ನಾಳೆ ಭಾರತಕ್ಕೆ ಮರಳಲಿರುವ ಪೈಲೆಟ್ ಅಭಿನಂದನ್; ಹರ್ಷ ವ್ಯಕ್ತಪಡಿಸಿದ ಟ್ವಿಟ್ಟಿಗರು

ಸದ್ಯ ಪಾಕ್ ವಶದಲ್ಲಿರುವ ಭಾರತೀಯ ವಾಯು ಸೇನೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶುಕ್ರವಾರ ವಾಘಾ ಗಡಿ ಮೂಲಕ ಪಾಕ್ ಬಿಡುಗಡೆ ಮಾಡಲಿದೆ. 

Last Updated : Feb 28, 2019, 06:45 PM IST
ನಾಳೆ ಭಾರತಕ್ಕೆ ಮರಳಲಿರುವ ಪೈಲೆಟ್ ಅಭಿನಂದನ್; ಹರ್ಷ ವ್ಯಕ್ತಪಡಿಸಿದ ಟ್ವಿಟ್ಟಿಗರು title=
Photo Courtesy: IANS

ನವದೆಹಲಿ: ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸುತ್ತಿದ್ದಂತೆಯೇ ಟ್ವಿಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

ಭಾರತೀಯ ಪೈಲೆಟ್ ಅಭಿನಂದನ್ ಬಿಡುಗಡೆಗೆ ಟ್ವಿಟ್ಟರ್ ಮೂಲಕ #BringBackAbhinandan ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ನಡೆಸಿ, ಕೇಂದ್ರ ಸರ್ಕಾರದ ಮೇಲೆ ಜನತೆ ತೀವ್ರ ಒತ್ತಡ ಹೇರಿದ್ದರು. ಅಲ್ಲದೆ, ಭಾರತ ಕೂಡ ಪಾಕಿಸ್ತಾನದ ಮಾತುಕತೆ ಡೀಲ್'ಗೆ ಮಣಿಯದೆ ದಾಳಿಯ ಎಚ್ಚರಿಕೆ ನೀಡಿತ್ತು. ಇದಕ್ಕೆ ಹೆದರಿದ ಪಾಕ್ ಸರ್ಕಾರ ನಾಳೆ ಅಭಿನಂದನ್ ರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಭಾರತದ ಈ ಗೆಲುವನ್ನು ಟ್ವಿಟ್ಟಿಗರು ಕೊಂಡಾಡಿದ್ದು, ಇದು ಭಾರತಕ್ಕೆ ಸಿಕ್ಕ ಜಯ, ಯುದ್ಧ ಭೀತಿಯಿಂದಾಗಿ ಪಾಕಿಸ್ತಾನ ಶರಣಾಗಿದೆ ಎಂದಿದ್ದಾರೆ. 

ಸದ್ಯ ಪಾಕ್ ವಶದಲ್ಲಿರುವ ಭಾರತೀಯ ವಾಯು ಸೇನೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶುಕ್ರವಾರ ವಾಘಾ ಗಡಿ ಮೂಲಕ ಪಾಕ್ ಬಿಡುಗಡೆ ಮಾಡಲಿದೆ. 

Trending News