ನ್ಯೂ ಪೆನ್ಷನ್ ಸ್ಕೀಮ್ (NPS) ಖಾತೆದಾರರಿಗೂ ಸಿಕ್ತು ಹೂಡಿಕೆಯ ಹಣ ಹಿಂಪಡೆಯುವ ಅವಕಾಶ

ಹೊಸ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್) ಭಾಗಶಃ ಹಿಂಪಡೆಯಲು ಅನುಮತಿ ನೀಡಲಾಗಿದೆ. ಸುಮಾರು 1.35 ಕೋಟಿ ಎನ್‌ಪಿಎಸ್ ಖಾತೆದಾರರು ಇದರ ಲಾಭ ಪಡೆಯಬಹುದಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಶುಕ್ರವಾರ ಎನ್‌ಪಿಎಸ್ ಖಾತೆದಾರರಿಗೆ ಕೊವಿಡ್ -19 ಸೋಂಕಿನ ಚಿಕಿತ್ಸೆಗಾಗಿ ತಮ್ಮ ಹೂಡಿಕೆಯ ಭಾಗಶಃ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗುವುದು ಎಂದು ಹೇಳಿದರು.

Last Updated : Apr 10, 2020, 03:35 PM IST
ನ್ಯೂ ಪೆನ್ಷನ್ ಸ್ಕೀಮ್ (NPS) ಖಾತೆದಾರರಿಗೂ ಸಿಕ್ತು ಹೂಡಿಕೆಯ ಹಣ ಹಿಂಪಡೆಯುವ ಅವಕಾಶ title=

ನವದೆಹಲಿ:ಹೆಚ್ಚುತ್ತಿರುವ ಕರೋನಾಪ್ರಕೋಪದ ಹಿನ್ನೆಲೆ ತೊಂದರೆ ಅನುಭವಿಸುತ್ತಿರುವ ಜನರಿಗೆ ಪರಿಹಾರ ನೀಡಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಎಲ್ಲಾ ಸರ್ಕಾರಿ ಸಂಸ್ಥೆಗಳು ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಯಾವುದೇ ರೀತಿಯ ಆರ್ಥಿಕ ತೊಂದರೆಯಾಗದಂತೆ ಕಾಳಜಿ ವಹಿಸುತ್ತಿವೆ. ಇದರ ಅಡಿಯಲ್ಲಿ, ಈ ಮೊದಲು ಪಿಎಫ್‌ ಖಾತೆಯಿಂದ ತಮ್ಮ ಹೂಡಿಕೆಯ ಹಣವನ್ನು ಹಿಂಪಡೆಯಲು ಅನುಮತಿ ನೀಡಲಾಗಿತ್ತು, ಈಗ ಹೊಸ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್) ಭಾಗಶಃ ಹೂಡಿಕೆಯನ್ನೂ ಸಹ ಹಿಂಪಡೆಯಲು ಅನುಮತಿ ನೀಡಲಾಗಿದೆ.

ಕೊವಿಡ್-19 ರ ಚಿಕಿತ್ಸಾ ವೆಚ್ಚಗಳಿಗಾಗಿ ಹಣ ನೀಡಲಾಗುವುದು
ಸುಮಾರು 1.35 ಕೋಟಿ ಎನ್‌ಪಿಎಸ್ ಖಾತೆದಾರರು ಇದರ ಲಾಭ ಪಡೆಯಬಹುದು. ಕೋವಿಡ್ -19 ರ ಚಿಕಿತ್ಸೆಗೆ ಸಂಬಂಧಿಸಿದ ವೆಚ್ಚಗಳಿಗಾಗಿ ಎನ್‌ಪಿಎಸ್ ಖಾತೆದಾರರಿಗೆ ತಮ್ಮ ಹೂಡಿಕೆಯ ಭಾಗಶಃ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗುವುದು ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಶುಕ್ರವಾರ ತಿಳಿಸಿದೆ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಪಿಎಫ್‌ಆರ್‌ಡಿಎ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿ ಎಲ್ಲಾ ಷೇರುದಾರರು ಮತ್ತು ಖಾತೆದಾರರನ್ನು ಉದ್ದೇಶಿಸಿ ಹೊರಡಿಸಿದ  ಸುತ್ತೋಲೆಯಲ್ಲಿ, “ಭಾರತ ಸರ್ಕಾರ ಕೋವಿಡ್ -19 ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಕೋವಿಡ್ -19 ಅನ್ನು ಗಂಭೀರ ರೋಗವೆಂದು ಘೋಷಿಸಲು ನಿರ್ಧರಿಸಲಾಗಿದ್ದು, ಇದೊಂದು ಮಾರಕ ಕಾಯಿಲೆಯಾಗಿದೆ. ಈ ಹಿನ್ನೆಲೆ ಎನ್‌ಪಿಎಸ್, ತನ್ನ ಖಾತೆದಾರರಿಗೆ ರೋಗದ ಚಿಕಿತ್ಸೆಗಾಗಿ ಅವರ ಹೂಡಿಕೆಯ ಭಾಗಶಃ  ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಿದೆ" ಎಂದು ಹೇಳಿದೆ.

ಅಟಲ್ ಪೆನ್ಶನ್ ಯೋಜನೆಯ ಖಾತೆದಾರರಿಗೆ ಇದು ಅನ್ವಯಿಸಲಿದೆಯೇ?
ಖಾತೆದಾರರು, ಅವರ ಸಂಗಾತಿ, ಮಕ್ಕಳು, ಅವಲಂಬಿತ ಪೋಷಕರ ಚಿಕಿತ್ಸೆಗಾಗಿ ಈ ಹಣವನ್ನು ಹಿಂಪಡೆಯಲು ಅನುಮತಿಯನ್ನು ನೀಡಲಾಗಿದೆ ಎಂದು ಪಿಎಫ್‌ಆರ್‌ಡಿಎ ತಿಳಿಸಿದೆ. ಅಟಲ್ ಪಿಂಚಣಿ ಯೋಜನೆ (ಎಪಿವೈ) ಯ ಖಾತೆದಾರರಿಗೆ ಭಾಗಶಃ ವಾಪಸಾತಿ ಸೌಲಭ್ಯ ಲಭ್ಯವಿರುವುದಿಲ್ಲ ಎಂದು ಪಿಎಫ್‌ಆರ್‌ಡಿಎ ಸ್ಪಷ್ಟಪಡಿಸಿದೆ.  ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಿಎಫ್‌ಆರ್‌ಡಿಎ, "ಎಪಿವೈ ಖಾತೆದಾರರನ್ನು ಭಾಗಶಃ ಹಣವನ್ನು ಹಿಂಪಡೆಯಲು ಪ್ರಸ್ತುತ ಯಾವುದೇ ಅವಕಾಶವಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ" ಎಂದು ಹೇಳಿದರು.

ವಿಶೇಷವೆಂದರೆ, ಎನ್‌ಪಿಎಸ್ ಮತ್ತು ಎಪಿವೈ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಎರಡು ಪ್ರಮುಖ ಪಿಂಚಣಿ ಯೋಜನೆಗಳಾಗಿವೆ. ಮಾರ್ಚ್ 31 ರ ವೇಳೆಗೆ ಎನ್‌ಪಿಎಸ್ ಮತ್ತು ಎಪಿವೈ ಅಡಿಯಲ್ಲಿ ಒಟ್ಟು ಖಾತೆದಾರರ ಸಂಖ್ಯೆ 3.46 ಕೋಟಿಗೆ ತಲುಪಿದೆ. ಪಿಎಫ್‌ಆರ್‌ಡಿಎ ಅಂಕಿ-ಅಂಶಗಳ ಪ್ರಕಾರ, ಇದರಲ್ಲಿ ಸುಮಾರು2.11 ಕೋಟಿ ಜನರು ಎಪಿವೈ ಖಾತೆದಾರರಾಗಿದ್ದಾರೆ.
 

Trending News