New Chief Election Commissioner: ಮುಖ್ಯ ಚುನಾವಣಾ ಆಯುಕ್ತರಾಗಿ Sushil Chandra ನೇಮಕ

New Chief Election Commissioner - ಸುಶೀಲ್ ಚಂದ್ರಾ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ ಮಾಡಲಾಗಿದೆ. 

Written by - Nitin Tabib | Last Updated : Apr 12, 2021, 09:01 PM IST
  • ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರಾ ನೇಮಕ.
  • ಸುನೀಲ್ ಆರೋರಾ ಅವರಿಂದ ತೆರವಾಗುವ ಸ್ಥಾನವನ್ನು ಅವರು ತುಂಬಲಿದ್ದಾರೆ.
  • ಮೇ 14, 2022ರವರೆಗೆ ಅವರು ಮುಖ್ಯ ಚುನಾವಣಾ ಅಧಿಕಾರಿಯಗಿರಲಿದ್ದಾರೆ.
New Chief Election Commissioner: ಮುಖ್ಯ ಚುನಾವಣಾ ಆಯುಕ್ತರಾಗಿ Sushil Chandra ನೇಮಕ title=
New Chief Election Commissioner Of India (File Photo)

ನವದೆಹಲಿ: New Chief Election Commissioner - ಸುಶೀಲ್ ಚಂದ್ರಾ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಹಾಲಿ Chief Election Commissioner ಆಗಿರುವ ಸುನೀಲ್ ಆರೋರಾ (Sunil Arora) ಅವರ ಜಾಗವನ್ನು ಅಲಂಕರಿಸಲಿದ್ದಾರೆ. ಏಪ್ರಿಲ್ 13 ಅಂದರೆ ನಾಳೆ ಸುಶೀಲ್ ಚಂದ್ರಾ (Sishil Chandra) ಅವರು ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಅವರು ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿರುವ ಕಾರಣ ಅವರಿಗೆ ಮುಖ್ಯ ಚುನಾವಣಾ ಆಯುಕ್ತರಾಗಿ ಬಡ್ತಿ ನೀಡಲಾಗುತ್ತಿದೆ. 

ಹಾಲಿ ಮುಖ್ಯ ಚುನಾವಣಾ ಆಯುಕ್ತರಾಗಿರುವ ಸುನೀಲ್ ಆರೋರಾ ಡಿಸೆಂಬರ್ 1, 2018 ರಲ್ಲಿ CEC ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆಗ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಓ. ಪಿ ರಾವತ್ ಅವರ ಜಾಗ ಅಲಂಕರಿಸಿದ್ದರು. ಸುನೀಲ್ ಅರೋರಾ ಅವರ ಅಧಿಕಾರಾವಧಿಯಲ್ಲಿ ಕೇಂದ್ರ ಚುನಾವಣಾ ಆಯೋಗ, ಹಲವು ಮಹತ್ವದ ರಾಜ್ಯಗಳ ಹಾಗೂ ಲೋಕಸಭಾ ಚುನಾವಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 2019 ಲೋಕಸಭೆ ಚುನಾವಣೆಗಳ ಜೊತೆಗೆ ಕೊರೊನಾ ಕಾಲದಲ್ಲಿ ಬಿಹಾರ ರಾಜ್ಯದ ವಿಧಾನಸಭೆ ಚುನಾವಣಾ ಇವುಗಳಲ್ಲಿ ಶಾಮೀಲಾಗಿವೆ. ಇನ್ನೊಂದೆಡೆ ಸದ್ಯ ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳೂ ಕೂಡ ಸುನೀಲ್ ಆರೋರಾ ಅವರ ನೇತ್ರತ್ವದ ಅಡಿಯಲ್ಲಿಯೇ ನಡೆಸಲಾಗುತ್ತಿದೆ. 

ಇದನ್ನೂ ಓದಿ- ಮಮತಾ ಬ್ಯಾನರ್ಜೀಗೆ ನೋಟಿಸ್ ಜಾರಿ ಮಾಡಿದ ಚುನಾವಣಾ ಆಯೋಗ

ಸುಶೀಲ್ ಚಂದ್ರಾ ಅವರನ್ನು ಲೋಕಸಭೆ ಚುನಾವಣೆಗೂ ಮುನ್ನ ಅಂದರೆ ಫೆಬ್ರುವರಿ 14, 2019  ರಂದು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಅವರು ಮೇ 14, 2022 ರಲ್ಲಿ ಮುಖ್ಯ ಚುನಾವಣಾ ಆಯುಕ್ತರ ಜವಾಬ್ದಾರಿಯಿಂದ ಮುಕ್ತರಾಗಲಿದ್ದಾರೆ. ಅವರ ನೇತೃತ್ವದಲ್ಲಿ ಚುನಾವಣಾ ಆಯೋಗ ಗೋವಾ, ಮಣಿಪುರ, ಉತ್ತರಾಖಂಡ್, ಪಂಜಾಬ್ ಹಾಗೂ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗಳನ್ನು ನಡೆಸಲಿದೆ.

ಇದನ್ನೂ ಓದಿ- ಕೇವಲ ಎರಡೇ ಪದದಲ್ಲಿ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಹೇಳಿದ್ದೇನು?

ಗೋವಾ, ಮಣಿಪುರ, ಉತ್ತರಾಖಂಡ ಹಾಗೂ ಪಂಜಾಬ್ ರಾಜ್ಯ ಸರ್ಕಾರಗಳ ಕಾರ್ಯಕಾಲ ಮುಂದಿನ ವರ್ಷ ಮಾರ್ಚ್ ತಿಂಗಳ ಬೇರೆ ಬೇರೆ ತಾರೀಖುಗಳಲ್ಲಿ ಮುಕ್ತಾಯಗೊಳ್ಳಲಿವೆ. ಉತ್ತರ ಪ್ರದೇಶ ಸರ್ಕಾರದ ಕಾರ್ಯಕಾಲ ಮುಂದಿನ ತಿಂಗಳು ಮೇ 14 ರಂದು ಮುಕ್ತಾಯಗೊಳ್ಳಲಿದೆ. ಚುನಾವಣಾ ಆಯೋಗದಲ್ಲಿ (Election Commission) ಆಯುಕ್ತರಾಗಿ ಅಧಿಕಾರ ಸ್ವೀಕಾರಕ್ಕು ಮೊದಲು ಚಂದ್ರಾ ಕೇಂದ್ರ ನೇರ ತೆರಿಗೆ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ- Assam Election 2021: ಬಿಜೆಪಿ ಶಾಸಕರ ಕಾರಿನೊಳಗೆ ಇವಿಎಂ, 4 ಅಧಿಕಾರಿಗಳು ಸಸ್ಪೆಂಡ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News