ಸತತ ಇಳಿಕೆ ಕಂಡಿದ್ದ ಪೆಟ್ರೋಲ್-ಡೀಸೆಲ್‌ ದರದಲ್ಲಿ ಏರಿಕೆ!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ. ರಾಷ್ಟ್ರ ರಾಜಧಾನಿಯಲ್ಲಿ ಇಂದಿನ ತೈಲ ದರ ಎಷ್ಟಿದೆ ಎಂದು ತಿಳಿಯಿರಿ.

Last Updated : Jun 24, 2019, 08:34 AM IST
ಸತತ ಇಳಿಕೆ ಕಂಡಿದ್ದ ಪೆಟ್ರೋಲ್-ಡೀಸೆಲ್‌ ದರದಲ್ಲಿ ಏರಿಕೆ! title=

ನವದೆಹಲಿ: ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದ್ದು, ಸತತ ಇಳಿಕೆ ಕಂಡಿದ್ದ ಪೆಟ್ರೋಲ್-ಡೀಸೆಲ್‌ ದರದಲ್ಲಿ ಏರಿಕೆ ಕಂಡು ಬಂದಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 70.05 ರೂ., ದೆಹಲಿಯಲ್ಲಿ ಡೀಸೆಲ್ ಬೆಲೆ 63.90 ರೂ. ಇದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 70.05 63.90
ಕೊಲ್ಕತ್ತಾ 72.31 65.82
ಮುಂಬೈ 75.75 66.99
ಚೆನ್ನೈ 72.77 67.59
ಬೆಂಗಳೂರು 72.46 66.09
ಹೈದರಾಬಾದ್ 74.45 69.64
ತಿರುವನಂತಪುರಂ 73.30 68.76

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News