ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಕಳೆದ 10 ವಾರಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ದರ ಇಳಿಕೆಯಾಗುತ್ತಿದೆ. ಇದರಿಂದ ಸರ್ಕಾರದ ಆದಾಯಕ್ಕೆ ಹೊಡೆತ ಬೀಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಶಾಕ್ ನೀಡಿರುವ ರಾಜ್ಯ ಸರ್ಕಾರ ತೈಲ ಮಾರಾಟ ತೆರಿಗೆಯನ್ನು ಏರಿಕೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಬೇರೆಲ್ಲಾ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ 1 ರೂಪಾಯಿ 52 ಪೈಸೆ ಏರಿಕೆಯಾಗಿದ್ದರೆ ಮತ್ತು ಡೀಸೆಲ್ ಬೆಲೆಯಲ್ಲಿ 1 ರೂಪಾಯಿ 50 ಪೈಸೆ ಏರಿಕೆ ಕಂಡು ಬಂದಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 68.29 | 62.26 |
ಕೋಲ್ಕತ್ತಾ | 70.43 | 64.03 |
ಮುಂಬೈ | 73.95 | 65.14 |
ಚೆನ್ನೈ | 70.85 | 65.72 |
ಬೆಂಗಳೂರು | 70.53 | 64.30 |
ಹೈದರಾಬಾದ್ | 72.44 | 67.68 |
ತಿರುವನಂತಪುರಂ | 71.18 | 66.74 |
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ:
https://www.iocl.com/TotalProductList.aspx
https://www.goodreturns.in/diesel-price.html