Twitter account Hack:NDRFನ ಟ್ವಿಟ್ಟರ್ ಖಾತೆ ಹ್ಯಾಕ್, ಕೆಲವೇ ಹೊತ್ತಲ್ಲಿ ರಿಸ್ಟೋರ್

Twitter account Hack:ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಅಧಿಕೃತ ಟ್ವಿಟರ್ ಖಾತೆ ಜನವರಿ 22 ರಂದು ಹ್ಯಾಕ್​ ಆಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Edited by - Chetana Devarmani | Last Updated : Jan 23, 2022, 06:17 PM IST
  • ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕೃತ ಟ್ವಿಟರ್
  • NDRFನ ಟ್ವಿಟ್ಟರ್ ಖಾತೆ ಹ್ಯಾಕ್, ಶೀಘ್ರದಲ್ಲೇ ಮರುಸ್ಥಾಪನೆ
  • ನಿನ್ನೆ ತಡರಾತ್ರಿ ಕೆಲಕಾಲ ಹ್ಯಾಕ್​ ಆಗಿದ್ದ ಟ್ವಿಟರ್ ಖಾತೆ
Twitter account Hack:NDRFನ ಟ್ವಿಟ್ಟರ್ ಖಾತೆ ಹ್ಯಾಕ್, ಕೆಲವೇ ಹೊತ್ತಲ್ಲಿ ರಿಸ್ಟೋರ್  title=
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ

ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಶನಿವಾರ (ಜನವರಿ 22) ತಡರಾತ್ರಿ ಹ್ಯಾಕ್ ಮಾಡಲಾಗಿದೆ. 

ಇದನ್ನೂ ಓದಿ: ಫೋನ್ ಟ್ಯಾಪಿಂಗ್ ಬಿಡಿ, ನನ್ನ ಮಕ್ಕಳ ಇನ್‌ಸ್ಟಾಗ್ರಾಮ್ ಕೂಡ ಹ್ಯಾಕ್ ಮಾಡಲಾಗಿದೆ: ಪ್ರಿಯಾಂಕಾ ಗಾಂಧಿ ವಾದ್ರಾ

ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಯ ಅಧಿಕೃತ ಟ್ವಿಟರ್​ ಖಾತೆ​ (Twitter account Hack) ನಿನ್ನೆ ತಡರಾತ್ರಿ ಕೆಲಕಾಲ ಹ್ಯಾಕ್​ ಆಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕೆಲವೇ ಹೊತ್ತಲ್ಲಿ ತಾಂತ್ರಿಕ ತಜ್ಞರು ಸರಿಪಡಿಸಿದ್ದಾರೆ.  ಎನ್​ಡಿಆರ್​ಎಫ್​ ಟ್ವಿಟರ್​ ಖಾತೆ ಸದ್ಯ ಭದ್ರವಾಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು  ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

'@NDRFHQ' ಖಾತೆಯ ಕೆಲವು ಯಾದೃಚ್ಛಿಕ ಸಂದೇಶಗಳನ್ನು ಸಂಕ್ಷಿಪ್ತವಾಗಿ ಪೋಸ್ಟ್ ಮಾಡಿದೆ. ಈಗಾಗಲೇ ಪ್ರಕಟಿಸಲಾದ ಸಂದೇಶಗಳು ಲೋಡ್ ಆಗುತ್ತಿಲ್ಲ. ಆದಾಗ್ಯೂ, ಫೆಡರಲ್ ಫೋರ್ಸ್ ನ ಅಧಿಕೃತ ಪ್ರದರ್ಶನ ಫೋಟೋ ಮತ್ತು ಬಯೋ ಗೋಚರಿಸುತ್ತದೆ.

NDRF ಅನ್ನು 2006 ರಲ್ಲಿ ದೇಶದ ಯಾವುದೇ ಪ್ರದೇಶದಲ್ಲಿಯೂ ಪ್ರಾಕೃತಿಕ ವಿಪತ್ತು, ಮತ್ತಿತರ ಅವಘಡಗಳಾದಾಗ ರಕ್ಷಣೆ ನೀಡುವ ಸಲುವಾಗಿ ಸ್ಥಾಪಿಸಲಾಯಿತು. ಇದು ಜನವರಿ 19 ರಂದು ತನ್ನ 17 ನೇ ರೈಸಿಂಗ್ ದಿನವನ್ನು ಆಚರಿಸಿತು.

ಇದನ್ನೂ ಓದಿ: Gmail New Feature: ಇನ್ಮುಂದೆ ಹ್ಯಾಕರ್ ಗಳು ನಿಮ್ಮ Gmail ಖಾತೆ ಹ್ಯಾಕ್ ಮಾಡಲು ಸಾಧ್ಯವಿಲ್ಲ, ಬರಲಿದೆ ಈ ಅದ್ಭುತ ವೈಶಿಷ್ಟ್ಯ

ಈ ಹಿಂದೆ, 2021ರ ಡಿ.12 ರಂದುಪ್ರಧಾನಿ ಮೋದಿಯವರ (PM Narendra Modi) ವೈಯಕ್ತಿಕ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಅವರ ಟ್ವಿಟ್ಟರ್​ ಖಾತೆಯನ್ನು ಹ್ಯಾಕ್​ ಮಾಡಿದ್ದಲ್ಲದೆ, ಅದರಲ್ಲಿ ಬಿಟ್​ಕಾಯಿನ್​ ವಿಚಾರಕ್ಕೆ ಸಂಬಂಧಪಟ್ಟ ಟ್ವೀಟ್ ಗಳನ್ನು ಮಾಡಿದ್ದರು.

ಅಲ್ಲದೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್​ ಖಾತೆ ಯನ್ನು 2022ರ ಜ.12 ರಂದು ಹ್ಯಾಕ್​ ಮಾಡಲಾಗಿತ್ತು. ಹ್ಯಾಕರ್ಸ್​ಗಳು, ಖಾತೆಯ ಹೆಸರನ್ನು ಎಲೋನ್​ ಮಸ್ಕ್ ​ಎಂದು ಬದಲಿಸಿದ್ದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News