ಲಕ್ನೌ : ಇಲ್ಲಿನ ಶಹಾದತ್ಗಂಜ್ ಪ್ರದೇಶದಲ್ಲಿರುವ ಮದ್ರಸಾವೊಂದರ ವ್ಯವಸ್ಥಾಪಕನಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದ 51 ಬಾಲಕಿಯರಿಗೆ ಪೊಲೀಸರು ರಕ್ಷಣೆ ಒದಗಿಸಿದ್ದು, ಅಲ್ಲಿನ ವ್ಯವಸ್ಥಾಪಕನನ್ನು ಬಂಧಿಸಿದ್ದಾರೆ.
ಆ ಮದ್ರಸಾದಲ್ಲಿ 125 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ನಡೆಸುತ್ತಿದ್ದು, ಅವರಲ್ಲಿ ಕೆಲವರು ವ್ಯವಸ್ಥಾಪಕನ ವಿರುದ್ಧ ಲೈಂಗಿಕ ಕಿರುಕುಳದ ದೂರು ಸಲ್ಲಿಸಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಲಕ್ನೌ ಪೋಲೀಸರ ಜಂಟಿ ತಂಡ ಮದ್ರಸಾ ಮೇಲೆ ದಲಿ ನಡೆಸಿದ ಸಂದರ್ಭದಲ್ಲಿ ಅಲ್ಲಿ ಒತ್ತೆಯಾಳಗಿದ್ದ 51 ವಿದ್ಯಾರ್ಥಿನಿಯರನ್ನು ಪೊಲೀಸರು ರಕ್ಷಿಸಿದ್ದಾರೆ.
ವರದಿಗಳ ಪ್ರಕಾರ, ಸಂತ್ರಸ್ಥ ವಿದ್ಯಾರ್ಥಿನಿಯರು ತಮ್ಮ ಪರಿಸ್ಥಿತಿಯನ್ನು ಒಂದು ಕಾಗದದ ಮೇಲೆ ಬರೆದು ಪಕ್ಕದ ಮನೆಗಳ ಬಳಿ ಎಸೆದ ಪರಿಣಾಮ ಪರಿಸ್ಥಿತಿ ಮನಗಂಡ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಸ್ತ್ರಸ್ಥ ವಿಧ್ಯರ್ಥಿನಿಯರ ಹೇಳಿಕೆಗಳನ್ನು ದಕಹಳು ಮಾಡಿಕೊಂಡಿರುವ ಪೊಲೀಸರು ಇದನ್ನು ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಮಾಡಿದ್ದಾರೆ.
"ನಾವು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ದೂರನ್ನು ಪಡೆದಿರುವ ಕಟ್ಟುನಿಟ್ಟಿನ ಕ್ರಮವನ್ನು ನಾವು ತೆಗೆದುಕೊಂಡಿದ್ದೇವೆ. ಅಪರಾಧಿಯನ್ನು ಬಂಧಿಸಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ. ತನಿಖೆ ನಡೆಸುತ್ತಿದ್ದೇವೆ"ಎಂದು ಲಕ್ನೌನ ಹಿರಿಯ ಪೊಲೀಸ್ ಅಧೀಕ್ಷಕ ದೀಪಕ್ ಕುಮಾರ್ ತಿಳಿಸಿದ್ದಾರೆ.
ಅಲ್ಲಿನ ವ್ಯವಸ್ಥಾಪಕ ವಿಧ್ಯಾರ್ಥಿನಿಅರಿಗೆ ಹೊಡೆಯುತ್ತಿದ್ದುದಲ್ಲದೆ, ಅವರನ್ನು ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದ ಎಂದು ಮದ್ರಸಾ ವಿದ್ಯಾರ್ಥಿನಿಯರ ಪೋಷಕರು ಆರೋಪಿಸಿದ್ದಾರೆ.
"ನಾವು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯನ್ನು ತನಿಖೆಗೆ ಒಳಪಡಿಸಲಾಗಿದೆ" ಎಂದು ಪಶ್ಚಿಮ ಪೊಲೀಸ್ ಪ್ರದೇಶದ ಪೊಲೀಸ್ ಅಧೀಕ್ಷಕ ವಿಕಾಸ್ ತ್ರಿಪಾಠಿ ತಿಳಿಸಿದ್ದಾರೆ.