NDA ನಾಯಕರಾಗಿ ನರೇಂದ್ರ ಮೋದಿ ಆಯ್ಕೆ.. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಬೆಂಬಲ

NDA meeting updates: 20 ನಾಯಕರು ಸಹಿ ಹಾಕುವ ಮೂಲಕ ನರೇಂದ್ರ ಮೋದಿಯವರನ್ನು ಎನ್‌ಡಿಎ ನಾಯಕರಾಗಿ ಆಯ್ಕೆ ಮಾಡಿದರು. 

Written by - Chetana Devarmani | Last Updated : Jun 5, 2024, 07:28 PM IST
  • ಎನ್‌ಡಿಎ ಸಭೆಯಲ್ಲಿ ಮಹತ್ವದ ತೀರ್ಮಾನ
  • ಪ್ರಧಾನಿ ನಿವಾಸದಲ್ಲಿ ನಡೆದ ಸಭೆ
  • NDA ನಾಯಕರಾಗಿ ನರೇಂದ್ರ ಮೋದಿ ಆಯ್ಕೆ
NDA ನಾಯಕರಾಗಿ ನರೇಂದ್ರ ಮೋದಿ ಆಯ್ಕೆ.. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಬೆಂಬಲ  title=

ನವದೆಹಲಿ: ಎನ್‌ಡಿಎಯ ಎಲ್ಲಾ ಸಹ ಪಕ್ಷಗಳು ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿವೆ. ಬುಧವಾರ ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು. 20 ನಾಯಕರು ಸಹಿ ಹಾಕುವ ಮೂಲಕ ನರೇಂದ್ರ ಮೋದಿಯವರನ್ನು ಎನ್‌ಡಿಎ ನಾಯಕರಾಗಿ ಆಯ್ಕೆ ಮಾಡಿದರು. ವಿಶೇಷವೆಂದರೆ ಈ ಪ್ರಸ್ತಾವನೆಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸಹ ಬೆಂಬಲ ಸೂಚಿಸಿ, ಸಹಿ ಹಾಕಿದ್ದಾರೆ.

ಪ್ರಧಾನಿ ನಿವಾಸದಲ್ಲಿ ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಘಟಕಗಳು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಬೆಂಬಲ ಪತ್ರವನ್ನು ಸಲ್ಲಿಸಿದವು.

ಇದನ್ನೂ ಓದಿ:  ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗೆ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಪ್ರಧಾನಿ ಮೋದಿ ಅವರನ್ನು ಎನ್‌ಡಿಎ ನಾಯಕರನ್ನಾಗಿ ಪರಿಗಣಿಸುವ ಪ್ರಸ್ತಾವನೆಯಲ್ಲಿ ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ಚಂದ್ರಬಾಬು ನಾಯ್ಡು, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಜೆಡಿಎಸ್ ಮುಖ್ಯಸ್ಥ ಹೆಚ್.‌ಡಿ ಕುಮಾರಸ್ವಾಮಿ, ಚಿರಾಗ್ ಪಾಸ್ವಾನ್, ಜೀತನ್ ರಾಮ್ ಮಾಂಝಿ, ಪವನ್ ಕಲ್ಯಾಣ್, ಸುನಿಲ್ ತಟ್ಕರೆ, ಅನುಪ್ರಿಯಾ ಪಟೇಲ್, ಜಯಂತ್ ಚೌಧರಿ, ಪ್ರಫುಲ್ ಪಟೇಲ್, ಪ್ರಮೋದ್ ಬೊರೊ, ಅತುಲ್ ಬೋರಾ, ಇಂದ್ರಾ ಹಂಗ್ ಸಬ್ಕಾ, ಸುದೇಶ ಮಹತೋ, ರಾಜೀವ್ ರಂಜನ್ ಸಿಂಗ್, ಸಂಜಯ್ ಝಾ ಸಹಿ ಮಾಡಿದ್ದಾರೆ.
ಸುತ್ತದೆ.

ರಾಷ್ಟ್ರಪತಿಗಳು ಎನ್‌ಡಿಎ ಸಂಸದರನ್ನು ಭೇಟಿಯಾಗಲು ಸಮಯ ನೀಡಿದ್ದಾರೆ. ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ನಂತರವೇ ಪ್ರಧಾನಿ ಮೋದಿ ಮೂರನೇ ಬಾರಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎನ್ನಲಾಗಿದೆ. ಜೂನ್ 7 ರಂದು, ರಾಷ್ಟ್ರಪತಿಗಳು ಸಂಜೆ 5 ರಿಂದ 7 ರವರೆಗೆ ಸಂಸದರನ್ನು ಭೇಟಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಎನ್‌ಡಿಎ ಮಿತ್ರಪಕ್ಷಗಳ ಸಂಸದರು ಉಪಸ್ಥಿತರಿರುತ್ತಾರೆ.

ಇದನ್ನೂ ಓದಿ:  ಚುನಾವಣೆ ಗೆದ್ದ ಬಳಿಕ ಗೆಲುವಿನ ಹರ್ಷದೊಂದಿಗೆ ಹುಬ್ಬಳ್ಳಿಗೆ ಬಂದ ಶೆಟ್ಟರ್: ಸಿದ್ಧಾರೂಢರ ದರ್ಶನ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News