ರಕ್ಷಣಾ ಇಲಾಖೆಯಲ್ಲಿದ್ದ ರಫೇಲ್ ಒಪ್ಪಂದದ ದಾಖಲೆಗಳು ಕಳ್ಳತನವಾಗಿವೆ- ಕೇಂದ್ರ ಸರ್ಕಾರ

ಬುಧವಾರ ನಡೆದ ರಫೆಲ್ ಫೈಟರ್ ಜೆಟ್ ಒಪ್ಪಂದದ ವಿಚಾರವಾಗಿ ಡಿಸೆಂಬರ್ 14 ರಂದು ನೀಡಿದ ತೀರ್ಪಿನ ಪರಿಶೀಲನೆಗಾಗಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. ಈ ಹಿಂದೆ ಸುಪ್ರೀಂಕೋರ್ಟ್ ಫ್ರಾನ್ಸ್ ನಿಂದ 36 ರಫೆಲ್ ಯುದ್ಧ ವಿಮಾನ ಖರೀದಿಸಿರುವ ವಿಚಾರವಾಗಿ ತನಿಖೆಗೆ ಆದೇಶ ನೀಡಲು ನಿರಾಕರಿಸಿತ್ತು.

Last Updated : Mar 6, 2019, 02:42 PM IST
 ರಕ್ಷಣಾ ಇಲಾಖೆಯಲ್ಲಿದ್ದ ರಫೇಲ್ ಒಪ್ಪಂದದ ದಾಖಲೆಗಳು ಕಳ್ಳತನವಾಗಿವೆ- ಕೇಂದ್ರ ಸರ್ಕಾರ title=

ನವದೆಹಲಿ: ಬುಧವಾರ ನಡೆದ ರಫೆಲ್ ಫೈಟರ್ ಜೆಟ್ ಒಪ್ಪಂದದ ವಿಚಾರವಾಗಿ ಡಿಸೆಂಬರ್ 14 ರಂದು ನೀಡಿದ ತೀರ್ಪಿನ ಪರಿಶೀಲನೆಗಾಗಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. ಈ ಹಿಂದೆ ಸುಪ್ರೀಂಕೋರ್ಟ್ ಫ್ರಾನ್ಸ್ ನಿಂದ 36 ರಫೆಲ್ ಯುದ್ಧ ವಿಮಾನ ಖರೀದಿಸಿರುವ ವಿಚಾರವಾಗಿ ತನಿಖೆಗೆ ಆದೇಶ ನೀಡಲು ನಿರಾಕರಿಸಿತ್ತು.

ಇಂದು ಈ ಒಪ್ಪಂದದ ವಿಚಾರವಾಗಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಕೆ.ಎಂ ಜೋಸೆಫ್ ರನ್ನೋಳಗೊಂಡ ಪೀಠ ಪರಿಶೀಲನೆ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ ಅಟಾರ್ನಿ ಜನರಲ್ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ರಕ್ಷಣಾ ಇಲಾಖೆಯಿಂದ ಹಿಂದಿನ ಆಥವಾ ಈಗಿನ ಎಂಪ್ಲಾಯ್ ಗಳಿಂದ ಕಳ್ಳತನವಾಗಿವೆ.ಈ ದಾಖಲೆಗಳು ರಹಸ್ಯ ದಾಖಲೆಗಳು, ಇವುಗಳನ್ನು ಸಾರ್ವಜನಿಕವಾಗಿ ಇಡಲು ಬರುವುದಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಈ ಕುರಿತಾಗಿ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಳಿದರು.ಇದಕ್ಕೆ ಉತ್ತರಿಸಿದ ಸರ್ಕಾರ " ಈ ದಾಖಲೆಗಳು ಹೇಗೆ ಕಳ್ಳತನವಾಗಿವೆ ಎನ್ನುವುದನ್ನು ನಾವು ವಿಚಾರಣೆ ನಡೆಸುತ್ತಿದ್ದೇವೆ" ಎಂದು ಉತ್ತರಿಸಿತು.

 

  

Trending News