ತಿಹಾರ್‌ ಜೈಲಿನಲ್ಲಿ ಪಿ.ಚಿದಂಬರಂ 74 ನೇ ಹುಟ್ಟುಹಬ್ಬ; ಟ್ವಿಟರ್‌ನಲ್ಲಿ ಅಭಿನಂದನೆ

#HBDPChidambaram ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

Last Updated : Sep 16, 2019, 11:17 AM IST
ತಿಹಾರ್‌ ಜೈಲಿನಲ್ಲಿ ಪಿ.ಚಿದಂಬರಂ 74 ನೇ ಹುಟ್ಟುಹಬ್ಬ; ಟ್ವಿಟರ್‌ನಲ್ಲಿ ಅಭಿನಂದನೆ  title=

ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ (P. Chidambaram) ಇಂದು ತಮ್ಮ 74 ನೇ ಹುಟ್ಟುಹಬ್ಬವನ್ನು ತಿಹಾರ್ ಜೈಲಿನಲ್ಲಿ ಆಚರಿಸಲಿದ್ದಾರೆ. ಚಿದಂಬರಂ, ಕಾನೂನಾತ್ಮಕವಾಗಿ ಹೊರಬರಲು ಪ್ರಯತ್ನಿಸಿದರಾದರೂ ಜಾಮೀನು ಪಡೆಯಲು ವಿಫಲರಾಗಿದ್ದಾರೆ. ಅದೇ ಸಮಯದಲ್ಲಿ, ಟ್ವಿಟರ್‌ನಲ್ಲಿ ಪಿ.ಚಿದಂಬರಂ ಅವರ ಜನ್ಮದಿನದ ಬಗ್ಗೆ ಚರ್ಚಿಸಲಾಗುತ್ತಿದೆ. #HBDPChidambaram ಎಂಬ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಚಿದಂಬರಂ ಬೆಂಬಲಿಗರು ಮತ್ತು ವಿರೋಧಿಗಳು ಇಬ್ಬರೂ ಟ್ವಿಟರ್‌ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ.

ಮಾಜಿ ಕೇಂದ್ರ ಸಚಿವರು 1945 ರಲ್ಲಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕನಡುಕಥನ್‌ನಲ್ಲಿ ಜನಿಸಿದರು. ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸೆಪ್ಟೆಂಬರ್ 19 ರವರೆಗೆ ಚಿದಂಬರಂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಅವರ ಜಾಮೀನು ಅರ್ಜಿ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಸೆಪ್ಟೆಂಬರ್ 23 ರಂದು ವಿಚಾರಣೆ ನಡೆಯಲಿದೆ. 

ಪಿ.ಚಿದಂಬರಂ ಅವರ ಜನ್ಮದಿನಕ್ಕೆ ಟ್ವಿಟರ್‌ನಲ್ಲಿ ಅಭಿನಂದನೆ:
ಏತನ್ಮಧ್ಯೆ, ಪಿ.ಚಿದಂಬರಂ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. ಚಿದಂಬರಂ ಬೆಂಬಲಿಗರು ಮತ್ತು ವಿರೋಧಿಗಳು ಇಬ್ಬರೂ ಟ್ವೀಟ್ ಮಾಡುತ್ತಿದ್ದಾರೆ. ಬೆಂಬಲಿಗರು ಚಿದಂಬರಂ ಅವರನ್ನು ಮಹಾನ್ ನಾಯಕ ಎಂದು ಕರೆಯುತ್ತಿದ್ದರೆ, ವಿರೋಧಿಗಳು ಅವರನ್ನು ಕೆಣಕುತ್ತಿದ್ದಾರೆ. ಚಿದಂಬರಂ ಅವರ ಜನ್ಮದಿನದಂದು ಅಭಿನಂದಿಸುವವರಲ್ಲಿ ಒಬ್ಬರಾಗಿರುವ ಸಂಸದ ಮಾನಿಕಾ ಟ್ಯಾಗೋರ್ ಅವರು ಮೊದಲ ಬಾರಿಗೆ ಚಿದಂಬರಂಗೆ ಮತ ಚಲಾಯಿಸಿದ್ದಾರೆ ಎಂದು ಬರೆದಿದ್ದಾರೆ.

#HBDPChidambaram ಪಿ.ಚಿದಂಬರಂ ಅವರಿಗೆ 74 ವರ್ಷ ತುಂಬಿದೆ. ಮೊದಲ ಬಾರಿಗೆ ಮತದಾರನಾಗಿ ನಾನು ಅವರಿಗೆ ಮತ ಹಾಕಿದ್ದೇನೆ! ಭಾರತದ ಆರ್ಥಿಕ ಪ್ರಗತಿಯ ಪ್ರಯಾಣದಲ್ಲಿ ತಮಿಳಿಯನ್ ವ್ಯಕ್ತಿಯೊಬ್ಬರನ್ನು ದೆಹಲಿ ಮತ್ತು ವಿಶ್ವಾದ್ಯಂತ ಹೆಮ್ಮೆ ಪಡುವ ವ್ಯಕ್ತಿಯಂತೆ ನೋಡಿದೆ! ಆದರೆ ಇಂದು ಅವರು ಅಮಿತ್ ಷಾ ಅವರ ದ್ವೇಷದ ರಾಜಕಾರಣದಿಂದಾಗಿ ತಿಹಾರ್ ಜೈಲಿನಲ್ಲಿದ್ದಾರೆ. ನನ್ನ ಆಲೋಚನೆಗಳು ಅವರೊಂದಿಗೆ ಇವೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಚಿದಂಬರಂ ಜನ್ಮದಿನದ ಪ್ರಯುಕ್ತ ಅವರ ಪುತ್ರ ಕಾರ್ತಿ ಚಿದಂಬರಂ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಂದೆಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸುವುದರ ಹೊರತಾಗಿ, ಕಾರ್ತಿ ಚಿದಂಬರಂ ಅವರು ಮೋದಿ ಸರ್ಕಾರದ ವಿಷಯಗಳ ಮೇಲೆ ದಾಳಿ ನಡೆಸಿದ್ದಾರೆ.

ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 21 ರಂದು ನಡೆದ ನಾಟಕೀಯ ಘಟನೆಯ ನಂತರ ಮಾಜಿ ವಿತ್ತ ಸಚಿವ ಚಿದಂಬರಂರನ್ನು ಬಂಧಿಸಲಾಯಿತು. ನ್ಯಾಯಾಲಯವು ಅವರನ್ನು ಸೆಪ್ಟೆಂಬರ್ 5 ರಂದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. 

ಐಎನ್‌ಎಕ್ಸ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಅವರ ಶರಣಾಗತಿ ಅರ್ಜಿಯನ್ನು ಅಮಾನ್ಯಗೊಳಿಸಿದೆ. ತನಿಖಾಧಿಕಾರಿಗಳು ಅವರನ್ನು ಬಂಧಿಸಲು ಬಯಸದಿದ್ದರೆ, ಶರಣಾಗತಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಐಎನ್ಎಕ್ಸ್ ಮನಿ ಲಾಂಡರಿಂಗ್ ಅನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಲ್ಲಿ (ಎಫ್‌ಐಪಿಬಿ) ಅಕ್ರಮಗಳ ಮೂಲಕ 2007 ರಲ್ಲಿ 305 ಕೋಟಿ ರೂ.ಗಳ ವಿದೇಶಿ ಹಣವನ್ನು ಸ್ವೀಕರಿಸಲು ಐಎನ್‌ಎಕ್ಸ್ ಮೀಡಿಯಾ ಗ್ರೂಪ್‌ಗೆ ಅನುಮೋದನೆ ನೀಡಿದೆ ಎಂದು ಆರೋಪಿಸಿ ಸಿಬಿಐ 15 ಮೇ 2017 ರಂದು ಎಫ್‌ಐಆರ್ ದಾಖಲಿಸಿತ್ತು. ಈ ಸಂದರ್ಭದಲ್ಲಿ ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದರು. 
 

Trending News