ಆಂಧ್ರದಲ್ಲಿ ಗೋಡೌನ್ ಮೇಲೆ ದಾಳಿ ನಡೆಸಿ ಪಟಾಕಿಗಳನ್ನು ವಶಕ್ಕೆ ಪಡೆದ ಪೊಲೀಸರು

ನಂದಿಗಾಮ ಗ್ರಾಮೀಣ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್ ಅವರು ಗೋಡೌನ್ ಮೇಲೆ ದಾಳಿ ನಡೆಸಿದ್ದು, ಗೋದಾಮನ್ನು ನಡೆಸಲು ಬೇಕಾದ ಅನುಮತಿಗಳು ಮತ್ತು ಪರವಾನಗಿಗಳನ್ನು ಒದಗಿಸಲು ಸಿಬ್ಬಂದಿ ವಿಫಲರಾಗಿದ್ದಾರೆ ಎನ್ನಲಾಗಿದೆ.

Last Updated : Oct 24, 2019, 09:50 AM IST
ಆಂಧ್ರದಲ್ಲಿ ಗೋಡೌನ್ ಮೇಲೆ ದಾಳಿ ನಡೆಸಿ ಪಟಾಕಿಗಳನ್ನು ವಶಕ್ಕೆ ಪಡೆದ ಪೊಲೀಸರು title=
Photo Courtesy: ANI

ಕೃಷ್ಣ (ಆಂಧ್ರಪ್ರದೇಶ): ಕೃಷ್ಣ ಜಿಲ್ಲೆಯ ಜಮ್ಮವರಂ ಗ್ರಾಮದಲ್ಲಿ ಪಟಾಕಿ ಗೋಡೌನ್ ಮೇಲೆ ನಂದಿಗಮ ಪೊಲೀಸರು ಬುಧವಾರ ದಾಳಿ ನಡೆಸಿ ಅದರೊಳಗೆ ಸಂಗ್ರಹಿಸಲಾಗಿದ್ದ ಅಕ್ರಮ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.

ಗೊಡೌನ್‌ಗೆ ಬಂದ ನಂತರ, ನಂದಿಗಾಮ ಗ್ರಾಮೀಣ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್ ಅವರು ಗೋದಾಮನ್ನು ನಡೆಸಲು ಬೇಕಾದ ಅನುಮತಿಗಳು ಮತ್ತು ಪರವಾನಗಿಗಳನ್ನು ನೀಡುವಂತೆ ನಿರ್ವಹಣೆಯನ್ನು ಕೇಳಿದರು.

ಆದರೆ, ಗೊಡೌನ್‌ನಲ್ಲಿರುವ ಸಿಬ್ಬಂದಿ ಯಾವುದೇ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದು, ಕ್ರ್ಯಾಕರ್‌ಗಳನ್ನು ಸಂಗ್ರಹಿಸಲು ಅವರಿಗೆ ಅನುಮತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಗೋಡೌನ್‌ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಕ್ರ್ಯಾಕರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
 

Trending News