ಐರನ್ ಕೊರತೆ ಎದುರಾದಾಗ ಈ ಜ್ಯೂಸ್ ಸೇವಿಸಿ ! ಮತ್ತೆ ನಾರ್ಮಲ್ ಸ್ಥಿತಿಗೆ ಬರುತ್ತದೆ ಹಿಮೊಗ್ಲೋಬಿನ್

Best Iron Rich Drinks : ಐರನ್ ಕೊರತೆಯಾದರೆ ಅನೇಕ ಗಂಭೀರ ಕಾಯಿಲೆಗಳನ್ನು ಉಂಟುಮಾಡುತ್ತದೆ. ಐರನ್ ನಮ್ಮ ದೇಹದಲ್ಲಿನ ಅಂಗಗಳಿಗೆ ಆಮ್ಲಜನಕವನ್ನು ತಲುಪಿಸುವ ಕೆಲಸ ಮಾಡುತ್ತದೆ.

Written by - Ranjitha R K | Last Updated : Nov 13, 2024, 05:41 PM IST
  • ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ
  • ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯ.
  • ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳ ಅಗತ್ಯವಿರುತ್ತದೆ.
 ಐರನ್ ಕೊರತೆ ಎದುರಾದಾಗ ಈ ಜ್ಯೂಸ್ ಸೇವಿಸಿ ! ಮತ್ತೆ ನಾರ್ಮಲ್ ಸ್ಥಿತಿಗೆ ಬರುತ್ತದೆ ಹಿಮೊಗ್ಲೋಬಿನ್  title=

Best Iron Rich Drinks : ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆದರೆ ಉತ್ತಮ ಆರೋಗ್ಯವನ್ನು ಕಾಪಾಡಬೇಕಾದರೆ ನಾವು ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯ. ದೇಹದಲ್ಲಿ ಪೋಷಕಾಂಶಗಳ ಕೊರತೆ ಎದುರಾದರೆ ಬೇರೆ ಬೇರೆ ಕಾಯಿಲೆಗಳಿಗೆ ನಮ್ಮನ್ನು ದೂಡುತ್ತದೆ. ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳ ಅಗತ್ಯವಿರುತ್ತದೆ. ಈ ಪೋಷಕಾಂಶಗಳು ದೇಹಕ್ಕೆ ಸಿಕ್ಕಿದಾಗ ಮಾತ್ರ ದೇಹದ ಎಲ್ಲಾ ಅಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತದೆ. ಕಬ್ಬಿಣದ ಅಂಶ ಅಥವಾ ಐರನ್ ದೇಹಕ್ಕೆ ಬಹಳ ಅಗತ್ಯವಿರುವ ಅಂಶವಾಗಿದೆ.

ಐರನ್ ಕೊರತೆಯಾದರೆ ಅನೇಕ ಗಂಭೀರ ಕಾಯಿಲೆಗಳನ್ನು ಉಂಟುಮಾಡುತ್ತದೆ. ಐರನ್ ನಮ್ಮ ದೇಹದಲ್ಲಿನ ಅಂಗಗಳಿಗೆ ಆಮ್ಲಜನಕವನ್ನು ತಲುಪಿಸುವ ಕೆಲಸ ಮಾಡುತ್ತದೆ. ದೇಹದಲ್ಲಿ ಇದರ ಕೊರತೆಯಾದರೆ  ಸ್ವಲ್ಪ ಕೆಲಸ ಮಾಡಿದರೂ ದಣಿವಾಗುತ್ತದೆ. ಉಸಿರಾಟದ ತೊಂದರೆ ಎದುರಾಗುತ್ತದೆ. 

ಇದನ್ನೂ ಓದಿ : ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿಂದರೆ ಸಾಕು, ದಿಂಬು ಸೋಕುತ್ತಿದ್ದ ಹಾಗೆ ಜಾರುವಿರಿ ಗಾಢ ನಿದ್ದೆಗೆ ! ನಿದ್ರಾಹೀನತೆಗೆ ಇದೇ ಮದ್ದು

ಐರನ್ ಕೊರತೆಯನ್ನು ನೀಗಿಸುತ್ತದೆ ಈ ಜ್ಯೂಸ್ :  
ಪಾಲಕ್ ಜ್ಯೂಸ್  :

ಪಾಲಕ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶ ಕಂಡುಬರುತ್ತದೆ.  ಇದು ನಮ್ಮ ದೇಹಕ್ಕೆ ಐರನ್ ಅನ್ನು ಪೂರೈಸಲು ಸಹಾಯ ಮಾಡುತ್ತದೆ. ಪಾಲಕ್ ಜ್ಯೂಸ್ ಮಾಡುವಾಗ ಅದರ ರುಚಿ ಹೆಚ್ಚಿಸಲು  ಅದಕ್ಕೆ  ತೆಂಗಿನಕಾಯಿ, ಎಳನೀರು, ಗೋಡಂಬಿ ಮತ್ತು ಅನಾನಸ್ ಅನ್ನು  ಸೇರಿಸಬಹುದು. ಈ ಜ್ಯೂಸ್ ಅನ್ನು ಪ್ರತಿದಿನ ಸೇವಿಸಿದರೆ ದೇಹಕ್ಕೆ ಅಗತ್ಯವಿರುವ ಐರನ್ ಸಿಗುತ್ತದೆ. 

ಬಟಾಣಿ ಪ್ರೋಟೀನ್ ಶೇಕ್: ಬಟಾಣಿ ಪ್ರೋಟೀನ್ ಶೇಕ್‌ ಸೇವಿಸುವುದರ ಮೂಲಕ ಕೂಡಾ ದೇಹದಲ್ಲಿನ ಐರನ್ ಕೊರತೆಯನ್ನು ನಿವಾರಿಸಬಹುದು. ಅದರಲ್ಲಿ  ಐರನ್  ಪ್ರಮಾಣವು ಅಧಿಕವಾಗಿರುತ್ತದೆ. ಆದರೆ ಇದರಲ್ಲಿ ಯಾವುದೇ ಕಾರಣಕ್ಕೂ ಸಕ್ಕರೆಯನ್ನು ಬಳಸಬಾರದು ಎನ್ನುವುದನ್ನು  ಮರೆಯಬಾರದು. 

ಇದನ್ನೂ ಓದಿ : ಮದುವೆಯಾದವರಿಗೆ ಈ ಡೇಂಜರಸ್ ರೋಗ ಬರುವ ಸಾಧ್ಯತೆ ತುಂಬಾ ಕಡಿಮೆ! ಅದಕ್ಕೆ ಸರಿಯಾದ ವಯಸ್ಸಿಗೆ ಮದುವೆಯಾಗಿ, ಜಬರ್ದಸ್ತಾಗಿರಿ!

ಬೀಟ್ರೂಟ್ ಜ್ಯೂಸ್  :
ಬೀಟ್ರೂಟ್ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಬಳಸುವುದರಿಂದ ದೇಹದ ಐರನ್ ಕೊರತೆಯನ್ನು ನೀಗಿಸಬಹುದು. ಇದು ಐರನ್ ಜೊತೆಗೆ, ಪೊಟ್ಯಾಸಿಯಮ್, ಫೋಲೇಟ್ ಮತ್ತು ವಿಟಮಿನ್ ಸಿ ಕೊರತೆಯನ್ನು ಕೂಡಾ ನೀಗಿಸುತ್ತದೆ.  

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News