಕ್ಷದ ಶಾಸಕರನ್ನು ಭೇಟಿ ಮಾಡಿದ ಸಚಿನ್ ಪೈಲಟ್ title=
Rajasthan Politics

Rajasthan Political News: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಅಶೋಕ್ ಗೆಹಲೋಟ್ ಘೋಷಣೆಯ ಬಳಿಕ ರಾಜಸ್ಥಾನ ಕಾಂಗ್ರೆಸ್ ನಲ್ಲಿ ರಾಜಕೀಯ ಸಂಚಲನ ಶುರುವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಅಂದಿನಿಂದ ರಾಜಸ್ಥಾನದ ಮುಂದಿನ ಸಿಎಂ ಬಗ್ಗೆ ರಾಜಕೀಯ ರಂಗದಲ್ಲಿ ಕಾವೇರತೊಡಗಿದೆ, ಈ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಸಿಎಂ ಕುರ್ಚಿಯ ಮೇಲೆ ತಮ್ಮ ಹಕ್ಕು ಮಂಡಿಸಲು ಆರಂಭಿಸಿದ್ದಾರೆ. ಶುಕ್ರವಾರ ಪೈಲಟ್ ವಿಧಾನಸಭೆಯಲ್ಲಿ ಪಕ್ಷದ ಶಾಸಕರನ್ನು ಭೇಟಿ ಮಾಡಿದ್ದಾರೆ. ಅಶೋಕ್ ಗೆಹ್ಲೋಟ್ ಬಣದ ಶಾಸಕರಿಗೂ ಕೂಡ ಅವರು ಕರೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಚಿನ್ ಪೈಲಟ್ ಸೆಪ್ಟೆಂಬರ್ 20 ರಂದು ಕೊಚ್ಚಿಗೆ ಹೋಗಿದ್ದರು ಮತ್ತು ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇಬ್ಬರ ನಡುವೆ ಕೆಲ ಮಹತ್ವದ ಚರ್ಚೆಗಳೂ ಕೂಡ ನಡೆದಿವೆ ಎಂದು ಹೇಳಲಾಗುತ್ತಿದೆ. ಪೈಲಟ್ ಸೋನಿಯಾ ಗಾಂಧಿ ಭೇಟಿಗಾಗಿ ಅಪಾಯಿಂಟ್‌ಮೆಂಟ್ ಕೇಳಿದ್ದಾರೆ ಎನ್ನಲಾಗಿದೆ.

ಆದರೆ ಗೆಹಲೋಟ್ ಅವರ ಆಯ್ಕೆ ಪೈಲಟ್ ಅಲ್ಲ
ಆದರೆ, ಪೈಲಟ್‌ಗೆ ಸಿಎಂ ಹುದ್ದೆಯ ರೇಸ್ ಅಷ್ಟೊಂದು ಸುಲಭದ ಮಾತಲ್ಲ. ಏಕೆಂದರೆ, ಗೆಹಲೋಟ್  ಪೈಲಟ್ ಅವರನ್ನು ಇಷ್ಟಪಡುವುದಿಲ್ಲ ಎಂದು ನಂಬಲಾಗಿದೆ. ಗೆಹಲೋಟ್ ತಮ್ಮ ಬಣದ ಹಿರಿಯ ನಾಯಕರು ರಾಜಸ್ಥಾನದ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆ. ಡಾ.ಸಿ.ಪಿ.ಜೋಶಿ, ಬಿ.ಡಿ.ಕಲ್ಲಾ ಮತ್ತು ಗೋವಿಂದ್ ಸಿಂಗ್ ದೋಟಸಾರ ಇವರಲ್ಲಿ ಯಾರನ್ನಾದರು ಒಬ್ಬರನ್ನು ಸಿಎಂ ಮಾಡಲು ಗೆಹಲೋಟ್ ಒಲವು ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-Shivaji Park ನಲ್ಲಿ ದಸರಾ ಮೇಳ ನಡೆಸಲು ಉದ್ಧವ್ ಬಣಕ್ಕೆ ಬಾಂಬೆ ಹೈಕೋರ್ಟ್ ಅನುಮತಿ

ಇದಕ್ಕೂ ಮುನ್ನ ಶುಕ್ರವಾರ ಕೊಚ್ಚಿಯಲ್ಲಿ ಹೇಳಿಕೆ ನೀಡಿದ್ದ  ಗೆಹಲೋಟ್ , "ನಾನು (ಕೇರಳದಿಂದ ರಾಜಸ್ಥಾನಕ್ಕೆ) ಹಿಂದಿರುಗಿದ ನಂತರ (ನಾಮಪತ್ರಗಳನ್ನು ಸಲ್ಲಿಸಲು) ದಿನಾಂಕವನ್ನು ನಿಗದಿಪಡಿಸುತ್ತೇನೆ, ಆದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇನೆ. ಇದು ಪ್ರಜಾಪ್ರಭುತ್ವದ ಪ್ರಶ್ನೆ ಮತ್ತು ನಾವು ಹೊಸ ಆರಂಭವನ್ನು ಮಾಡಲು ಬಯಸುತ್ತಿದ್ದೇನೆ" ಎಂದು ಹೇಳಿದ್ದರು.

ಇದನ್ನೂ ಓದಿ-'ನಿತೀಶ್ ಕುಮಾರ್ ಬಿಜೆಪಿ ಬೆನ್ನಿಗೆ ಚೂರಿ ಹಾಕಿದರು'- ಅಮಿತ್ ಶಾ

'ಸಿಎಂ ಸ್ಥಾನದ ನಿರ್ಧಾರವನ್ನು ಸೋನಿಯಾ ಗಾಂಧಿ ಮತ್ತು ಮಾಕನ್ ತೆಗೆದುಕೊಳ್ಳುತ್ತಾರೆ'
ಆದರೆ, ರಾಜಸ್ಥಾನದಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬುದರ ಬಗ್ಗೆ ಪ್ರಶ್ನೆ ಕೇಳಿದಾಗ, ಈ ಕುರಿತಾದ ಯಾವುದೇ ನಿರ್ಧಾರವನ್ನು ಪ್ರಸ್ತುತ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಮತ್ತು ರಾಜ್ಯದ ಪಕ್ಷದ ವ್ಯವಹಾರಗಳ ಉಸ್ತುವಾರಿ ಅಜಯ್ ಮಾಕನ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಗೆ ಗುರುವಾರ ಅಧಿಸೂಚನೆಯನ್ನು ಹೊರಡಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News