ನವದೆಹಲಿ: ಬ್ರಿಟನ್ ರಾಣಿ ಎಲಿಜಬೆತ್-2 ಅವರ ನಿಧನಕ್ಕೆ ಬ್ರಿಟನ್‌ನಲ್ಲಿ ಶೋಕದ ಅಲೆ ಇದೆ. ವಿಶ್ವದ ಹಲವು ರಾಷ್ಟ್ರಗಳ ನಾಯಕರು ಟ್ವೀಟ್ ಮಾಡುವ ಮೂಲಕ ರಾಣಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಸುಮಾರು 7 ದಶಕಗಳ ಕಾಲ ಬ್ರಿಟನ್ ರಾಣಿಯಾಗಿದ್ದ 2ನೇ ಎಲಿಜಬೆತ್, ಅತ್ಯಂತ ಸುದೀರ್ಘ ಅವಧಿಯವರೆಗೆ ದೇಶವನ್ನು ಆಳಿದ ವಿಶ್ವ ದಾಖಲೆ ಹೊಂದಿದ್ದಾರೆ.
ಸ್ಪೂರ್ತಿದಾಯಕ ನಾಯಕತ್ವ
I had memorable meetings with Her Majesty Queen Elizabeth II during my UK visits in 2015 and 2018. I will never forget her warmth and kindness. During one of the meetings she showed me the handkerchief Mahatma Gandhi gifted her on her wedding. I will always cherish that gesture. pic.twitter.com/3aACbxhLgC
— Narendra Modi (@narendramodi) September 8, 2022
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘2015 ಮತ್ತು 2018ರಲ್ಲಿ ನಾನು ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಣಿ ಎಲಿಜಬೆತ್ II ಅವರೊಂದಿಗೆ ಸ್ಮರಣೀಯ ಭೇಟಿಗಳನ್ನು ನಡೆಸಿದ್ದೆ. ಅವರ ನಡತೆ ಮತ್ತು ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಸಭೆಯೊಂದರಲ್ಲಿ ಅವರು ಮಹಾತ್ಮ ಗಾಂಧಿಯವರು ತಮ್ಮ ಮದುವೆಯಲ್ಲಿ ಉಡುಗೊರೆಯಾಗಿ ನೀಡಿದ್ದ ಕರವಸ್ತ್ರವನ್ನು ನನಗೆ ತೋರಿಸಿದರು. ಅವರ ಈ ರೀತಿಯ ಸರಳತೆಯನ್ನು ನಾನು ಎಂದಿಗೂ ಮರೆಯಲಾರೆ’ ಎಂದು ನೆನೆದಿದ್ದಾರೆ.
ಇದನ್ನೂ ಓದಿ: Breaking News : ಬ್ರಿಟನ್ ರಾಣಿ ಎಲಿಜಬೆತ್ II ಇನ್ನಿಲ್ಲ
ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ
In the demise of Her Majesty Queen Elizabeth II of UK, the world has lost a great personality. An era has passed since she steered her country and people for over 7 decades. I share the grief of people of UK and convey my heartfelt condolence to the family.
— President of India (@rashtrapatibhvn) September 8, 2022
ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಟ್ವೀಟ್ ಮಾಡುವ ಮೂಲಕ ಬ್ರಿಟಿಷ್ ರಾಣಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರ ನಿಧನದಿಂದ ಜಗತ್ತು ಶ್ರೇಷ್ಠ ವ್ಯಕ್ತಿತ್ವವನ್ನು ಕಳೆದುಕೊಂಡಿದೆ. ಕಳೆದ 7 ದಶಕಗಳಿಗಿಂತಲೂ ಹೆಚ್ಚು ಕಾಲ ತನ್ನ ದೇಶವನ್ನು ಮತ್ತು ಅವರ ಜನರನ್ನು ನಡೆಸುತ್ತಿದ್ದ ಯುಗವು ಕಳೆದಿದೆ. ನಾನು ಬ್ರಿಟನ್ ಜನರ ದುಃಖದಲ್ಲಿ ಭಾಗಿಯಾಗಿದ್ದೇನೆ. ಬ್ರಿಟನ್ ರಾಣಿಯ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ’ ಅಂತಾ ಹೇಳಿದ್ದಾರೆ.
ಭಾರತದೊಂದಿಗೆ ಬ್ರಿಟನ್ ರಾಣಿಯ ವಿಶೇಷ ಸಂಬಂಧ
ತಮ್ಮ 70 ವರ್ಷಗಳ ಆಳ್ವಿಕೆಯಲ್ಲಿ ಬ್ರಿಟನ್ ರಾಣಿ 2ನೇ ಎಲಿಜಬೆತ್ ಕೇವಲ 3 ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಆದರೆ ಭಾರತದೊಂದಿಗೆ ಅವರ ಸಂಬಂಧವು ಸ್ಥಿರವಾಗಿತ್ತು. ತಮ್ಮ ಆಳ್ವಿಕೆಯಲ್ಲಿ ಬ್ರಿಟಿಷ್ ರಾಣಿ 18 ಪ್ರಧಾನ ಮಂತ್ರಿಗಳನ್ನು ಅರಮನೆಗೆ ಸ್ವಾಗತಿಸಿದ್ದರು. ಇದರೊಂದಿಗೆ 1963, 1990 ಮತ್ತು 2009ರಲ್ಲಿ ಬ್ರಿಟನ್‍ಗೆ ಭೇಟಿ ಮಾಡಿದ ಭಾರತೀಯ ರಾಷ್ಟ್ರಪತಿಗಳನ್ನು ಸಹ ಆತ್ಮೀಯವಾಗಿ ಗೌರವಿಸಲಾಗಿತ್ತು.
ಇದನ್ನೂ ಓದಿ: ಇಂಡಿಯಾ ಗೇಟ್‌ನಲ್ಲಿ ನೇತಾಜಿ ಪ್ರತಿಮೆ ಉದ್ಘಾಟಿಸಿದ ಪಿಎಂ ಮೋದಿ
2018ರಲ್ಲಿ 2ನೇ ಬಾರಿ ಬ್ರಿಟನ್‍ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ 2ನೇ ಬಾರಿಗೆ ಬ್ರಿಟನ್‌ಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಅರಮನೆಯಲ್ಲಿ ಬ್ರಿಟಿಷ್ ರಾಣಿಯನ್ನು ಭೇಟಿಯಾಗಿದ್ದರು. ಈ ಸಭೆಯಲ್ಲಿ ರಾಣಿ II ಎಲಿಜಬೆತ್ ಪ್ರಧಾನಿ ಮೋದಿಯವರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದರು. ಮಹಾತ್ಮ ಗಾಂಧಿಯವರು ತಮ್ಮ ಮದುವೆಯ ಸಮಯದಲ್ಲಿ ಉಡುಗೊರೆಯಾಗಿ ಕಳುಹಿಸಿದ್ದ ಕರವಸ್ತ್ರವನ್ನು ಅವರಿಗೆ ತೋರಿಸಿದರು. ಬ್ರಿಟಿಷ್ ರಾಣಿ ಭಾರತದ ವೈವಿಧ್ಯತೆ ಮತ್ತು ಆತಿಥ್ಯದ ಅಭ್ಯಾಸದ ಬಗ್ಗೆ ವಿಸ್ಮಯಗೊಂಡರು. ಭಾರತೀಯ ಉದ್ಯಮಿಗಳೊಂದಿಗಿನ ಸಭೆಯಲ್ಲೂ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.