ನವದೆಹಲಿ: ಆನ್‍ಲೈನ್ ಪೀಠೋಪಕರಣ ಮತ್ತು ಗೃಹಾಲಂಕಾರಗಳ ಕಂಪನಿ ಪೆಪ್ಪರ್‌ಫ್ರೈನ ಸಹ-ಸಂಸ್ಥಾಪಕ, ಸಿಇಓ ಅಂಬರೀಶ್ ಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಲಡಾಕ್‍ಗೆ ಬೈಕ್‍ನಲ್ಲಿ ತೆರಳಿದ್ದ ಅವರು ಲೇಹ್‍ನಲ್ಲಿ ವಿಧಿವಶರಾಗಿದ್ದಾರೆ. 51 ವರ್ಷದ ಅಂಬರೀಶ್ ಅವರು ಆಗಸ್ಟ್ 7ರಂದು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಮಡಿದ್ದರು.
ಪೆಪ್ಪರ್‌ಫ್ರೈ ಕಂಪನಿಯ 2ನೇ ಸಹ-ಸಂಸ್ಥಾಪಕ ಆಶಿಶ್ ಷಾ ಅವರು ಟ್ವಿಟರ್‍ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ‘ನನ್ನ ಸ್ನೇಹಿತ, ಮಾರ್ಗದರ್ಶಕ ಮತ್ತು ಸಹೋದರ ಅಂಬರೀಶ್ ಮೂರ್ತಿ ಇನ್ನಿಲ್ಲವೆಂದು ತಿಳಿಸಲು ನನಗೆ ತುಂಬಾ ದುಃಖವಾಗುತ್ತಿದೆ. ಅವರು ನಿನ್ನೆ(ಜುಲೈ 7) ರಾತ್ರಿ ಲೇಹ್‍ನಲ್ಲಿ ಹೃದಯಾಘಾತದಿಂದ ನಿಧನರಾದರು. ದಯವಿಟ್ಟು ಅವರಿಗೆ ಶಾಂತಿ ಸಿಗಲೆಂದು ಮತ್ತು ಕುಟುಂಬಕ್ಕೆ ದುಃಖ ತಡೆದುಕೊಳ್ಳಲು ಶಕ್ತಿ ಸಿಗಲೆಂದು ಪ್ರಾರ್ಥಿಸಿ’ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಸಿಹಿಸುದ್ದಿ..! ಈ ಅದ್ಭುತ ಅವಕಾಶವನ್ನು ಕಳೆದುಕೊಳ್ಳಬೇಡಿ..
ಬೈಕ್ ರೈಡಿಂಗ್ ಬಗ್ಗೆ ವಿಶೇಷ ಉತ್ಸಾಹ ಹೊಂದಿದ್ದ ಅಂಬರೀಶ್ ಮೂರ್ತಿ ಮುಂಬೈನಿಂದ ಲೇಹ್‍ಗೆ ಪ್ರವಾಸ ಕೈಗೊಂಡಿದ್ದರು. ಕಳೆದ ರಾತ್ರಿ ಲೇಹ್‍ನಲ್ಲಿ ಅವರಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೂರ್ತಿಯವರು 2011ರಲ್ಲಿ ಗೆಳೆಯನೊಂದಿಗೆ ಸೇರಿ ಪೆಪ್ಪರ್ ಫ್ರೈ ಸಂಸ್ಥೆಯನ್ನು ಸ್ಥಾಪಿಸಿದ್ದರು ಮತ್ತು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿದ್ದರು.
Extremely devastated to inform that my friend, mentor, brother, soulmate @AmbareeshMurty is no more. Lost him yesterday night to a cardiac arrest at Leh. Please pray for him and for strength to his family and near ones. 🙏
— Ashish Shah (@TweetShah) August 8, 2023
ಅಂಬರೀಶ್ ಮೂರ್ತಿ ನಿಧನಕ್ಕೆ ಅನೇಕ ಗಣ್ಯರು, ಕೈಗಾರಿಕೋದ್ಯಮಿಗಳು ಮತ್ತು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಮೂರ್ತಿಯವರೊಂದಿಗಿನ ತಮ್ಮ ಅಚ್ಚುಮೆಚ್ಚಿನ ನೆನಪುಗಳನ್ನು ಪೋಸ್ಟ್ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಎರಡನೇ ಹೆಂಡತಿಗೆ ಹಿಂದು ಕಾನೂನಿನಲ್ಲಿ ಗಂಡನ ಆಸ್ತಿಯಲ್ಲಿ ಪಾಲು ಪಡೆಯಲು ಅವಕಾಶ ಇದೆಯೇ?
‘ಮೂರ್ತಿಯವರ ನಿಧನ ಸುದ್ದಿ ತಿಳಿದು ನನಗೆ ತುಂಬಾ ದುಃಖವಾಗಿದೆ. ಅವರು ನನ್ನ 2ನೇ ಬಾಸ್ ಮತ್ತು ಉತ್ತಮ ಮಾರ್ಗದರ್ಶಕರಾಗಿದ್ದರು. ನಾನು ಅವರಿಗೆ 2 ದಿನಗಳ ಹಿಂದಷ್ಟೇ ಸಂದೇಶ ಕಳುಹಿಸಿದ್ದೆ. ಅವರು ಚೆನ್ನಾಗಿಯೇ ಇದ್ದರು’ ಎಂದು ಕಲ್ಪೇಶ್ ತೇಲಿ ಟ್ವೀಟ್ ಮಾಡಿದ್ದಾರೆ. ‘ಇದು ಅತ್ಯಂತ ದುಃಖದ ವಿಷಯ. ದೇವರು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಶಕ್ತಿ ನೀಡಲಿ’ ಎಂದು ಮತ್ತೊಬ್ಬರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.