ರಫೇಲ್ ಬಗ್ಗೆ ಚರ್ಚಿಸಲು 15 ನಿಮಿಷದ ಬಹಿರಂಗ ಚರ್ಚೆಗೆ ಬನ್ನಿ- ಮೋದಿಗೆ ರಾಹುಲ್ ಸವಾಲು

 ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದದ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಸವಾಲು ಹಾಕಿದ್ದಾರೆ. ಛತ್ತೀಸ್ ಗಡದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದರು. 

Last Updated : Nov 18, 2018, 02:36 PM IST
ರಫೇಲ್ ಬಗ್ಗೆ ಚರ್ಚಿಸಲು 15 ನಿಮಿಷದ ಬಹಿರಂಗ ಚರ್ಚೆಗೆ ಬನ್ನಿ- ಮೋದಿಗೆ ರಾಹುಲ್ ಸವಾಲು title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದದ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಸವಾಲು ಹಾಕಿದ್ದಾರೆ. ಛತ್ತೀಸ್ ಗಡದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದರು. 

ಪ್ರಧಾನಿ ಮೋದಿಯನ್ನು ತರಾಟೆಗೆ ತಗೆದುಕೊಂಡ ರಾಹುಲ್ ಗಾಂಧಿ  "ನಾನು ಪ್ರಧಾನಿ ಮೋದಿಯವರಿಗೆ ಸವಾಲು ಹಾಕುತ್ತೇನೆ ಅವರು ಯಾವುದೇ ವೇದಿಕೆಯಲ್ಲಾಗಲಿ ಎಲ್ಲಾದರೂ ಆಗಲಿ ರಫೇಲ್ ಒಪ್ಪಂದದ ವಿಚಾರವಾಗಿ ಜೊತೆ ನನ್ನ ಜೊತೆ 15 ನಿಮಿಷಗಳ ಬಹಿರಂಗ ಚರ್ಚೆಗೆ ಬರಲಿ.ಆಗ ನಾನು ಅನಿಲ್ ಅಂಬಾನಿ, ಎಚ್ಎಎಲ್, ಫ್ರೆಂಚ್ ಅಧ್ಯಕ್ಷರ ಹೇಳಿಕೆ ಮತ್ತು ಅದರ ಯುದ್ದ ವಿಮಾನದ ಮೊತ್ತದ ಬಗ್ಗೆ ಮಾತನಾಡುತ್ತೇನೆ. ಸ್ವತಃ ರಕ್ಷಣಾ ಸಚಿವರು ಪ್ರಧಾನ ಮಂತ್ರಿಯವರೇ ಈ ಒಪ್ಪಂದಕ್ಕೆ ಸಹಿ ಹಾಕಿದ್ದು ಎಂದು ಹೇಳಿದ ಮಾತನ್ನು ಪ್ರಸ್ತಾಪಿಸುತ್ತೇನೆ. ಪ್ರಧಾನಿ ಒಪ್ಪಂದದ ವೇಳೆ ಯಾವುದೇ ನಿಯಮಾವಳಿಯನ್ನು ಅನುಸರಿಸಲಿಲ್ಲ, ಸಿಬಿಐ ನಿರ್ದೇಶಕರು 2 ಘಂಟೆಗೆ ಕಿತ್ತು ಹಾಕಲಾಗಿದೆ.ಈ ಎಲ್ಲ ನನ್ನ ಪ್ರಶ್ನಾವಳಿಗೆ ಪ್ರಧಾನಿ ಮೋದಿ ಉತ್ತರಿಸಲು ಸಾಧ್ಯವಿಲ್ಲ " ಎಂದು ರಾಹುಲ್ ಗಾಂಧಿ ತಿಳಿಸಿದರು.

ಇನ್ನು ಮುಂದುವರೆದು ಮೋದಿ ಸರ್ಕಾರದ ನೋಟು ನಿಷೇಧ ಕಾಯಿದೆಯು ಕೇವಲ ಅವರ ಕೆಲವು ಉದ್ಯಮಿ ಸ್ನೇಹಿತರಿಗೆ ಅನೂಕೂಲ ಮಾಡಿಕೊಟ್ಟಿದೆ ಎಂದು ರಾಹುಲ್ ತಿಳಿಸಿದರು. 

 

Trending News