/kannada/photo-gallery/rahu-star-transit-will-bless-these-zodiac-sign-221364 ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ  ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ 221364

NIA and ED Action : ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಕೇರಳ ಮತ್ತು ತಮಿಳುನಾಡು ಸೇರಿದಂತೆ ದೇಶಾದ್ಯಂತ 10 ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಬಂಧಪಟ್ಟ ಸ್ಥಳಗಳ ಮೇಲೆ ದಾಳಿ ನಡೆಸಿವೆ.  ಟೆರರ್ ಫಂಡಿಂಗ್  ಮತ್ತು ಶಿಬಿರಗಳನ್ನು ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ರಾಜ್ಯ ಪೊಲೀಸ್ ಪಡೆಗಳ ತಂಡವು ಯುಪಿ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದು, ತರಬೇತಿ ಶಿಬಿರಗಳನ್ನು ನಡೆಸುವುದು ಮತ್ತು ನಿಷೇಧಿತ ಸಂಘಟನೆಗಳಿಗೆ ಸೇರಲು ಜನರನ್ನು ಪ್ರೋತ್ಸಾಹಿಸುವುದು, ಮುಂತಾದ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳ ವಸತಿ ಮತ್ತು ಅಧಿಕೃತ  ವಾಸ ಸ್ಥಾನಗಳ ಮೇಲೆ ದಾಳಿ ನಡೆಸಲಾಗುತ್ತಿದೆ.

ರಾಜ್ಯದ 10 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ :ಕರ್ನಾಟಕದ 10 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ NIA, ಪಿಎಫ್ಐ ನ 8 ರಾಜ್ಯ ಸಮಿತಿ ಸದಸ್ಯರ ಮನೆ ಮೇಲೆ ಹಾಗೂ ಎರಡು ರಾಜ್ಯ ಕಚೇರಿಯಲ್ಲಿ ಶೋಧ ನಡೆಸುತ್ತಿದೆ. ಭಯೋತ್ಪಾದನಾ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಈ ದಾಳಿ ನಡೆಸಲಾಗುತ್ತಿದೆ. ಎಕೆ ಅಶ್ರಫ್, ಶರೀಫ್ ಬಜ್ಪೆ, ನವಾಜ್ ಕಾವೂರು, ಮೊಯ್ದೊನ್ ಹಳೆಯಂಗಡಿ, ಮೊಹಮ್ಮದ್ ಶಾಕಿಬ್, ಮೊಹಮ್ಮದ್ ತಫ್ಸೀರ್, ಯಾಸಿರ್ ಹಸನ್, ಅಬ್ದುಲ್ ಖಾದರ್ ಪುತ್ತೂರ್ ಎಂಬವರ ಮೇಲೆ ನಿವಾಸಗಳ ದಾಳಿ 10  ನಡೆಸಿದೆ. ಇದರ ಹೊರತಾಗಿ ಮಂಗಳೂರು ಪಿಫ್ಐ  ಕಚೇರಿ ಹಾಗೂ ಬೆಂಗಳೂರು  ಪಿಫ್ಐ ಕಚೇರಿ ಮೇಲೆ NIA ತಲಾಶ್ ನಡೆಸುತ್ತಿದೆ. 

ಇದನ್ನೂ ಓದಿ : SBI Recruitment 2022 : SBI ನಲ್ಲಿ 5000 ಹುದ್ದೆಗಳಿಗೆ ಅರ್ಜಿ : ಸೆಪ್ಟೆಂಬರ್ 27 ಕೊನೆ ದಿನ

ರಾಜ್ಯಗಳಿಂದ 100 ಕ್ಕೂ ಹೆಚ್ಚು PFI ಸದಸ್ಯರ ಬಂಧನ :ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಕೇರಳ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಸೇರಿದ 50 ಸ್ಥಳಗಳಲ್ಲಿ ಎನ್‌ಐಎ ಮತ್ತು ಇಡಿ ದಾಳಿ ನಡೆಯುತ್ತಿವೆ. ಇದುವರೆಗೆ 100 ಕ್ಕೂ ಹೆಚ್ಚು ಪಿಎಫ್‌ಐ ಸದಸ್ಯರನ್ನು ಬಂಧಿಸಲಾಗಿದೆ. ಪಿಎಫ್‌ಐ ಮುಖಂಡರು ಮತ್ತು ಈ ಸಂಘಟನೆಗೆ ಸಂಬಂಧಿಸಿದ ಕಚೇರಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಎನ್‌ಐಎ ಜೊತೆಗೆ ಇಡಿ ಕೂಡಾ ಈ ದಾಳಿಯಲ್ಲಿ ಭಾಗಿಯಾಗಿದೆ.

ಸೆಪ್ಟೆಂಬರ್ 18 ರಂದು 23 ಸ್ಥಳಗಳಲ್ಲಿ ದಾಳಿ ನಡೆಸಿದ್ದ ಎನ್ಐಎ  : ಈ ಹಿಂದೆ ಸೆಪ್ಟೆಂಬರ್ 18 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕರಾಟೆ ತರಬೇತಿ ಕೇಂದ್ರದ ಹೆಸರಿನಲ್ಲಿ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಡೆಸುತ್ತಿದ್ದ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿತ್ತು.  ನಿಜಾಮಾಬಾದ್, ಕರ್ನೂಲ್, ಗುಂಟೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ 23 ಕಡೆಗಳಲ್ಲಿ ಎನ್‌ಐಎ ದಾಳಿ ನಡೆಸಿತ್ತು. ಈ ಸ್ಥಳಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳ ಕಾರ್ಯಾಚರಣೆ  ನಡೆಯುತ್ತಿತ್ತು ಎನ್ನಲಾಗಿದೆ. 

ಇದನ್ನೂ ಓದಿ : ಯೋಗಿ ಸರ್ಕಾರದಿಂದ ಮಹತ್ವದ ನಿರ್ಧಾರ : ವಕ್ಫ್ ಬೋರ್ಡ್ ಆಸ್ತಿಗಳ ತನಿಖೆಗೆ ಆದೇಶ

ಈ ಕಾರ್ಯಾಚರಣೆಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ ಡಿಜಿಟಲ್ ಸಾಧನಗಳು, ದಾಖಲೆಗಳು, ಎರಡು ಕಠಾರಿಗಳು ಮತ್ತು 8,31,500 ರೂ ನಗದು ಸೇರಿದಂತೆ ಆತಂಕಕಾರಿ ವಸ್ತುಗಳನ್ನು ವಶಪಡಿಸಿಕೊಂಡಿದೆ. ಎನ್‌ಐಎ ಪ್ರಕಾರ, ಆರೋಪಿಗಳು ಭಯೋತ್ಪಾದಕ ಕೃತ್ಯಗಳನ್ನು ಎಸಗಲು ತರಬೇತಿ ನೀಡಲು ಶಿಬಿರಗಳನ್ನು ಆಯೋಜಿಸುತ್ತಿದ್ದರು. ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು  ಬಿತ್ತುವ ಪ್ರಯತ್ನ ನಡೆಸಲಾಗುತ್ತಿತ್ತು. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Section: 
English Title: 
NIA and EDs big action against PFI 100 members arrested from 10 states in 24 hours
News Source: 
Home Title: 

PFI ವಿರುದ್ಧ ಎನ್ಐಎ ಮತ್ತು ಇಡಿ ಕಾರ್ಯಾಚರಣೆ, 24 ಗಂಟೆಗಳ ಒಳಗೆ 10 ರಾಜ್ಯಗಳಿಂದ 100 ಸದಸ್ಯರ ಬಂಧನ

PFI ವಿರುದ್ಧ ಎನ್ಐಎ  ಮತ್ತು ಇಡಿ ಕಾರ್ಯಾಚರಣೆ, 24 ಗಂಟೆಗಳ ಒಳಗೆ 10 ರಾಜ್ಯಗಳಿಂದ 100 ಸದಸ್ಯರ ಬಂಧನ
Caption: 
NIA and ED Action
Yes
Is Blog?: 
No
Tags: 
Facebook Instant Article: 
Yes
Highlights: 

ಏಕ ಕಾಲದಲ್ಲಿ  10 ರಾಜ್ಯಗಳಲ್ಲಿ ಎನ್ಐಎ  ಮತ್ತು ಇಡಿ ಕಾರ್ಯಾಚರಣೆ

24 ಗಂಟೆಗಳ ಒಳಗೆ 10 ರಾಜ್ಯಗಳಿಂದ 100 ಸದಸ್ಯರ ಬಂಧನ 

ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆಯಲ್ಲಿ ಬಂಧನ 

Mobile Title: 
PFI ವಿರುದ್ಧ ಎನ್ಐಎ ಮತ್ತು ಇಡಿ ಕಾರ್ಯಾಚರಣೆ, 24 ಗಂಟೆಗಳ ಒಳಗೆ 10 ರಾಜ್ಯಗಳಿಂದ 100 ಸದಸ್ಯರ ಬಂಧನ
Ranjitha R K
Publish Later: 
No
Publish At: 
Thursday, September 22, 2022 - 09:09
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No