ನವದೆಹಲಿ: ಪಂಜಾಬ್ ಮತ್ತು ಮಹಾರಾಷ್ಟ್ರ (ಪಿಎಂಸಿ) ಬ್ಯಾಂಕಿನ ಅಮಾನತುಗೊಂಡ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಅವರನ್ನು ರೂ. 6,500 ಕೋಟಿ ವಂಚನೆ ಪ್ರಕರಣದ ವಿಚಾರವಾಗಿ ಪೊಲೀಸರು ಬಂಧಿಸಿದ್ದಾರೆ. ಪಿಎಮ್ಸಿಯ ಮಂಡಳಿಯ ಮಾಜಿ ಸದಸ್ಯರು ಮತ್ತು ಅದರ ಸಾಲಗಾರ ಸಂಸ್ಥೆ ಎಚ್ಡಿಐಎಲ್ನ ಹಿರಿಯ ಅಧಿಕಾರಿಗಳು ಹಣ ವರ್ಗಾವಣೆಯ ಆರೋಪವನ್ನು ಜಾರಿ ನಿರ್ದೇಶನಾಲಯ ಮಾಡಿದ ದಿನವೇ ಈ ಬಂಧನವಾಗಿದೆ.
ಈಗ ಜಾರಿ ನಿರ್ದೇಶನಾಲಯವು ಬ್ಯಾಂಕಿನ ಮಾಜಿ ಅಧ್ಯಕ್ಷರು ಮತ್ತು ಎಚ್ಡಿಐಎಲ್ನ ಪ್ರವರ್ತಕರಿಗೆ ಸಂಬಂಧಿಸಿ ಆಸ್ತಿಗಳನ್ನು ಮುಂಬೈ ಮತ್ತು ನೆರೆಯ ಪ್ರದೇಶಗಳಲ್ಲಿ ಆರು ಸ್ಥಳಗಳಲ್ಲಿ ಶೋಧ ನಡೆಸಿದೆ. ಈ ಪ್ರಕರಣದ ವಿಚಾರವಾಗಿ ಈಗ ಎಚ್ಡಿಐಎಲ್ನ ಹಿರಿಯ ಅಧಿಕಾರಿಗಳಾದ ರಾಕೇಶ್ ವಾಧವನ್ ಮತ್ತು ಸಾರಂಗ್ ವಾಧವನ್ ಅಕ್ಟೋಬರ್ 9 ರವರೆಗೆ ಪೊಲೀಸ್ ಲಾಕಪ್ನಲ್ಲಿದ್ದಾರೆ.
ಪಿಎಮ್ಸಿ ಬ್ಯಾಂಕ್ ತನ್ನ ಸಂಪೂರ್ಣ ಸಾಲದ ಶೇಕಡಾ 75 ರಷ್ಟು ಹಣವನ್ನು ಈಗ ದಿವಾಳಿಯಾಗಿರುವ ಎಚ್ಡಿಐಎಲ್ಗೆ ನೀಡಿತು. ಇಬ್ಬರು ಎಚ್ಡಿಐಎಲ್ ಪ್ರವರ್ತಕರು ಪಿಎಂಸಿಯಿಂದ ಪಡೆದ ಸಾಲಗಳನ್ನು ಮರೆಮಾಚಲು 21,000 ನಕಲಿ ಖಾತೆಗಳನ್ನು ರಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಿಯಲ್ ಎಸ್ಟೇಟ್ ಸಂಸ್ಥೆಯು ಸಾಲಗಳ ಮೇಲಿನ ಡೀಫಾಲ್ಟ್ ಅನ್ನು ಮುಂದುವರೆಸಿದೆ,ಆದರೆ ಪಿಎಂಸಿ ಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ಕಂಪನಿ ದಿವಾಳಿಯಾಗಿದ್ದರೂ ಕೂಡ ಸಹಕಾರಿ ಬ್ಯಾಂಕ್ ಸಾಲವನ್ನು ನೀಡುತ್ತಲೇ ಇತ್ತು ಎಂದು ತನಿಖಾಧಿಕಾರಿಗಳು ಕಳೆದ ವಾರ ತಿಳಿಸಿದ್ದರು.
ಈ ವಿಚಾರವಾಗಿ ಪಿಎಮ್ಸಿ ಬ್ಯಾಂಕ್ ಅಧಿಕಾರಿಗಳು 2008 ರಿಂದ ಆಗಸ್ಟ್ 2019 ರವರೆಗೆ ಸುಮಾರು ಒಂದು ದಶಕದಿಂದ ಆರ್ಬಿಐ ಅನ್ನು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಕಲಿ ಸಾಲದ ಖಾತೆಗಳನ್ನು ಬ್ಯಾಂಕಿನ ಪ್ರಮುಖ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಮೂದಿಸಲಾಗಿಲ್ಲ - ಇದು ರೂ. 2018 ರಲ್ಲಿ ಬಹಿರಂಗಗೊಂಡ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 14,000 ಕೋಟಿ ವಂಚನೆಯಲ್ಲಿನ ಪ್ರಮುಖ ಸಂಗತಿಯಾಗಿದೆ ಎಂದು ತಿಳಿದು ಬಂದಿದೆ.
ಈಗ ಪಿಎಂಸಿ ಪ್ರಕರಣವು ದೇಶದಲ್ಲಿ ಸಂಕಷ್ಟದಲ್ಲಿರುವ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಹೊಸ ಕಳವಳವನ್ನು ಹುಟ್ಟುಹಾಕಿದೆ, ಇದು ಸರ್ಕಾರಿ ಸಾಲಗಾರರ ಮೇಲೆ ಬಹು-ಶತಕೋಟಿ ಡಾಲರ್ ವಂಚನೆ, ಪ್ರಮುಖ ಮೂಲಸೌಕರ್ಯ ಸಾಲಗಾರರ ಕುಸಿತ, ಸರ್ಕಾರಿ ಬ್ಯಾಂಕುಗಳಲ್ಲಿ ಸಾಲದ ಸಮಸ್ಯೆಗಳು ಈಗ ನಿಜಕ್ಕೂ ಗಂಭೀರ ಅಂಶಗಳಾಗಿವೆ.
ಆರ್ಬಿಐ ಕಳೆದ ವಾರ ಒಂಬತ್ತು ಲಕ್ಷಕ್ಕೂ ಹೆಚ್ಚು ಠೇವಣಿದಾರರನ್ನು ಹೊಂದಿರುವ ಭಾರತದ ಅಗ್ರ ಐದು ಸಹಕಾರಿ ಸಾಲಗಾರರಲ್ಲಿ ಒಂದಾಗಿರುವ ಪಿಎಂಸಿಯ ಉಸ್ತುವಾರಿ ವಹಿಸಿಕೊಳ್ಳಲು ಮುಂದಾಯಿತು ಮತ್ತು ಸಾಲ ಅಕ್ರಮಗಳನ್ನು ಬಹಿರಂಗಪಡಿಸಿದ ನಂತರ ಜಾಯ್ ಥಾಮಸ್ ಮತ್ತು ಬ್ಯಾಂಕಿನ ಮಂಡಳಿಯನ್ನು ಅಮಾನತುಗೊಳಿಸಿತು.