ನವದೆಹಲಿ: ಇಂಧನ ಬೆಲೆ ಏರಿಕೆ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲೇ ಕಳೆದ ಮೂರು ವಾರಗಳಿಂದ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುತ್ತಿರುವುದು ಗ್ರಾಹಕರಿಗೆ ಅಲ್ಪ ರಿಲೀಫ್ ಸಿಕ್ಕಂತಾಗಿದೆ.
ಇಂದು(ನವೆಂಬರ್ 9) ಪೆಟ್ರೋಲ್ ದರಲ್ಲಿ 15 ಪೈಸೆಯಷ್ಟು ಇಳಿಕೆಯಾಗಿದ್ದು, ಡೀಸೆಲ್ ದರದಲ್ಲಿ ಕೂಡ 15 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 78.06ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ 72.74ಕ್ಕೆ ಇಳಿಕೆಯಾಗಿದೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 78.68 ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ 73.125 ರೂಗೆ ಇಳಿಕೆಯಾಗಿದೆ.
ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ಪೆಟ್ರೋಲ್ ದರದಲ್ಲಿ 15ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 83.57 ರೂಗಳಷ್ಟಿದ್ದು, ಡೀಸೆಲ್ ದರ ಕೂಡ 16 ಪೈಸೆಯಷ್ಟು ಕಡಿಮೆಯಾಗಿ ಪ್ರತೀ ಲೀಟರ್ ಡೀಸೆಲ್ ದರ 76.22ಕ್ಕೆ ಇಳಿಕೆಯಾಗಿದೆ.
ಚೆನ್ನೈನಲ್ಲಿ ಪೆಟ್ರೋಲ್ ಲೀಟರ್‌ಗೆ 81.08 ಮತ್ತು ಡೀಸೆಲ್‌ಗೆ 76.89 ರೂ.ಗಳಷ್ಟಿದ್ದು, ಸತತ 35 ಮತ್ತು 15 ಪೈಸೆ ಇಳಿಕೆಯಾಗಿದ್ದರೆ, ಕೋಲ್ಕತಾದಲ್ಲಿ 35 ಪೈಸೆ ಇಳಿಕೆಯಾಗಿರುವ ಪೆಟ್ರೋಲ್ 79.98 ರೂ. ಮತ್ತು ಡೀಸೆಲ್ 15 ಪೈಸೆ ಕಡಿತಗೊಂಡು 74.60 ರೂ.ಗೆ ಮಾರಾಟವಾಗುತ್ತಿದೆ.
ಕಳೆದ 10 ದಿನಗಳಲ್ಲಿ ಇದ್ದ ಪೆಟ್ರೋಲ್ ಬೆಲೆ
ನಿಮ್ಮ ಸ್ಥಳದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಎಂದು ತಿಳಿಯಲು ಈ ಕೆಳಗಿನಂತೆ ಎಸ್ಎಂಎಸ್ ಮಾಡಿ