ಭಯೋತ್ಪಾದನಾ ಸಂಘಟನೆಗಳಿಗೆ ಸೇರುವ ಕಾಶ್ಮೀರಿಗಳ ಸಂಖ್ಯೆಯಲ್ಲಿ ಹೆಚ್ಚಳ : ಮೆಹಬೂಬ ಮುಫ್ತಿ

ಭಯೋತ್ಪಾದನೆಗೆ ಸೇರುತ್ತಿರುವವರ ಸಂಖ್ಯೆ ಗಣನೀಯ ಹೆಚ್ಚಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.

Last Updated : Feb 6, 2018, 06:23 PM IST
ಭಯೋತ್ಪಾದನಾ ಸಂಘಟನೆಗಳಿಗೆ ಸೇರುವ ಕಾಶ್ಮೀರಿಗಳ ಸಂಖ್ಯೆಯಲ್ಲಿ ಹೆಚ್ಚಳ : ಮೆಹಬೂಬ ಮುಫ್ತಿ title=
Pic : PTI

ಶ್ರೀನಗರ: ಸ್ಥಳೀಯ ಕಾಶ್ಮೀರಿ ಯುವಜನತೆ ಭಯೋತ್ಪಾದನೆಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬುದನ್ನು  ಒಪ್ಪಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಭಯೋತ್ಪಾದನೆಗೆ ಸೇರುತ್ತಿರುವವರ ಸಂಖ್ಯೆ ಗಣನೀಯ ಹೆಚ್ಚಾಗಿದೆ ಎಂದಿದ್ದಾರೆ. 

ಈ ಕುರಿತು ಮಂಗಳವಾರ ರಾಜ್ಯ ವಿಧಾನಸಭೆಗೆ ಲಿಖಿತ ಉತ್ತರ ನೀಡಿರುವ ಅವರು, 2015ರಲ್ಲಿ 66, 2016ರಲ್ಲಿ 88 ಇದ್ದ ಭಯೋತ್ಪಾದನೆಗೆ ಸೇರಿದ ಪುರುಷರ ಸಂಖ್ಯೆ 2017ರಲ್ಲಿ 126ಕ್ಕೆ ಏರಿದೆ ಎಂದು ತಿಳಿಸಿದ್ದಾರೆ. 

ಈ ಹಿಂದೆ ಭಯೋತ್ಪಾದನೆಗೆ ಸೇರುವವರನ್ನು ಮರಳಿ ಕರೆತರುವುದಾಗಿ ಮುಫ್ತಿ ಸರ್ಕಾರ ಪ್ರತಿಜ್ಞೆ ಮಾಡಿತ್ತು. ಅದರಂತೆ ಭಯೋತ್ಪಾದನೆ ನಿಗ್ರಹಕ್ಕಾಗಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದಿರುವ ಸರ್ಕಾರ, ಕಲ್ಲು-ತೂರಾಟ ಮಾಡುವವರ ವಿರುದ್ಧ ದಾಖಲಾಗಿರುವ ಎಫೈಆರ್ ಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.  

"ಸುಮಾರು 8,000 ದಿಂದ 9,000 ಯುವಜನರ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗಳನ್ನು ಹಿಂತೆಗೆದುಕೊಳ್ಳಲಾಗಿದೆ. 2016 ರಲ್ಲಿ ನಾವು ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಆದರೆ ಶಾಂತಿಗೆ ಭಂಗವಾದ (ಬುರ್ಹಾನ್ ವಾನಿ ಕೊಲೆಯಿಂದ) ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದ್ದೇವೆ" ಎಂದು ಅವರು ಹೇಳಿದ್ದಾರೆ. 

Trending News