ಪಾಟ್ನಾ: ದೇಶದಾದ್ಯಂತ ಸಂಭ್ರಮ-ಸಡಗರದಿಂದ ರಕ್ಷಾ ಬಂಧನ(Rakshabandhan) ಉತ್ಸವವನ್ನು ಆಚರಿಲಾಗುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ದೇಶದ ಜನತೆಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಅವರು ಮರಗಳಿಗೆ ರಾಖಿ ಕಟ್ಟುವ ಮೂಲಕ ವಿಶಿಷ್ಟವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ.
ಹೌದು, ರಕ್ಷಾ ಬಂಧನದ ಪ್ರಯುಕ್ತ ಬಿಹಾರ ಸಿಎಂ ನಿತೀಶ್ ಕುಮಾರ್ ಮರಗಳಿಗೆ ರಾಖಿ ಕಟ್ಟಿದ್ದಾರೆ. ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜೆಡಿಯು ಮುಖ್ಯಸ್ಥ ಮರಗಳಿಗೆ ರಾಖಿ ಕಟ್ಟುವ ಮೂಲಕ ವಿಶಿಷ್ಟವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಬಿಹಾರ ರಾಜ್ಯದಲ್ಲಿ 2021ರಿಂದಲೂ ರಕ್ಷಾ ಬಂಧನ ಹಬ್ಬವನ್ನು ‘ವೃಕ್ಷ ರಕ್ಷಾ ದಿವಸ್’(Tree Protection Day) ಆಗಿ ಎನ್‌ಡಿಎ ನೇತೃತ್ವದ ಬಿಹಾರ ಸರ್ಕಾರ ಆಚರಿಸಿಕೊಂಡು ಬರುತ್ತಿದೆ. ಜನರು ಸಸಿಗಳನ್ನು ನೆಟ್ಟು, ಅವುಗಳನ್ನು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ನಿತೀಶ್ ಕುಮಾರ್(Nitish Kumar) ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಇನ್ಫೋಸಿಸ್ ಸಿಇಒಗೆ ಕೇಂದ್ರ ಸರ್ಕಾರದಿಂದ ಸಮನ್ಸ್ ಜಾರಿ
‘ಜನರನ್ನು ಕಾಪಾಡುವಂತೆ ಮರಗಳನ್ನು ನಾವು ರಕ್ಷಿಸಬೇಕಾಗಿದೆ. ಸಸಿಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕಾಗಿದೆ. ಜಲ ಜೀವನ್ ಹರಿಯಾಲಿ ಮಿಷನ್ ಅಡಿ ರಾಜ್ಯ ಸರ್ಕಾರ ಸಸಿಗಳನ್ನು ನೆಡಲು ಗಮನ ಕೇಂದ್ರೀಕರಿಸಿದೆ. ಮುಂದಿನ ಪೀಳಿಗೆಯು ಪರಿಸರ ಸಂರಕ್ಷಣೆ(Environmental Conservation)ಯ ಬಗ್ಗೆ ತಿಳಿದುಕೊಳ್ಳಬೇಕಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡ ಪರಿಸರ ಸರಂಕ್ಷಣೆಗೆ ಕೈಜೋಡಿಸಬೇಕು. ಮನೆ ಮುಂದೆ ಒಂದು ಸಸಿ ನೆಟ್ಟು ಅದನ್ನು ಪೋಷಿಸಬೇಕು’ ಅಂತಾ ಅವರು ಸಲಹೆ ನೀಡಿದ್ದಾರೆ.
Bihar CM Nitish Kumar ties rakhis to trees in Patna on #Rakshabandhan to spread awareness on environmental conservation.
"Since 2012, we've been observing Rakshabandhan as 'Vriksh Raksha Diwas' (Tree Protection Day). People should save trees, just like they save people," he says pic.twitter.com/Gx6LKAmDlL
— ANI (@ANI) August 22, 2021
ಇದನ್ನೂ ಓದಿ: ಜಾತಿ ಆಧಾರಿತ ಜನಗಣತಿ ಪರ ಬಿಹಾರ ಸಿಎಂ ನಿತೀಶ್ ಕುಮಾರ್ ಬ್ಯಾಟಿಂಗ್
ಇಂದು(ಆಗಸ್ಟ್ 22) ದೇಶದಾದ್ಯಂತ ರಕ್ಷಾ ಬಂಧನ(Raksha Bandhan 2021)ದ ಹಬ್ಬವನ್ನು ಆಚರಿಸಲಾಗುತ್ತಿದೆ. ಅಣ್ಣ-ತಂಗಿಯರ ಮಧುರ ಸಂಬಂಧಕ್ಕೆ ಸಾಕ್ಷಿಯಾಗಿರುವ ಆಚರಣೆಯಿದು. ಸಹೋದರರು-ಸಹೋದರಿಯರ ಬಾಂಧವ್ಯವನ್ನು ರಕ್ಷಾ ಬಂಧನ ಮತ್ತಷ್ಟು ಗಟ್ಟಿಗೊಳಿಸುತ್ತದೆ. ಸಾಂಪ್ರದಾಯಿಕವಾಗಿ ಆಚರಿಸುವ ಈ ಹಬ್ಬದಲ್ಲಿ ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಸುತ್ತ ಪವಿತ್ರ ರಾಖಿಯನ್ನು ಕಟ್ಟುವ ಮೂಲಕ ಸಾಂಕೇತಿಕವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ