ದಕ್ಷಿಣ ಭಾರತದ ಮೊದಲ ಬಿಎಸ್ಪಿ ಸಚಿವರಾಗಿ ಎನ್.ಮಹೇಶ್ ರಿಂದ ಪ್ರಮಾಣವಚನ ಸ್ವೀಕಾರ

   

Last Updated : Jun 6, 2018, 07:00 PM IST
ದಕ್ಷಿಣ ಭಾರತದ ಮೊದಲ ಬಿಎಸ್ಪಿ ಸಚಿವರಾಗಿ ಎನ್.ಮಹೇಶ್ ರಿಂದ ಪ್ರಮಾಣವಚನ ಸ್ವೀಕಾರ title=
Photo courtesy: Facebook

ಬೆಂಗಳೂರು: ಬಹುಜನ ಪಕ್ಷದ ಮೂಲಕ ಸ್ಪರ್ಧಿಸಿ ಮೂರು ಬಾರಿ ಸೋಲನ್ನು ಅನುಭವಿಸಿದ್ದ ಎನ್ ಮಹೇಶ್ ನಾಲ್ಕನೇ ಯತ್ನದಲ್ಲಿ ಗೆಲುವನ್ನು ಕಂಡಿದ್ದರು. ಆ ಮೂಲಕ ದಕ್ಷಿಣ ಭಾರತದಲ್ಲಿನ ಏಕೈಕ ಬಿಎಸ್ಪಿ ಶಾಸಕ ಎಂದು ಖ್ಯಾತಿ ಪಡೆದಿದ್ದಾರೆ.

ಈ ಬಾರಿ ರಾಜ್ಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಎಸ್ಪಿಯೊಂದಿಗೆ ಮೈತ್ರಿಯನ್ನು ಸಾಧಿಸಿದರ ಫಲವಾಗಿ ಕರ್ನಾಟಕದಲ್ಲಿ ಬಿಎಸ್ಪಿ ಗೆಲುವಿನ ಖಾತೆಯನ್ನು ತೆರೆದಿದೆ. ಅದರ ಪ್ರತಿಫಲವಾಗಿ ಈಗ ಎನ್ ಮಹೇಶ್ ಅವರು  ಮಂತ್ರಿ ಸ್ಥಾನದ ಸೌಭಾಗ್ಯವನ್ನು ಪಡೆದಿದ್ದಾರೆ.

ಇಂದು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತಿದ್ದ ಸಂದರ್ಭದಲ್ಲಿ  ಬುದ್ಧ, ಬಸವ, ಅಂಬೇಡ್ಕರ್​ ರನ್ನು ಸ್ಮರಿಸಿದರು. ಆ ಮೂಲಕ ಉತ್ತರ ಪ್ರದೇಶವೊಂದನ್ನು ಹೊರತುಪಡಿಸಿ ದೇಶದ ಇತರ ಭಾಗದಲ್ಲಿ ಸಚಿವರಾಗಿ ಆಯ್ಕೆಯಾದ ಮೊದಲ ಸಚಿವ ಎನ್ನುವ ಹಿರಿಮೆಗೆ ಪಾತ್ರರಾದರು,
 
ಈವರೆಗೂ ಕರ್ನಾಟಕದಲ್ಲಿ ಬಿಎಸ್​ಪಿಯು 1994ರಲ್ಲಿ ಬೀದರ್​ ಭಾಗದಿಂದ ಗೆಲುವು ಸಾಧಿಸಿದ್ದೆ ಅಂತಿಮ ಗೆಲುವಾಗಿತ್ತು ಎನ್ನಬಹುದು. ಈಗ ಸಚಿವರಾಗಿ ಆಯ್ಕೆಯಾಗಿರುವ ಮಹೇಶ್​ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಈಗ ಮೊದಲ ಗೆಲುವಿನಲ್ಲೇ ಅವರು ಸಚಿವರು  ಕೂಡ ಆಗಿರುವುದು ವಿಶೇಷವೆಂದೆ ಹೇಳಬಹುದು.

Trending News