ನವಜಾತ ಶಿಶುಗೆ 'ನರೇಂದ್ರ ಮೋದಿ' ಹೆಸರಿಟ್ಟ ಮುಸ್ಲಿಂ ಕುಟುಂಬ!

ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಮುಸ್ಲಿಂ ಪರಿವಾರ ತಮ್ಮ ಮಗುವಿಗೆ ಮೋದಿ ಹೆಸರಿಟ್ಟಿದ್ದಾರೆ.

Last Updated : May 26, 2019, 12:14 PM IST
ನವಜಾತ ಶಿಶುಗೆ 'ನರೇಂದ್ರ ಮೋದಿ' ಹೆಸರಿಟ್ಟ ಮುಸ್ಲಿಂ ಕುಟುಂಬ! title=

ಲಕ್ನೋ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ್ದು, ಎಲ್ಲವೂ ಕೇಸರಿಮಯವಾಗಿದೆ. ಇಡೀ ದೇಶದ ಜನತೆ ಪ್ರಧಾನಿ ಮೋದಿ ಅವರ ಕಾರ್ಯವೈಖರಿಗೆ, ದೇಶದ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳನ್ನು ಕಂಡು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲೆಡೆ ಮೋದಿ, ಮೋದಿ ಕೂಗು ಕೇಳಿ ಬರುತ್ತಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಗೆಲುವನ್ನು ಸಂಭ್ರಮಿಸುವ ಸಲುವಾಗಿ ಮುಸ್ಲಿಂ ದಂಪತಿಗಳು ಮೇ 23ರಂದು ಹುಟ್ಟಿದ ತಮ್ಮ ಗಂಡು ಮಗುವಿಗೆ 'ನರೇಂದ್ರ ಮೋದಿ' ಎಂದು ನಾಮಕರಣ ಮಾಡಿ, ಮೋದಿ ಮೇಲಿನ ಅಭಿಮಾನವನ್ನು ಪ್ರದರ್ಶಿಸಿದ್ದಾರೆ.

ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಮುಸ್ಲಿಂ ಪರಿವಾರ ತಮ್ಮ ಮಗುವಿಗೆ ಮೋದಿ ಹೆಸರಿಟ್ಟಿದ್ದಾರೆ. ಎಎನ್ಐ ಜೊತೆ ಮಾತನಾಡಿದ ಮಗುವಿನ ತಾಯಿ ಮಿನಾಜ್ ಬೇಗಂ, ಪ್ರಧಾನಿ ಮೋದಿ ಅವರ ಆದರ್ಶಗಳನ್ನು ನನ್ನ ಮಗನೂ ಪಾಲಿಸಬೇಕು. ಇವನು ಮೇ 23ರಂದು ಹುಟ್ಟಿದ ಕೂಡಲೇ ನಾನು ದುಬೈನಲ್ಲಿರುವ ನನ್ನ ಪತಿಗೆ ಕರೆ ಮಾಡಿದ್ದೆ. ಆಗ ಅವರು ನರೇಂದ್ರ ಮೋದಿ ಚುನಾವಣೆಯಲ್ಲಿ ಗೆದ್ದರಾ? ಎಂದು ಕೇಳಿದರು. ಹಾಗಾಗಿ ನಾನು ಮೋದಿ ಹೆಸರನ್ನೇ ಮಗನಿಗೆ ಇಟ್ಟಿದ್ದೇನೆ. ನನ್ನ ಮಗ ಸಹ ನರೇಂದ್ರ ಮೊದಿಯನ್ತೆಯೇ ಒಳ್ಳೆಯ ಕೆಲಸಗಳನ್ನು ಮಾಡಿ, ಯಶಸ್ಸು ಗಳಿಸಲಿ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಶನಿವಾರ "ನರ" ಎಂಬ ಪದವನ್ನು ಘೋಷಣೆ  ಮಾಡಿದ್ದು, "ರಾಷ್ಟ್ರೀಯ ಮಹತ್ವಾಕಾಂಕ್ಷೆ" ಮತ್ತು "ಪ್ರಾದೇಶಿಕ ಮಹತ್ವಾಕಾಂಕ್ಷೆ" ಎಂಬ ಅರ್ಥವನ್ನು ವ್ಯಕ್ತಪಡಿಸಿದ್ದಾರೆ. ಅಂದರೆ ನೂತನವಾಗಿ ಅಧಿಕಾರಕ್ಕೆ ಬರಲಿರುವ ಮೋದಿ ನೇತೃತ್ವದ ಸರ್ಕಾರ, ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಜನರ ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ಮೋದಿ ಹೇಳಿದ್ದಾರೆ. 

Trending News