ಪ್ರಧಾನಿ ಮೋದಿಗೆ ಹೆಂಡತಿ-ಮಕ್ಕಳಿಲ್ಲ, ಹಾಗಾಗಿ ಕುಟುಂಬದ ಮಹತ್ವದ ಅರಿವಿಲ್ಲ: ಶರದ್ ಪವಾರ್

ಮೋದಿಗೆ ಹೆಂಡತಿ, ಮಕ್ಕಳಿಲ್ಲ. ಹಾಗಾಗಿ ಒಂದು ಕುಟುಂಬ ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಮಗ ಮತ್ತು ಹೆಂಡತಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಅರಿವಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.

Last Updated : Apr 17, 2019, 04:04 PM IST
ಪ್ರಧಾನಿ ಮೋದಿಗೆ ಹೆಂಡತಿ-ಮಕ್ಕಳಿಲ್ಲ, ಹಾಗಾಗಿ ಕುಟುಂಬದ ಮಹತ್ವದ ಅರಿವಿಲ್ಲ: ಶರದ್ ಪವಾರ್  title=
Pic Courtesy: ANI

ಜಲ್ನಾ: ಪ್ರಧಾನಿ ನರೇಂದ್ರ ಮೋದಿಗೆ ಹೆಂಡತಿ-ಮಕ್ಕಳಿಲ್ಲ. ಹಾಗಾಗಿ ಕುಟುಂಬದ ಪ್ರಾಮುಖ್ಯತೆ ಅರ್ಥವಾಗುವುದಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಟೀಕಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಸೋಮವಾರ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಶರದ್ ಪವಾರ್, "ಮೋದಿಗೆ ಹೆಂಡತಿ, ಮಕ್ಕಳಿಲ್ಲ. ಹಾಗಾಗಿ ಒಂದು ಕುಟುಂಬ ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಮಗ ಮತ್ತು ಹೆಂಡತಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಅರಿವಿಲ್ಲ.  ಅದಕ್ಕಾಗಿಯೇ ಅವರು ಬೇರೇಯವರ ಮನೆಗಳಲ್ಲಿ ಇಣುಕಿ ನೋಡುತ್ತಾರೆ. ಮೋದಿ ಜೀ ಬೇರೆಯವರ ಮನೆಯೊಳಗೇ ಇಣುಕಿ ನೋಡುವುದು ಸರಿಯಲ್ಲ. ನಾನೂ ಕೂಡ ಸಾಕಷ್ಟು ಹೇಳಬಲ್ಲೆ. ಆದರೆ, ಅಂತಹ ಕೀಳುಮಟ್ಟಕ್ಕೆ ಇಳಿದು ನಾನು ಮಾತನಾಡುವುದಿಲ್ಲ" ಎಂದು ಶರದ್ ಪವಾರ್ ಹೇಳಿದ್ದಾರೆ.

ಪ್ರಧಾನಿ ಮೋದಿ ನನ್ನ ಬಗ್ಗೆ ಮಾತನಾಡುವ ಮೂಲಕ ಫ್ರೀ ಪಬ್ಲಿಸಿಟಿ ನೀಡುತ್ತಿದ್ದಾರೆ. "ಮೋದಿ ಜಿ ಯಾವಾಗಲೂ ಆ ವ್ಯಕ್ತಿ(ಪವಾರ್) ಬಗ್ಗೆ ಮಾತನಾಡುತ್ತಾರೆ ಎಂದರೆ, ಅವರಲ್ಲಿ ಏನೂ ವಿಶೇಷತೆ ಇದೆ. ಅಷ್ಟೇ ಅಲ್ಲ, ಪ್ರತಿ ಬಾರಿ ಮಾತನಾಡುವಾಗಲೂ ಪವಾರ್ ಒಳ್ಳೆಯ ವ್ಯಕ್ತಿ, ಆದರೆ ಅವರಿಗೆ ಕೌಟುಂಬಿಕ ಸಮಸ್ಯೆಗಳಿವೆ. ಏಕೆಂದರೆ ಅವರ ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆಯಿಲ್ಲ" ಎಂದು ಮೋದಿ ಹೇಳುತ್ತಾರೆ ಎಂದು ಪವಾರ್ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, "ನನ್ನ ಜವಾಬ್ದಾರಿಗಳೆಲ್ಲಾ ಕಳೆದಿದೆ. ಸದ್ಯ ನಾನು ಮತ್ತು ನನ ಮಗಳು ಮಾತ್ರ ಇದ್ದೇವೆ.. ಮಗಳಿಗೆ ಮದುವೆಯಾಗಿದೆ. ನಾನು ಅವರಿಗೆ(ಮೋದಿ) ಒಂದು ಪ್ರಶ್ನೆ ಕೇಳಬೇಕು, ನನ್ನ ಕುಟುಂಬದಲ್ಲಿ ಏನೇ ನಡೆದರೂ, ಅದರಿಂದ ಅವರಿಗೇನು ಲಾಭ? ಆದರೆ, ಬಳಿಕ ನನಗೆ ಹೆಂಡತಿ, ಮಗಳು, ಅಳಿಯ ಎಲ್ಲರೂ ಇದ್ದಾರೆ. ಆದರೆ ಮೋಡಿಗೆ ಯಾರೂ ಇಲ್ಲ ಎಂಬುದು ನನಗೆ ಅರ್ಥವಾಯಿತು" ಎಂದು ಪವಾರ್ ಲೇವಡಿ ಮಾಡಿದ್ದಾರೆ. 

Trending News