ಗುಪ್ತಚರಸಂಸ್ಥೆಗಳ ಎಚ್ಚರಿಕೆ ಹಿನ್ನೆಲೆ : ಆಗಸ್ಟ್ 15 ರೊಳಗೆ ದೆಹಲಿಯಿಂದ ಜಮ್ಮು ಕಾಶ್ಮೀರದವರೆಗೆ ಮಲ್ಟಿ ಟೆರರ್ ಅಲರ್ಟ್

ದೆಹಲಿ ಪೊಲೀಸ್,  ಜಿಆರ್‌ಪಿ, ಸ್ಥಳೀಯ ಪೊಲೀಸ್ ಮತ್ತು ರಾಜ್ಯಗಳ ಗುಪ್ತಚರ ಸಂಸ್ಥೆಗಳಿಗೆ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. 

Written by - Ranjitha R K | Last Updated : Aug 12, 2021, 02:53 PM IST
  • 75 ನೇ ಸ್ವಾತಂತ್ರ್ಯ ದಿನದಂದು ಭಯೋತ್ಪಾದಕ ದಾಳಿ ಎಚ್ಚರಿಕೆ
  • ಎಚ್ಚರಿಕೆ ನೀಡಿರುವ ಗುಪ್ತಚರ ಸಂಸ್ಥೆಗಳು
  • ಜೈಶ್ ಮತ್ತು ಲಷ್ಕರ್ ಭಯೋತ್ಪಾದಕರುದಾಳಿ ನಡೆಸುವ ಸಾಧ್ಯತೆ
ಗುಪ್ತಚರಸಂಸ್ಥೆಗಳ ಎಚ್ಚರಿಕೆ ಹಿನ್ನೆಲೆ : ಆಗಸ್ಟ್ 15 ರೊಳಗೆ ದೆಹಲಿಯಿಂದ ಜಮ್ಮು ಕಾಶ್ಮೀರದವರೆಗೆ ಮಲ್ಟಿ ಟೆರರ್ ಅಲರ್ಟ್  title=
75 ನೇ ಸ್ವಾತಂತ್ರ್ಯ ದಿನದಂದು ಭಯೋತ್ಪಾದಕ ದಾಳಿ ಎಚ್ಚರಿಕೆ (photo zee news)

ನವದೆಹಲಿ : 75 ನೇ ಸ್ವಾತಂತ್ರ್ಯ ದಿನಾಚರಣೆಯ (75th Inependence day) ಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆ,  ಭಯೋತ್ಪಾದಕ ದಾಳಿಯ (Terror attack) ಎಚ್ಚರಿಕೆಯನ್ನು ಗುಪ್ತಚರ ಸಂಸ್ಥೆಗಳು ನೀಡಿವೆ. ರಾಷ್ಟ್ರ ರಾಜಧಾನಿ ಸೇರಿದಂತೆ ಇತರ ರಾಜ್ಯಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಜೈಶ್ ಮತ್ತು ಲಷ್ಕರ್ ದೇಶದಲ್ಲಿ ದಾಳಿ ನಡೆಸಬಹುದು ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆಯನ್ನು ನೀಡಿವೆ.

ಗುಪ್ತಚರ ಸಂಸ್ಥೆಗಳ ಎಚ್ಚರಿಕೆ : 
ದೆಹಲಿ ಪೊಲೀಸ್ (Delhi Police), ಜಿಆರ್‌ಪಿ, ಸ್ಥಳೀಯ ಪೊಲೀಸ್ ಮತ್ತು ರಾಜ್ಯಗಳ ಗುಪ್ತಚರ ಸಂಸ್ಥೆಗಳಿಗೆ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಪ್ರಮುಖ ಭದ್ರತಾ ಸ್ಥಾಪನೆಗಳು, ಸೇನೆಯ ಫಾರ್ವರ್ಡ್ ಪೋಸ್ಟ್‌ಗಳು ಮತ್ತು ಯೋಧರ ಮೇಲೆ ಭಯೋತ್ಪಾದಕರ ರೇಡಾರ್‌ನಲ್ಲಿ ಗುರಿಯಿಟ್ಟಿದ್ದಾರೆ ಎನ್ನಲಾಗಿದೆ. ಸ್ವಾತಂತ್ರ್ಯ ದಿನದಂದು ಭಯೋತ್ಪಾದಕರು (terrorist) ಅತ್ಯಾಧುನಿಕ ಐಇಡಿಗಳನ್ನು (IED) ಬಳಸಿ ದಾಳಿ ನಡೆಸುವ ಸಾಧ್ಯಯೇ ಇದೆ ಎನ್ನಲಾಗಿದೆ. 

ಇದನ್ನೂ ಓದಿ  :  Train Ticket Booking: ಈಗ ಟ್ರೈನ್ ಟಿಕೆಟ್ ಬುಕಿಂಗ್ ವೇಳೆ ಈ ಮಾಹಿತಿ ನೀಡುವುದು ಕಡ್ಡಾಯ

ಏನಿದು ಅತ್ಯಾಧುನಿಕ ಐಇಡಿ : 
ಸಾರ್ವಜನಿಕ ಸ್ಥಳಗಳಲ್ಲಿ ಸ್ಪೋಟ ನಡೆಸಲು ಐಇಡಿಗಳನ್ನು ಬಳಸಬಹುದು. ಈ ಬಾರಿ ಭಯೋತ್ಪಾದಕರು ಅತ್ಯಾಧುನಿಕ ಐಇಡಿ ಬಳಸಬಹುದು. ಭಯೋತ್ಪಾದಕರು ಐಇಡಿಯಲ್ಲಿ 2 ಡಿಸ್ಟೆನ್ಸ್ ಆಯಸ್ಕಾಂತಗಳನ್ನು ಕೂಡ ಬಳಸುವ ಸಾಧ್ಯೆ ಇದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.  ಐಇಡಿ ಪ್ಲಾಂಟ್ ಮಾಡುವಾಗ ಯಾವುದೇ ತಪ್ಪುಗಳಾಗಿದ್ದಲ್ಲಿ,  ಮ್ಯಾಗ್ನೆಟ್  ಗಳ ಮೂಲಕ ಸರ್ಕ್ಯೂಟ್ ಪೂರ್ಣಗೊಳಿಸಲಾಗುತ್ತದೆ. ಹಾಗಾಗಿ ಇದನ್ನು ಅತ್ಯಾಧುನಿಕ ಐಇಡಿ ಎಂದು ಕರೆಯುತ್ತಾರೆ.

ಮೆಟಲ್ ಡೆಟೆಕ್ಟರ್  ಅನ್ನು ಕೂಡಾ ವಿಫಲಗೊಳಿಸುವ ತಯಾರಿ :  
ಈ ಕುರಿತು ಎಲ್ಲಾ ಏಜೆನ್ಸಿಗಳಿಗೆ ವಿಶೇಷ ಎಚ್ಚರಿಕೆ ನೀಡಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಲ್ಲಿ, ಅದನ್ನು ಬಹಳ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.  ಅತ್ಯಾಧುನಿಕ ಐಇಡಿ ಅನ್ನು ಪತ್ತೆ ಹಚ್ಚಲು ಮೆಟಲ್ ಡಿಟೆಕ್ಟರ್ ಗು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಆದ್ದರಿಂದ ಮೆಟಲ್ ಡಿಟೆಕ್ಟರ್‌ನಲ್ಲಿ (metal detector) ನಿಯೋಜನೆಗೊಂಡಿರುವ ಪೊಲೀಸರು ಕೂಡ ವಿಶೇಷ ಕಾಳಜಿ ವಹಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ : Encounter in Delhi: ಎನ್‌ಕೌಂಟರ್‌ನಲ್ಲಿ ಇಬ್ಬರು ಗ್ಯಾಂಗ್ಸ್ಟರ್ಸ್ ಸಾವು, 2 ದೆಹಲಿ ಪೊಲೀಸ್ ಸಿಬ್ಬಂದಿಗೆ ಗಾಯ

ಭಾರತದೊಳಗೆ ನುಸುಳಲು ಸಂಚು : 
ಲಷ್ಕರ್ (lashkar) ಕಮಾಂಡರ್ ಮೊಹಮ್ಮದ್ ಸಾದಿಕ್ ನೇತೃತ್ವದಲ್ಲಿ 6 ಲಷ್ಕರ್ ಭಯೋತ್ಪಾದಕರು ಆಗಸ್ಟ್ 15 ರ ಮೊದಲು ಜಮ್ಮು ಮತ್ತು ಕಾಶ್ಮೀರದ ಮೂಲಕ ದೇಶಕ್ಕೆ ನುಸುಳಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ. ಜೈಷ್-ಎ-ಮೊಹಮ್ಮದ್ (jaish e mohammed) ಎಂಬ ಭಯೋತ್ಪಾದಕ ಸಂಘಟನೆಯ 5 ಭಯೋತ್ಪಾದಕರು ಪಿಒಕೆಯಲ್ಲಿರುವ (POK) ತಡೋಟೆ  ಹೆಸರಿನ ಲಾಂಚ್ ಪ್ಯಾಡ್‌ನಲ್ಲಿ ಬೀಡುಬಿಟ್ಟಿದ್ದಾರೆ. ಈ ಲಾಂಚ್ ಪ್ಯಾಡ್ ಬಾಲಾಕೋಟ್ ಗೆ ಹತ್ತಿರದ ಪ್ರದೇಶವಾಗಿದೆ. ಜೈಶ್‌ನ ಈ 5 ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಮೂಲಕ ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ಐಇಡಿ ಸ್ಫೋಟವನ್ನು ನಡೆಸಬಹುದು ಎಂದು ತಿಳಿದು ಬಂದಿದೆ. 

ಇನ್ನೊಂದು ಎಚ್ಚರಿಕೆಯಲ್ಲಿ, 4 ಲಷ್ಕರ್ ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ 4 ಭಯೋತ್ಪಾದಕರ ಗುಂಪು ಪಿಒಕೆಯ ತುಂಡ್ವಾಲಾ ಅರಣ್ಯ ಪ್ರದೇಶದ ಲಾಂಚಿಂಗ್ ಪ್ಯಾಡ್‌ನಲ್ಲಿದೆ. ಈ 4 ಲಷ್ಕರ್ ಭಯೋತ್ಪಾದಕರ ಯೋಜನೆ ಮೊದಲು ಒಳನುಸುಳುವುದು ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸುವುದಾಗಿದೆ . 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News