Aishwarya Rai abhishek bachchan divorce : ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಬಗ್ಗೆ ಇತ್ತೀಚಿನ ದಿನಗಳಲ್ಲಿ ಚರ್ಚೆಯಾಗುತ್ತಿದೆ. ಇದೇ ವೇಳೆ ಐಶ್ವರ್ಯಾ ಅವರ ಹಳೆಯ ಡೈರಿಯ ಕೆಲವು ಬರಹಗಳು ಲೀಕ್ ಆಗಿವೆ.. ಅದರಲ್ಲಿ ಮಾಜಿ ವಿಶ್ವಸುಂದರಿ.. ತನ್ನ ಸಂಗಾತಿಯ ಬಗ್ಗೆ ಬರೆದಿದ್ದಾರೆ...
ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಮಗ ಮತ್ತು ಸೊಸೆ ಡಿವೋರ್ಸ್ ವಿಚಾರ ಬಹಳ ದಿನಗಳಿಂದಲೂ ಚರ್ಚೆಯಲ್ಲಿದೆ.. ಆದ್ರೆ ಈ ಬಗ್ಗೆ ಬಚ್ಚನ್ ಕುಟುಂಬ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ.. ಐಶ್ವರ್ಯ ಮತ್ತು ಅಭಿಷೇಕ್ ಸಹ ಸುಮ್ಮನಿದ್ದಾರೆ..
ಇದೇ ವೇಳೆ ಐಶ್ವರ್ಯಾ ರೈ ಅವರ ಸ್ಲ್ಯಾಮ್ ಬುಕ್ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಇದರಲ್ಲಿ ಅವರು ತಮ್ಮ ಇಷ್ಟ-ಕಷ್ಟಗಳ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಎಂತಹ ಜನರಿಂದ ದೂರ ಉಳಿಯುತ್ತಾರೆ... ಯಾರನ್ನು ನಂಬುತ್ತಾರೆ.. ಯಾರನ್ನು ಕ್ಷಮಿಸುವುದಿಲ್ಲ ಅಂತ ಬರೆದುಕೊಂಡಿದ್ದಾರೆ..
ಐಶ್ವರ್ಯಾ ಡೈರಿಯ ಡೈರಿ ಪುಟದ ದಿನಾಂಕ ಯಾರಿಗೂ ತಿಳಿದಿಲ್ಲ. ತನ್ನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯಬಲ್ಲ ಆದರ್ಶ ಸಂಗಾತಿ ತನಗೆ ಬೇಕು ಎಂದು ತನ್ನ ಸಂಗಾತಿಯ ಬಗ್ಗೆಯೂ ಅದರಲ್ಲಿ ಬರೆದಿದ್ದರು ಎಂದು ಹೇಳಲಾಗುತ್ತಿದೆ..
ದುಃಖ ಮತ್ತು ನೋವಿನ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಐಶ್ವರ್ಯಾ ರೈ, ತನ್ನ ದುಃಖವನ್ನು ತನ್ನಲ್ಲಿಯೇ ಇಟ್ಟುಕೊಳ್ಳುತ್ತೇನೆ ಎಂದು ಬರೆದಿದ್ದಾರೆ. ಏಕೆಂದರೆ ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.. ಸಹಜವಾಗಿ, ಈ ಡೈರಿ ಪುಟಗಳು ಹಲವು ವರ್ಷಗಳಷ್ಟು ಹಳೆಯದಾದರೂ ಅವು ಇಂದಿಗೂ ನಿಜವಾಗಿರಬಹುದು..
ಏಕೆಂದರೆ ಇಂದಿಗೂ ಐಶ್ವರ್ಯಾ ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಲು ಇಷ್ಟಪಡುವುದಿಲ್ಲ. ಎಲ್ಲಾ ನೋವು, ನಲಿವಿನ ವಿಚಾರಗಳನ್ನು ತಮಗೆ ಮಾತ್ರ ಸೀಮಿತವಾಗಿಸಿಕೊಳ್ಳುತ್ತಾರೆ.. ಯಾವುದನ್ನೂ ಬಹಿರಂಗಪಡಿಸಲು ಐಶು ಇಷ್ಟಪಡುವುದಿಲ್ಲ.. ಸಧ್ಯ ವೈರಲ್ ಆಗಿರುವ ಪುಸ್ತಕದ ಪುಟ ಅವರ ಡೈರಿಯದ್ದಾ..? ಅಥವಾ ನಕಲಿಯಾ ಎಂಬ ವಿಚಾರ ತಿಳಿದುಬರಬೇಕಿದೆ..