ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರಾ ಕತ್ರಿನಾ ಕೈಫ್‌?! ನಟಿಯ ಸ್ಥಿತಿ ಕಂಡು ಬೆಚ್ಚಿಬಿದ್ದ ಫ್ಯಾನ್ಸ್!!‌

katrina kaif: ದೇಶಾದ್ಯಂತ ಶಾರದೀಯ ನವರಾತ್ರಿ ಹಬ್ಬ ಆರಂಭವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಮಾತೆ ದುರ್ಗೆಯನ್ನು ಪೂಜಿಸುವುದನ್ನು ಕಾಣಬಹುದು. ಇತ್ತೀಚೆಗೆ, ಮುಂಬೈನಲ್ಲಿ ಆಭರಣ ಬ್ರಾಂಡ್ ನವರಾತ್ರಿ ಆಚರಣೆಯನ್ನು ಆಯೋಜಿಸಿತ್ತು, ಇದರಲ್ಲಿ ಕತ್ರಿನಾ ಕೈಫ್, ಮಲೈಕಾ ಅರೋರಾ, ಶಿಲ್ಪಾ ಶೆಟ್ಟಿ, ಕೃತಿ ಸನೋನ್ ಮತ್ತು ಶ್ರದ್ಧಾ ಕಪೂರ್ ಭಾಗವಹಿಸಿದ್ದರು.

Written by - Savita M B | Last Updated : Oct 5, 2024, 02:17 PM IST
  • ಇತ್ತೀಚೆಗೆ ನಟಿ ಕತ್ರಿನಾ ಕೈಫ್ ಅವರ ತೋಳಿನಲ್ಲಿ ಕಪ್ಪು ಬೆಲ್ಟ್‌ ಕಾಣಿಸಿಕೊಂಡಿದೆ
  • ಅಭಿಮಾನಿಯೊಬ್ಬರು ಕತ್ರಿನಾಗೆ ಮಧುಮೇಹವಿದೆಯೇ? ಎಂದು ಕೇಳಿದ್ದಾರೆ..
 ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರಾ ಕತ್ರಿನಾ ಕೈಫ್‌?! ನಟಿಯ ಸ್ಥಿತಿ ಕಂಡು ಬೆಚ್ಚಿಬಿದ್ದ ಫ್ಯಾನ್ಸ್!!‌  title=

Bollywood Actress katrina kaif: ಇತ್ತೀಚೆಗೆ ನಟಿ ಕತ್ರಿನಾ ಕೈಫ್ ಅವರ ತೋಳಿನಲ್ಲಿ ಕಪ್ಪು ಬೆಲ್ಟ್‌ ಕಾಣಿಸಿಕೊಂಡಿದೆ. ಇದನ್ನು ನೋಡಿದ ಅಭಿಮಾನಿಗಳು ಬೇಸರಗೊಂಡಿದ್ದರು. ವಾಸ್ತವವಾಗಿ, ಕತ್ರಿನಾ ಕೈಫ್ ಅವರ ಬಲಗೈಯ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಪ್ಯಾಚ್ ಕಂಡುಬಂದಿದೆ, ಇದು ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಕೆಲವರು ಕತ್ರಿನಾ ಕೈಫ್ ಅವರ ನೋಟವನ್ನು ಹೊಗಳಿದರೆ, ನಟಿಯ ತೋಳಿನ ಮೇಲಿನ ಕಪ್ಪು ಬೆಲ್ಟ್‌ ನೋಡಿದ ಅನೇಕ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. 

 ಕತ್ರಿನಾ ಕೈಫ್ ಅವರ ತೋಳಿನ ಮೇಲೆ ಕಪ್ಪು ಬೆಲ್ಟ್‌ ಕಟ್ಟಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಕಾಮೆಂಟ್ ಮಾಡುವಾಗ, ಅಭಿಮಾನಿಯೊಬ್ಬರು ಕತ್ರಿನಾಗೆ ಮಧುಮೇಹವಿದೆಯೇ? ಎಂದು ಕೇಳಿದ್ದಾರೆ.. 

 
 
 
 

 
 
 
 
 
 
 
 
 
 
 

A post shared by Voompla (@voompla)

ಇದನ್ನೂ ಓದಿ-ಮಲ್ಲಿಕಾ ಶೆರಾವತ್‌ ರೂಂಗೆ ಎಂಟ್ರಿ ಕೊಟ್ಟಿದ್ದ ಆ ಸ್ಟಾರ್‌ ನಟ ಮಾಡಿದ್ದೇನು ಗೊತ್ತಾ? ನಟಿಯಿಂದಲೇ ಬಯಲಾಯ್ತು ಆ ರಾತ್ರಿಯ ಕರಾಳ ಸತ್ಯ!

ವರದಿಯ ಪ್ರಕಾರ, ಇದು ಮಧುಮೇಹ ಪ್ಯಾಚ್ ಆಗಿದೆ, ಇದನ್ನು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಲು ಕಟ್ಟಿಕೊಳ್ಳಲಾಗುತ್ತದೆ. ಇದನ್ನು ಹಾಕಿಕೊಂಡರೇ ಪದೇ ಪದೇ ಬೆರಳಿಗೆ ಚುಚ್ಚಿ ರಕ್ತ ಪರೀಕ್ಷೆ ಮಾಡುವ ಅಗತ್ಯವಿಲ್ಲ.

ಅಲ್ಲದೇ ಇದು 'ಅಲ್ಟ್ರಾಹ್ಯೂಮನ್' ನಂತಹ ಫಿಟ್‌ನೆಸ್ ಟ್ರ್ಯಾಕರ್ ಆಗಿರಬಹುದು ಎಂದು ಕೆಲವರು ಹೇಳುತ್ತಾರೆ, ಇದು ರಕ್ತದಲ್ಲಿನ ಸಕ್ಕರೆಯ ಜೊತೆಗೆ ಹೃದಯ ಬಡಿತ ಮತ್ತು ನಿದ್ರೆಯ ಮಾದರಿಯನ್ನು ಪತ್ತೆ ಮಾಡುತ್ತದೆ. ಆದರೆ ಈ ಬಗ್ಗೆ ಕತ್ರಿನಾ ಕೈಫ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕತ್ರಿನಾ ಕೈಫ್ ಸಂಪೂರ್ಣವಾಗಿ ಚೆನ್ನಾಗಿದ್ದಾರೆ ಎಂದು ಅವರ ಅಭಿಮಾನಿಗಳು ಭಾವಿಸುತ್ತಾರೆ.. ಏಕೆಂದರೇ ಕತ್ರಿನಾ ತನ್ನ ಫಿಟ್‌ನೆಸ್ ಬಗ್ಗೆ ಮತ್ತು ಆಹಾರದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುತ್ತಾರೆ.. 

ಇದನ್ನೂ ಓದಿ-ಈ ಸ್ಟಾರ್‌ ಹೀರೋಯಿನ್‌ ಅನ್ನು ಹುಚ್ಚರಂತೆ ಪ್ರೀತಿಸಿದ್ದರಂತೆ ಸೂಪರ್‌ಸ್ಟಾರ್‌ ರಜನಿಕಾಂತ್‌! ಮದುವೆ ಪ್ರಸ್ತಾಪಕ್ಕೆ ಹೋದಾಗ ಆಗಿದ್ದೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News