Aadhaar Card: ಕೇಂದ್ರದಿಂದ ಹೊಸ ಅಧಿಸೂಚನೆ: ಇನ್ಮುಂದೆ ಈ ಕೆಲಸಗಳಿಗೆ 'ಆಧಾರ್ ಕಾರ್ಡ್' ಅಗತ್ಯವಿಲ್ಲ!

ಪಿಂಚಣಿದಾರರು ಇನ್ಮುಂದೆ ಆಧಾರ್ ಕಾರ್ಡ್ ತೋರಿಸಿ ತಾವು ಬದುಕಿರುವ ಬಗ್ಗೆ ಪುರಾವೆಗಳನ್ನ ನೀಡುವುದು ಕಡ್ಡಾಯವಲ್ಲ

Last Updated : Mar 22, 2021, 05:31 PM IST
  • ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು
  • ಹೊಸ ನಿಯಮದ ಪ್ರಕಾರ, ಜೀವನ ಪ್ರಮಾಣ ಪತ್ರಕ್ಕೆ ಆಧಾರ್ ಕಡ್ಡಾಯವಲ್ಲ.
  • ಪಿಂಚಣಿದಾರರು ಇನ್ಮುಂದೆ ಆಧಾರ್ ಕಾರ್ಡ್ ತೋರಿಸಿ ತಾವು ಬದುಕಿರುವ ಬಗ್ಗೆ ಪುರಾವೆಗಳನ್ನ ನೀಡುವುದು ಕಡ್ಡಾಯವಲ್ಲ
Aadhaar Card: ಕೇಂದ್ರದಿಂದ ಹೊಸ ಅಧಿಸೂಚನೆ: ಇನ್ಮುಂದೆ ಈ ಕೆಲಸಗಳಿಗೆ 'ಆಧಾರ್ ಕಾರ್ಡ್' ಅಗತ್ಯವಿಲ್ಲ! title=

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕೆಲವು ಕೆಲಸಗಳಿಗೆ ಆಧಾರ್ ಕಡ್ಡಾಯ ಅನ್ನೋ ನಿಯಮದಿಂದ ಹಿಂತೆಗೆದುಕೊಂಡಿದೆ. ಇದೀಗ ಈ ಹೊಸ ನಿಯಮದ ಪ್ರಕಾರ, ಜೀವನ ಪ್ರಮಾಣ ಪತ್ರಕ್ಕೆ ಆಧಾರ್ ಕಡ್ಡಾಯವಲ್ಲ. ಅದ್ರಂತೆ, ಪಿಂಚಣಿದಾರರು ಇನ್ಮುಂದೆ ಆಧಾರ್ ಕಾರ್ಡ್ ತೋರಿಸಿ ತಾವು ಬದುಕಿರುವ ಬಗ್ಗೆ ಪುರಾವೆಗಳನ್ನ ನೀಡುವುದು ಕಡ್ಡಾಯವಲ್ಲ ಬದಲಾಗಿ ಸ್ವಯಂ ಪ್ರೇರಿತ.

ಹೊಸ ನಿಯಮಗಳಲ್ಲಿ ಕೇಂದ್ರ ಸರ್ಕಾರ ಈ ಬಾಧ್ಯತೆಯಿಂದ ವಿನಾಯಿತಿ ನೀಡಿದೆ. ಸರ್ಕಾರಿ ಕಚೇರಿಗಳ ಬಯೋಮೆಟ್ರಿಕ್ಸ್(Biometric) ಹಾಜರಾತಿ ವ್ಯವಸ್ಥೆಯಲ್ಲಿಯೂ ಆಧಾರ್ ಸಂಖ್ಯೆಯ ಮೂಲಾಂಶವನ್ನು ಮೆಸೇಜಿಂಗ್ ಸೊಲ್ಯೂಷನ್ ಮೆಸೆಜ್ (ಸ್ಯಾಂಡಸ್) ನಲ್ಲಿ ತೆಗೆದುಹಾಕಲಾಗಿದೆ.

Elgar Parishad case: ಸ್ಟಾನ್ ಸ್ವಾಮಿಗೆ ಜಾಮೀನು ನಿರಾಕರಿಸಿದ ಕೋರ್ಟ್

ಈ ನಿಯಮಗಳು ಬದಲಾಗಿವೆ..! ಈಗ ಈ ಹೊಸ ನಿಯಮದ ಪ್ರಕಾರ, ಜೀವನ ಪ್ರಮಾಣ ಪತ್ರಕ್ಕೆ ಆಧಾರ್(Aadhaar Card)ʼನ ಮೂಲಾಂಶವನ್ನು ತೆಗೆದುಹಾಕಲಾಗಿದೆ. ಇದನ್ನ ಕಡ್ಡಾಯದಿಂದ ಸ್ವಯಂಪ್ರೇರಿತವಾಗಿ ಬದಲಾಯಿಸಲಾಗಿದೆ. ಅಂದರೆ, ಪಿಂಚಣಿದಾರರು ಬಯಸಿದ್ರೆ, ಅವ್ರು ಆಧಾರ್ ಬಗ್ಗೆ ಮಾಹಿತಿ ನೀಡಬಹುದು, ಅಥ್ವಾಬೇಡ ಅನ್ನಿಸಿದ್ರೆ ಬಿಡಲು ಬಹುದು.

All India Bar Examination ಮಾರ್ಚ್ 31 ಕ್ಕೆ ಗಡುವು ವಿಸ್ತರಣೆ

ಈ ನಿಯಮ ಸ್ವಯಂಪ್ರೇರಿತವಾಗಿರುವುದರಿಂದ ಪಿಂಚಣಿದಾರರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಯಾಕಂದ್ರೆ, ಪಿಂಚಣಿದಾರರು ಪ್ರತಿ ವರ್ಷ ಆರಂಭದಲ್ಲಿ ಲೈಫ್ ಸರ್ಟಿಫಿಕೇಟ್ʼಗಾಗಿ ಓಡಾಡಬೇಕು. ಪಿಂಚಣಿ(Pension)ದಾರನ ಆಧಾರ್ ಕಾರ್ಡ್ʼನಲ್ಲಿ ನೀಡಿರುವ ಬಯೋಮೆಟ್ರಿಕ್ ಮಾಹಿತಿಯನ್ನ ಅಪ್ಡೇಟ್ ಮಾಡದೇ ಇದ್ದರೆ ಅಥ್ವಾ ಇನ್ಯಾವುದೇ ತಾಂತ್ರಿಕ ಸಮಸ್ಯೆ ಉದ್ಭವಿಸಿದಾಗ ಇದು ಮತ್ತಷ್ಟು ಕಠಿಣವಾಗ್ತಿತ್ತು. ಅದ್ರಿಂದ ಸಧ್ಯ ಬಿಗ್‌ ರಿಲೀಫ್ ಸಿಕ್ಕಿದೆ.

ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಗೆ ಕರೋನಾ ದೃಢ

ಸಂದೇಶ್‌ ಆಯಪ್ʼ(Sandesh App)ಗೆ ಆಧಾರ್ ಅಗತ್ಯವಿಲ್ಲ! ಇದೇ ವೇಳೆ, ಆಧಾರ್ ಪರಿಶೀಲನೆಯನ್ನು ಸ್ವಯಂಪ್ರೇರಿತವಾಗಿ ಮಾಡಲಾಗಿದ್ದು, ತ್ವರಿತ ಸಂದೇಶ ಅಪ್ಲಿಕೇಶನ್‌ʼಗೂ ಆಧಾರ್‌ ಕಡ್ಡಾಯವಲ್ಲ ಎಂದಿದೆ. ಅಂದ್ಹಾಗೆ, ಈ ಸಂದೇಶ್‌ ಅಪ್ಲಿಕೇಶನ್‌ʼನನ್ನ ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಸರ್ಕಾರಿ ನೌಕರರು ಕೇವಲ ಸಂದೇಶ್‌ ಮೂಲಕವೇ ಹಾಜರಾಗಬೇಕಾಗಿದೆ.

ವಿಧಾನಸಭಾ ಚುನಾವಣೆಯ ಮಧ್ಯೆ 2 ಮನೆ ಬಾಡಿಗೆಗೆ ಪಡೆದ Mamata Banerjee

ಅಧಿಸೂಚನೆ ಏನು? ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಮಾರ್ಚ್ 18ರಂದು ಅಧಿಸೂಚನೆ ಹೊರಡಿಸಿದೆ. ಜೀವಪುರಾವೆಗಾಗಿ ಆಧಾರ್ʼನ ಸತ್ಯಾಸತ್ಯತೆಯು ಸ್ವಯಂಪ್ರೇರಿತವಾಗಿ ಇರುತ್ತದೆ ಮತ್ತು ಅದನ್ನು ಬಳಸುವ ಸಂಸ್ಥೆಗಳು ಜೀವಪ್ರಮಾಣ ಪತ್ರ(Life Certificate) ನೀಡಲು ಪರ್ಯಾಯ ಮಾರ್ಗಗಳನ್ನ ಕಂಡುಹಿಡಿಯಬೇಕು ಎಂದಿದೆ. ಈ ಸಂದರ್ಭದಲ್ಲಿ ಎನ್ ಐಸಿ ಯುಐಡಿಎಐ ಕಾಲಕಾಲಕ್ಕೆ ಹೊರಡಿಸುವ ಆಧಾರ್ ಕಾಯ್ದೆ 2016, ಆಧಾರ್ ರೆಗ್ಯುಲೇಷನ್ 2016 ಮತ್ತು ಸುತ್ತೋಲೆಗಳು ಹಾಗೂ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲಿಸುವುದು ಕಡ್ಡಾಯ.

7th Pay Commission: ಕೇಂದ್ರ ನೌಕರರಿಗೆ ಸಿಹಿ ಸುದ್ದಿ:‌ ಹೋಳಿ ಹಬ್ಬಕ್ಕೂ ಮುನ್ನ ಸಿಗಲಿದೆ ಮುಂಗಡ ಹಣ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News