ನವದೆಹಲಿ: ರಾಹುಲ್ ಗಾಂಧಿ ಎಲ್ಲ ಕಳ್ಳರಿಗೆ ಮೋದಿ ಎಂಬ ಹೆಸರಿದೆ ಎನ್ನುವ ಹೇಳಿಕೆ ವಿಚಾರವಾಗಿ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಸಲ್ಲಿಸಿದ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಇಂದು ಜಾಮೀನು ನೀಡಲಾಗಿದೆ.
2019 ರ ಏಪ್ರಿಲ್ನಲ್ಲಿ ಸುಶೀಲ್ ಕುಮಾರ್ ಮೋದಿ ಅವರು ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮೋದಿಯವರ ಬಗ್ಗೆ ಆ ರೀತಿ ಹೇಳಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಿದ್ದರು, ತಮ್ಮ ಅರ್ಜಿಯಲ್ಲಿ ಅವರು ಈ ಉಪನಾಮ ಹೊಂದಿರುವ ಪ್ರತಿಯೊಬ್ಬರ ಭಾವನೆಗಳನ್ನು ಕೆಣಕುತ್ತದೆ ಮತ್ತು ನೋವುಂಟು ಮಾಡುತ್ತದೆ ಎಂದು ಉಲ್ಲೇಖಿಸಿದ್ದರು.
Rahul Gandhi after appearing in a defamation case filed against him by Bihar Deputy CM Sushil Modi: Whoever stands against RSS' and Narendra Modi ji's ideology is attacked, court cases are slapped. My fight is to save the Constitution, to stand for the poor & the farmers. #Patna pic.twitter.com/T4GJsSum3V
— ANI (@ANI) July 6, 2019
2019 ರ ಲೋಕಸಭಾ ಚುನಾವಣೆಗೆ ಪ್ರಚಾರ ಮಾಡುತ್ತಿದ್ದ ರಾಹುಲ್ ಗಾಂಧಿ ಚೌಕಿದಾರ್ ಚೋರ್ ಹೈ ಎನ್ನುವ ಘೋಷಣೆಯನ್ನು ಪ್ರಚಾರದ ಮುಖ್ಯ ಭಾಗವಾಗಿ ಮಾಡಿಕೊಂಡಿದ್ದರು. ಆಗ ಅವರು ತಮ್ಮ ಭಾಷಣದ ವೇಳೆ ' ಲಲಿತ್ ಮೋದಿ ಆಗಿರಲಿ ಅಥವಾ ನೀರವ್ ಮೋದಿ ಆಗಿರಲಿ, ಎಲ್ಲಾ ಕಳ್ಳರಿಗೆ ಮೋದಿ ಎಂಬ ಹೆಸರು ಏಕೆ ಇದೆ? ಎಂದು ಪ್ರಶ್ನಿಸಿದ್ದರು.
ರಾಹುಲ್ ಗಾಂಧಿ ವಿಚಾರಣೆ ಹಾಜರಾಗುವ ಮೊದಲು ಬಿಜೆಪಿ-ಆರೆಸೆಸ್ಸ್ ನಲ್ಲಿರುವ ತಮ್ಮ ವಿರೋಧಿಗಳು ಕಿರುಕುಳ ಹಾಗೂ ಬೆದರಿಕೆ ನೀಡಲು ಸಲ್ಲಿಸಿದ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಹೇಳಿದ್ದರು. ಈಗ ಜಾಮೀನು ದೊರೆತ ನಂತರ ಮಾತಾನಾಡಿದ ರಾಹುಲ್ ಗಾಂಧಿ 'ಮೋದಿ ಸರ್ಕಾರ ಅಥವಾ ಬಿಜೆಪಿ-ಆರ್ಎಸ್ಎಸ್ ವಿರುದ್ಧ ಯಾರು ಧ್ವನಿ ಎತ್ತುತ್ತಾರೋ ಅವರ ವಿರುದ್ಧ ನ್ಯಾಯಾಲಯದ ಪ್ರಕರಣಗಳನ್ನು ಬಳಸಿಕೋಳ್ಳುತ್ತಾರೆ" ಎಂದು ಗಾಂಧಿ ಹೇಳಿದರು