Ram Mandir Ayodhya Darshan Update: ಈಗ ಎಲ್ಲರೂ ವೀಕ್ಷಿಸಬಹುದು ರಾಮ ಮಂದಿರ ನಿರ್ಮಾಣ ಕಾರ್ಯ

Ram Mandir Ayodhya Darshan Update:  ರಾಮ ಮಂದಿರ ಸ್ಥಳದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ವೀಕ್ಷಿಸುವ ಬಗ್ಗೆ ಭಕ್ತರು, ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. 

Written by - Ranjitha R K | Last Updated : Aug 10, 2021, 03:01 PM IST
  • ರಾಮ ಮಂದಿರ ನಿರ್ಮಾಣ ಕಾರ್ಯವೀಕ್ಷಿಸಲು ಭಕ್ತರಿಗೆ ಅವಕಾಶ
  • ನಿರ್ಮಾಣ ಕಾರ್ಯಗಳನ್ನು ವೀಕ್ಷಿಸುವ ಇಂಗಿತ ವ್ಯಕ್ತಪಡಿಸಿದ್ದ ಭಕ್ತರು
  • 2023 ರ ಅಂತ್ಯದ ವೇಳೆಗೆ ರಾಮಮಂದಿರದ ಗರ್ಭಗುಡಿ ದರ್ಶನಕ್ಕೆ ತೆರವು
Ram Mandir Ayodhya Darshan Update: ಈಗ ಎಲ್ಲರೂ ವೀಕ್ಷಿಸಬಹುದು ರಾಮ ಮಂದಿರ ನಿರ್ಮಾಣ ಕಾರ್ಯ  title=
ರಾಮ ಮಂದಿರ ನಿರ್ಮಾಣ ಕಾರ್ಯವೀಕ್ಷಿಸಲು ಭಕ್ತರಿಗೆ ಅವಕಾಶ (file photo)

ನವದೆಹಲಿ :  Ram Mandir Ayodhya Darshan Update: ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶೇಷ ಕಾರಿಡಾರ್ ಅನ್ನು ರಚಿಸಿದ್ದು, ಅಲ್ಲಿಂದ ಭಕ್ತರು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ನಿರ್ಮಾಣ ಕಾರ್ಯವನ್ನು ನೋಡಬಹುದಾಗಿದೆ. 

ರಾಮ ಮಂದಿರ (Ram mandir) ಸ್ಥಳದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ವೀಕ್ಷಿಸುವ ಬಗ್ಗೆ ಭಕ್ತರು, ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ವಿನಂತಿಯನ್ನು ಪರಿಗಣಿಸಿ, ದೇವಾಲಯದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯವನ್ನು ವೀಕ್ಷಿಸುವ ಅವಕಾಶವನ್ನು ಭಕ್ತರಿಗೆ ಅವಕಾಶ ನೀಡಲು ಟ್ರಸ್ಟ್ (Ram mandir trust) ನಿರ್ಧರಿಸಿದೆ. ಈ ವಿಷಯವನ್ನು , ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಚಂಪತ್ ರಾಯ್ ತಿಳಿಸಿದ್ದಾರೆ. 

ಇದನ್ನೂ ಓದಿ :  ಬ್ಯಾಂಕ್ ಸಿಬ್ಬಂದಿಗೆ RBI ಗಿಫ್ಟ್ : ಪ್ರತಿ ವರ್ಷ ಸಿಗಲಿದೆ ಹತ್ತು ದಿನಗಳ ಸರ್ಪ್ರೈಜ್ ರಜೆ

ದೇವಾಲಯದ ಪಶ್ಚಿಮ ಭಾಗದಲ್ಲಿರುವ ಗೋಡೆಯನ್ನು ಭಾಗಶಃ ನೆಲಸಮ ಮಾಡಲಾಗಿದೆ. ಮತ್ತುಅಲ್ಲಿ ಕಬ್ಬಿಣದ ಗ್ರಿಲ್ ಗಳನ್ನೂ ಹಾಕಲಾಗಿದೆ. ಈ ಮೂಲಕ ಭಕ್ತರು, ಮಂದಿರದ ನಿರ್ಮಾಣ ಕಾರ್ಯವನ್ನು ವೀಕ್ಷಿಸಬಹುದಾಗಿದೆ.  

ಇಲ್ಲಿಯವರೆಗೆ ಭಕ್ತರಿಗೆ ರಾಮ ಜನ್ಮಭೂಮಿ ಸಂಕೀರ್ಣದಲ್ಲಿರುವ ತಾತ್ಕಾಲಿಕ ದೇವಸ್ಥಾನಕ್ಕೆ ಹೋಗಲು ಅವಕಾಶವಿತ್ತು. ಈ ದೇವಾಲಯವು ಮುಖ್ಯದ್ವಾರದಿಂದ ಕೆಲವೇ ಮೀಟರ್ ದೂರದಲ್ಲಿದೆ.

ಇದನ್ನೂ ಓದಿ :  PM Kisan: ಇನ್ನೂ ನಿಮ್ಮ ಖಾತೆಗೆ 2000 ರೂ. ಬಂದಿಲ್ಲವೇ? ಈ ಸಂಖ್ಯೆಗೆ ದೂರು ನೀಡಿ, ತಕ್ಷಣ ಲಾಭ ಪಡೆಯಿರಿ

2023 ರ ಅಂತ್ಯದ ವೇಳೆಗೆ ಅಯೋಧ್ಯೆಯ ರಾಮಮಂದಿರದ (Ram mandir update) ಗರ್ಭಗುಡಿಯನ್ನು ಭಕ್ತರಿಗಾಗಿ ತೆರೆಯಲಾಗುವುದು ಮತ್ತು 2025 ರ ಅಂತ್ಯದ ವೇಳೆಗೆ 70 ಎಕರೆ ಸಂಕೀರ್ಣವು ಸಿದ್ಧವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News