ನವದೆಹಲಿ: ಕಾಶಿ ವಿಶ್ವನಾಥನಿಂದ ಹಿಡಿದು ಶ್ರೀ ಕೇದಾರನಾಥದವರೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಶ್ರದ್ಧೆ, ನಂಬಿಕೆ ಯಾವುದರಿಂದಲೂ ಮರೆಯಾಗಿಲ್ಲ. ಅವರು ಇಂದು(ನ.5) ಮತ್ತೊಮ್ಮೆ ಉತ್ತರಾಖಂಡ್‌ನ ಪ್ರಸಿದ್ಧ ಯಾತ್ರಾಸ್ಥಳವಾದ ಕೇದಾರನಾಥ ಧಾಮಕ್ಕೆ (Narendra Modi Visit at Shri Kedarnath Dham on Govardhan Puja 2021) ಭೇಟಿ ನೀಡಲಿದ್ದಾರೆ.
ಆದಿ ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ
ಪ್ರಧಾನಿ ಮೋದಿಯವರು ಇಂದು ಬೆಳಗ್ಗೆ 8 ಗಂಟೆಗೆ ಕೇದಾರನಾಥ(Shri Kedarnath Dham)ಕ್ಕೆ ಭೇಟಿ ನೀಡಲಿದ್ದು, 8.35ರ ವೇಳೆಗೆ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ 9.40ರ ಸುಮಾರಿಗೆ ಶಂಕರಾಚಾರ್ಯರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿ ಕಾರ್ಯಾಲಯದ ಸೂಚನೆಯ ಮೇರೆಗೆ ಮೈಸೂರಿನ ಖ್ಯಾತ ಶಿಲ್ಪಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
ಕೇದಾರನಾಥದಲ್ಲಿಯೇ ಶಂಕರಾಚಾರ್ಯರು(Shri Adi Shankaracharya) ದೇಹತ್ಯಾಗ ಮಾಡಿದರು ಎಂಬ ನಂಬಿಕೆ ಇದೆ. ಹೀಗಾಗಿ ಪ್ರಧಾನಿ ಮೋದಿ ಶಂಕರಾಚಾರ್ಯರ ಸಮಾಧಿ ಸ್ಥಳವನ್ನು ಭಕ್ತರ ದರ್ಶನಕ್ಕೆ ಅನಾವರಣಗೊಳಿಸಲಿದ್ದಾರೆ. ಈ ವೇಳೆ ಕೇಂದ್ರ ಸಚಿವರು, ಸಂಸದರು ಮತ್ತು ಬಿಜೆಪಿಯ ಹಿರಿಯ ನಾಯಕರು ದೇಶದ 100ಕ್ಕೂ ಹೆಚ್ಚು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಮೂಲಗಳ ಪ್ರಕಾರ ಕೇಂದ್ರ ಸಚಿವರು, ಹಿರಿಯ ಬಿಜೆಪಿ ಸಂಸದರು ಮತ್ತು ಪಕ್ಷದ ಮುಖಂಡರು ಪ್ರಮುಖ ಸ್ಥಳಗಳಿಗೆ ಪ್ರಯಾಣಿಸಲಿದ್ದಾರೆ. ಬಹುತೇಕ ನಾಯಕರು ತಮ್ಮ ತವರು ರಾಜ್ಯಗಳಲ್ಲಿರುವ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಇಂದು ಬೆಳಗ್ಗೆ ಕೇದಾರನಾಥದಲ್ಲಿ ಪ್ರಧಾನಿ ಮೋದಿ 2 ಗಂಟೆಗಳ ಕಾಲ ಉಪಸ್ಥಿತರಿರುತ್ತಾರೆ. ಕೇದಾರನಾಥದಿಂದ ಪ್ರಧಾನಿಗಳ ಕಾರ್ಯಕ್ರಮದ ನೇರಪ್ರಸಾರಕ್ಕಾಗಿ ಈ ಎಲ್ಲಾ ಸ್ಥಳಗಳಲ್ಲಿ ಎಲ್‌ಇಡಿಗಳು ಮತ್ತು ದೊಡ್ಡ ಪರದೆಗಳನ್ನು ಹಾಕಲಾಗಿದೆ.
ಇದನ್ನೂ ಓದಿ: India-China : ಭಾರತೀಯರಿಂದ ಚೀನಾಗೆ 50 ಸಾವಿರ ಕೋಟಿ ನಷ್ಟ!
ಕೇದಾರಧಾಮದ ಚಿತ್ರವನ್ನೇ ಬದಲಾಯಿಸಿದ ದುರಂತ
ಕರ್ಮಯೋಗಿಗಳು ಶಿವನ ಕುರಿತು ತಪಸ್ಸು ಮಾಡಿದ್ದರು ಎಂದು ಹೇಳಲಾಗುತ್ತದೆ. ಅವರ ಕೃತಿಗಳಲ್ಲಿ ಇದರ ಬಗ್ಗೆ ಉಲ್ಲೇಖಗಳಿವೆ. ಕಾಶಿಯಿಂದ ಕೇದಾರನಾಥ(Kedarnath)ದವರೆಗಿನ ಶಿವಧಾಮಗಳ ಪುನರುಜ್ಜೀವನದಲ್ಲಿಯೂ ಪ್ರಧಾನಿ ಮೋದಿಯವರ ಶಿವನ ಮೇಲಿನ ನಂಬಿಕೆ ಕಂಡುಬರುತ್ತದೆ. ಸುಮಾರು 8 ವರ್ಷಗಳ ಹಿಂದೆ ಕೇದಾರನಾಥ ಧಾಮದಲ್ಲಿ ಭೀಕರ ದುರಂತವೊಂದು ಸಂಭವಿಸಿತ್ತು.ಇದು ಕೇದಾರನಾಥ ಧಾಮದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿತು.
ಪ್ರವೇಶಿಸಲಾಗದ ಪರ್ವತಗಳು, ಪ್ರತಿಕೂಲ ಭೌಗೋಳಿಕ ಪರಿಸ್ಥಿತಿಗಳು, ಕಷ್ಟಕರ ಹವಾಮಾನ ಹೀಗೆ ಉತ್ತರಾಖಂಡದಲ್ಲಿರುವ ಕೇದಾರನಾಥ ಧಾಮ(Shri Kedarnath Dham)ಕ್ಕೆ ಹಳೆಯ ವೈಭವ ಮರಳುವುದಿಲ್ಲವೆಂದು ಜನರು ಭಾವಿಸಿದ್ದರು. ಆದರೆ ಶಿವಭಕ್ತಿಯ ಸಂಕಲ್ಪ ಶಕ್ತಿಯು ಕನಸನ್ನು ನನಸಾಗಿಸಿತು. 2013ರ ದುರಂತದ ನಂತರ ಕೇದಾರನಾಥ ಧಾಮ ಸಂಪೂರ್ಣವಾಗಿ ಬದಲಾಗಿದೆ. ಇದೀಗ ಕೇದಾರನಾಥ ದೇಗುಲ, ಭಕ್ತರು ಹಾಗೂ ಅಲ್ಲಿ ನೆಲೆಸಿರುವ ಸೇವಾದಳದ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ಮೋದಿ 6 ಬಾರಿ ಕೇದಾರಧಾಮಕ್ಕೆ ಭೇಟಿ ನೀಡಿದ್ದಾರೆ
ಗೋವರ್ಧನ ಪೂಜೆಯ ದಿನವಾದ ಶುಕ್ರವಾರ ಕೇದಾರನಾಥ ಧಾಮ(Shri Kedarnath Dham)ದಲ್ಲಿ ಪ್ರಧಾನಿ ಮೋದಿ ಇರಲಿದ್ದಾರೆ. ಅವರಿಗೆ ಶ್ರೀ ಕೇದಾರನಾಥ ಧಾಮದ ಬಗ್ಗೆ ಅಪಾರ ಗೌರವ ಮತ್ತು ನಂಬಿಕೆ ಇದೆ. ಅವರು ಪ್ರಧಾನಿಯಾಗುವ ಮೊದಲು ಕೇದಾರನಾಥ ಧಾಮಕ್ಕೆ ಭೇಟಿ ನೀಡುದ್ದರು. ಪ್ರಧಾನಿಯಾದ ನಂತರ ಮೊದಲ ಅವಧಿಯಲ್ಲಿ ಅವರು 6 ಬಾರಿ ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ್ದರು. ಈ ಬಾರಿಯೂ ಪ್ರಧಾನಿ ಮೋದಿ ದೀಪಾವಳಿಯ ಒಂದು ದಿನದ ನಂತರ ಕೇದಾರಧಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಕೇದಾರನಾಥ ಧಾಮದ ಪುನರ್ ನಿರ್ಮಾಣದ ಮೊದಲ ಹಂತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ.
ಇದನ್ನೂ ಓದಿ: Flipkart Offer :Samsung ಪೋನ್ ಖರೀದಿಸಿ, ಇಷ್ಟವಾಗಿಲ್ಲ ಎಂದಾದರೆ ಸಂಪೂರ್ಣ ಹಣ ವಾಪಸ್ ಪಡೆಯಿರಿ
ಆದಿ ಶಂಕರಾಚಾರ್ಯರ ಸಮಾಧಿಯೂ ಸಿದ್ಧವಾಗಿದೆ
ಪ್ರಧಾನಿ ಮೋದಿ(Narendra Modi) ಉದ್ಘಾಟಿಸಲಿರುವ ಯೋಜನೆಗಳಲ್ಲಿ ಆದಿ ಶಂಕರಾಚಾರ್ಯರ ಸಮಾಧಿಯೂ ಸೇರಿದೆ. 2013ರ ದುರಂತದಲ್ಲಿ ಈ ಸಮಾಧಿ ನಾಶವಾಗಿತ್ತು. ಪುನರ್ನಿರ್ಮಾಣದ ನಂತರ ಆದಿ ಶಂಕರಾಚಾರ್ಯರ ಸಮಾಧಿಯ ಸ್ವರೂಪವು ಹೆಚ್ಚು ಭವ್ಯವಾಗಿರುತ್ತದೆ. ಈ ಯೋಜನೆಯನ್ನು ಸ್ವತಃ ಪ್ರಧಾನಿಯೇ ಪರಿಶೀಲಿಸುತ್ತಿದ್ದಾರೆ. ಇದಲ್ಲದೇ ಸರಸ್ವತಿ ಅಷ್ಟಪಥದಲ್ಲಿ ನಡೆಯುತ್ತಿರುವ ಯೋಜನೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಇದರ ಜೊತೆಗೆ ಈಗಾಗಲೇ ಪೂರ್ಣಗೊಂಡಿರುವ ಮಂದಾಕಿನಿ ತಡೆಗೋಡೆ ಅಷ್ಟಪಥ, ಸರಸ್ವತಿ ತಡೆಗೋಡೆ ಅಷ್ಟಪಥ, ಮಂದಾಕಿನಿ ನದಿಯ ಮೇಲೆ ತೀರ್ಥ ಪುರೋಹಿತ್ ಮನೆ ಮತ್ತು ಗರುಡ ಚಟ್ಟಿ ಸೇತುವೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
180 ಕೋಟಿ ರೂ. ವೆಚ್ಚದ ನೂತನ ಯೋಜನೆಗೆ ಶಂಕುಸ್ಥಾಪನೆ
ಇಂದು ಉತ್ತರಾಖಂಡಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿಯವರು 180 ಕೋಟಿ ರೂ. ವೆಚ್ಚದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಲಿದ್ದಾರೆ. ಸಂಗಮ್ ಘಾಟ್ ಪುನರ್ ಅಭಿವೃದ್ಧಿ, ಪ್ರಾಥಮಿಕ ಚಿಕಿತ್ಸೆ ಮತ್ತು ಪ್ರವಾಸಿ ಸೌಲಭ್ಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, 2 ಅತಿಥಿ ಗೃಹ, ಪೊಲೀಸ್ ಠಾಣೆ, ವಿಚಾರಣೆ ಕೇಂದ್ರ, ಮಂದಾಕಿನಿ ಅಷ್ಟಪಥ ಸಾಲು ನಿರ್ವಹಣೆ, ಮಳೆ ನಿರಾಶ್ರಿತರ ಕೇಂದ್ರ, ಸರಸ್ವತಿ ನಾಗರಿಕ ಸೌಕರ್ಯ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ