PM Kisan ಯೋಜನೆಯ 9ನೇ ಕಂತಿನ ಹಣ ಈ ದಿನ ರೈತರ ಖಾತೆಗೆ : ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 9 ನೇ ಕಂತನ್ನು ರೈತರ ಖಾತೆಗೆ ಆಗಸ್ಟ್ 9 ರಂದು 12:30 ಕ್ಕೆ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು MyGovIndia ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

Written by - Channabasava A Kashinakunti | Last Updated : Aug 7, 2021, 06:00 PM IST
  • ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 9 ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ
  • ಪ್ರಧಾನ ಮಂತ್ರಿ ಮೋದಿ 9 ನೇ ಕಂತನ್ನು ರೈತರ ಖಾತೆಗೆ ಆಗಸ್ಟ್ 9 ರಂದು 12:30 ಕ್ಕೆ ಬಿಡುಗಡೆ
  • ಕೇಂದ್ರ ಸರ್ಕಾರ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಆದಾಯ ಹೆಚ್ಚಿಸುವ ಸಲುವಾಗಿ ಈ ಯೋಜನೆ
PM Kisan ಯೋಜನೆಯ 9ನೇ ಕಂತಿನ ಹಣ ಈ ದಿನ ರೈತರ ಖಾತೆಗೆ : ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ ಪ್ರಧಾನಿ ಮೋದಿ title=

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 9 ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ. ಆದರೆ ಈಗ ಅದಕ್ಕಾಗಿ ಕಾಯುವ ಅಗತ್ಯವಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 9 ನೇ ಕಂತನ್ನು ರೈತರ ಖಾತೆಗೆ ಆಗಸ್ಟ್ 9 ರಂದು 12:30 ಕ್ಕೆ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು MyGovIndia ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

9 ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರು :

ಕೇಂದ್ರ ಸರ್ಕಾರವು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಈ ಯೋಜನೆ(PM Kisan Samman Nidhi Scheme)ಯ ಮೂಲಕ  2000 ರೂ. ಅಂದರೆ ವರ್ಷದಲ್ಲಿ 6000 ರೂ. ಮೂರು ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಇಲ್ಲಿಯವರೆಗೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 8 ಕಂತುಗಳ ಹಣ ರೈತರ ಖಾತೆಗೆ ಜಮಾ ಮಾಡಲಾಗಿದೆ. ಈಗ ಮುಂದಿನ ಅಂದರೆ 9 ನೇ ಕಂತಿನ ಹಣ ರೈತರ ಖಾತೆಗೆ ಬರಲಿದೆ. ಈ ಮೊದಲು 8 ನೇ ಕಂತನ್ನು ಮೇ 14 ರಂದು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : ತ್ರಿಪುರಾ ಸಿಎಂ ಬಿಬ್ಲಬ್ ದೇವ್ ಹತ್ಯೆಗೆ ಯತ್ನ: ಮೂವರ ಬಂಧನ

ನಿಮ್ಮ ಕಂತಿನ ಸ್ಟೇಟಸ್ ಪರಿಶೀಲಿಸಿ :

1. ನಿಮ್ಮ ಕಂತಿನ ಸ್ಟೇಟಸ್ ನೋಡಲು, ನೀವು ಮೊದಲು ವೆಬ್‌ಸೈಟ್‌ಗೆ ಹೋಗಿ.
2. ಇದರ ನಂತರ ಬಲಭಾಗದಲ್ಲಿರುವ ಫಾರ್ಮರ್ಸ್ ಕಾರ್ನರ್ ಮೇಲೆ ಕ್ಲಿಕ್ ಮಾಡಿ.
3. ಈಗ ಫಲಾನುಭವಿ ಸ್ಟೇಟಸ್ ಆಯ್ಕೆಯನ್ನು ಕ್ಲಿಕ್ ಮಾಡಿ.
4. ಈಗ ನಿಮ್ಮ ಮುಂದೆ ಹೊಸ ಪುಟ ತೆರೆಯುತ್ತದೆ.
5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ನೀವು ನಿಮ್ಮ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೀರಿ.

ಇದನ್ನೂ ಓದಿ : Shocking News: ಬ್ಲೂಟೂತ್ ಹೆಡ್‌ಫೋನ್‌ ಸ್ಫೋಟದಿಂದ ಯುವಕ ಸಾವು..!

ಯೋಜನೆಯ ಉದ್ದೇಶವೇನು?

ಈ ಯೋಜನೆಯ ಉದ್ದೇಶ ದೇಶದ ರೈತರ ಆದಾಯ(Formers Income)ವನ್ನು ಹೆಚ್ಚಿಸುವುದು ಮತ್ತು ಅವರಿಗೆ ನೇರವಾಗಿ ಆರ್ಥಿಕ ಸಹಾಯ ಮಾಡುವುದು. 9ನೇ ಕಂತಿಗೆ ಕಾಯುತ್ತಿರುವ ರೈತರಿಗೆ ಆಗಸ್ಟ್ ನಲ್ಲಿ ಮತ್ತೆ ಒಳ್ಳೆಯ ಸುದ್ದಿ ಸಿಗಲಿದೆ. ನೀವು ಕೂಡ ಇದಕ್ಕೆ ಅರ್ಜಿ ಸಲ್ಲಿಸಿದ್ದರೆ, ನೀವು ನಿಮ್ಮ ಹೆಸರನ್ನು ಈ ಪಟ್ಟಿಯಲ್ಲಿ ಪರಿಶೀಲಿಸಬಹುದು.

ಈ ರೈತರಿಗೆ ಲಾಭ ಸಿಗುವುದಿಲ್ಲ:

ಹೊಸ ನಿಯಮಗಳ ಪ್ರಕಾರ, ಸರ್ಕಾರಿ ನೌಕರರು(Govt Employee) ಅಥವಾ ಆದಾಯ ತೆರಿಗೆ ಪಾವತಿಸುವ ರೈತರು ಅರ್ಹರು ಎಂದು ಪರಿಗಣಿಸಲಾಗುವುದಿಲ್ಲ. ಇದರ ಹೊರತಾಗಿ, ವೈದ್ಯರು, ಎಂಜಿನಿಯರ್‌ಗಳು, ಸಿಎಗಳು ಮತ್ತು 10 ಸಾವಿರ ರೂ.ಗಳಿಗಿಂತ ಹೆಚ್ಚು ಪಿಂಚಣಿ ಪಡೆಯುವ ಉದ್ಯೋಗಿಗಳು ಕೂಡ ಈ ಯೋಜನೆಯಲ್ಲಿ ಸೇರಲು ಸಾಧ್ಯವಿಲ್ಲ.

ಇದನ್ನೂ ಓದಿ : Johnson and Johnson ಕಂಪನಿಯ Single Dose Vaccine ಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News