ಮೇಕ್ ಇನ್ ಇಂಡಿಯಾದಲ್ಲಿ ಅಂಬೇಡ್ಕರ್ ದೃಷ್ಟಿಕೋನ ನಮಗೆ ಸ್ಫೂರ್ತಿ:'ಮನ್ ಕಿ ಬಾತ್'ನಲ್ಲಿ ಮೋದಿ

ಇತ್ತೀಚೆಗೆ ಹಲವರು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅಪಹಾಸ್ಯ ಮಾಡಲು ಪ್ರಯತ್ನಿಸಿದ್ದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಖಂಡಿಸಿದ್ದಾರೆ.  

Last Updated : Mar 25, 2018, 03:14 PM IST
ಮೇಕ್ ಇನ್ ಇಂಡಿಯಾದಲ್ಲಿ ಅಂಬೇಡ್ಕರ್ ದೃಷ್ಟಿಕೋನ ನಮಗೆ ಸ್ಫೂರ್ತಿ:'ಮನ್ ಕಿ ಬಾತ್'ನಲ್ಲಿ ಮೋದಿ title=

ನವದೆಹಲಿ: ಇತ್ತೀಚೆಗೆ ಹಲವರು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅಪಹಾಸ್ಯ ಮಾಡಲು ಪ್ರಯತ್ನಿಸಿದ್ದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಖಂಡಿಸಿದ್ದಾರೆ.

ಇಂದು 42ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಯಶಸ್ಸು ಗಳಿಸಲು ಆತ ಶ್ರೀಮಂತ ಕುಟುಂಬದಲ್ಲಿ ಹುಟ್ಟುಬೇಕೆಂಬ ಅನಿವಾರ್ಯವೇನಿಲ್ಲ ಎಂಬುದನ್ನು ಅಂಬೇಡ್ಕರ್ ನಮಗೆ ತೋರಿಸಿಕೊಟ್ಟರು. ಹಾಗಾಗಿ, ಭಾರತದಲ್ಲಿ ಬಡ ಕುಟುಂಬಗಳಲ್ಲಿ ಹುಟ್ಟಿದವರೂ ಸಹ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಧೈರ್ಯ ಮಾಡುತ್ತಿದ್ದಾರೆ. ಇಂದು ಮೇಕ್ ಇನ್ ಇಂಡಿಯಾ ಉದ್ದೇಶದಲ್ಲಿ ಅಂಬೇಡ್ಕರ್ ಅವರ ದೃಷ್ಟಿ ನಮಗೆ ಸ್ಫೂರ್ತಿಯಾಗಿದೆ. ಏ.14 ಅಂಬೇಡ್ಕರ್ ಅವರ ಜನ್ಮ ದಿನ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಮ ಸ್ವರಾಜ್ ಅಭಿಯಾನ ಹಮ್ಮಿಕೊಂಡಿದ್ದು ಅಂಬೇಡ್ಕರ್ ಅವರನ್ನು ಏ.14 ರಿಂದ ಮೇ. 5 ರವರೆಗೂ ಸ್ಮರಿಸಲಾಗುವುದು ಎಂದು ಪ್ರಧಾನಿ ಹೇಳಿದರು.

ರೈತರು ಮತ್ತು ಕೃಷಿ ಭಾರತದ ಆರ್ಥಿಕತೆಯ ದೊಡ್ಡ ಭಾಗವಾಗಿದೆ. ಎಂಎಸ್'ಪಿ ಕುರಿತಂತೆ ಸಾಕಷ್ಟು ರೈತರು ನನಗೆ ಪತ್ರಗಳನ್ನು ಬರೆದಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ರೈತರಿಗೆ 1.5 ರಷ್ಟು ಎಂಎಸ್ಪಿ ನೀಡಲು ನಿರ್ಧರಿಸಿದ್ದೇನೆ. ಕಾರ್ಮಿಕರ ವೆಚ್ಚ, ಕೃಷಿಗೆ ಬಳಸಿದ ಹಣ ಹಾಗೂ ಭೂಮಿಯ ವೆಚ್ಚ ಎಲ್ಲವನ್ನೂ ಪರಿಗಣಿಸಿ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಹಳ್ಳಿಗಳಲ್ಲಿರುವ ಸಗಟು ಮಾರುಕಟ್ಟೆಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದ ಮೋದಿ, ರೈತರ ಕಲ್ಯಾಣಕ್ಕಾಗಿ ದುಡಿದ  ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ, ರಾಮ್ ಮನೋಹರ್ ಲೋಹಿಯಾ ಅವರ ಕೊಡುಗೆಗಳನ್ನು ಸ್ಮರಣಿಸಿದ್ದಾರೆ. 

ರಾಮನವಮಿ ಶುಭಾಷಯ ಕೋರಿದ ಪ್ರಧಾನಿ
'ಮನ್ ಕಿ ಬಾತ್' ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಿ ನರೆದ್ರ ಮೋದಿ ಅವರು ದೇಶದ ಜನತೆಗೆ ಶ್ರೀರಾಮನವಮಿಯ ಶುಭಾಷಯ ಕೋರುತ್ತಾ, ಮಹಾತ್ಮ ಗಾಂಧಿಯವರ ಜೀವನದಲ್ಲಿ ರಾಮನ ಶಕ್ತಿಯಿತ್ತು. ವಿಶ್ವ ನೋಡಿದ ರೀತಿಯಲ್ಲಿ ಭಾರತ ಬದಲಾಗಿದೆ. ಇದೀಗ ಭಾರತವನ್ನು ಇಡೀ ವಿಶ್ವ ಗೌರವದಿಂದ ನೋಡುತ್ತಿದೆ. ರಾಮ ಮತ್ತು ರಾಮಾಯಣ ಆಷಿಯಾನ್ ರಾಷ್ಟ್ರಗಳಿಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.

Trending News