ನವದೆಹಲಿ: ಭಯೋತ್ಪಾದಕ ದಾಳಿಯ ಕುರಿತು ಮುಂಬೈ ಪೊಲೀಸ್ (Mumbai police) ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಆರೋಪದ ಮೇಲೆ ಮಧ್ಯಪ್ರದೇಶ (Madhya Pradesh) ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಜಿತೇಶ್ ಠಾಕೂರ್ (35) ಎಂದು ಗುರುತಿಸಲಾಗಿದ್ದು, ಆರೋಪಿ ನಿರುದ್ಯೋಗಿ ಮತ್ತು ಮದ್ಯಪಾನ ಮಾಡುತ್ತಾನೆ ಎಂದು ತಿಳಿದುಬಂದಿದೆ. ಜನವರಿ 6 ರಂದು ಮುಂಬೈ ಪೊಲೀಸರಿಗೆ ಕರೆ (Threaten call) ಮಾಡಿದ್ದಾನೆ. ಮಹಾರಾಷ್ಟ್ರ ಪೊಲೀಸರು, ಜಬಲ್‌ಪುರದ ಹೆಚ್ಚುವರಿ ಅಧೀಕ್ಷಕರು ಹಂಚಿಕೊಂಡ ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಅವರನ್ನು ಶನಿವಾರ ಇಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೋಪಾಲ್ ಖಂಡೇಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ
ಮುಂಬೈ ಪೊಲೀಸರ ಪ್ರಕಾರ, ತಾನು ಸೇನೆಯಿಂದ ಬಂದವನೆಂದು ವ್ಯಕ್ತಿ ಹೇಳಿಕೊಂಡಿದ್ದಾನೆ ಮತ್ತು ಮುಂಬೈನಲ್ಲಿ ಪರಮಾಣು ಬಾಂಬ್ ದಾಳಿ ನಡೆಸಲಾಗುವುದು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (CSMT), ಕುರ್ಲಾ ರೈಲು ನಿಲ್ದಾಣ, ನಟ ಶಾರುಖ್ ಖಾನ್ (Shah Rukh Khan) ಅವರ ಮನ್ನತ್ ಬಂಗಲೆ ಮತ್ತು ನೆರೆಯ ನವಿ ಮುಂಬೈನ ಖಾರ್ಘರ್‌ನಲ್ಲಿರುವ ಗುರುದ್ವಾರದ ಬಳಿ ಬಾಂಬ್ ದಾಳಿ ನಡೆಯಲಿದೆ ಎಂದು ಹೇಳಿದ್ದಾನೆ.
ಕರೆಯು ವಿವಿಧ ಸ್ಥಳಗಳಲ್ಲಿ ಹುಡುಕಾಟವನ್ನು ಪ್ರೇರೇಪಿಸಿತು, ಆದರೆ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೋಪಾಲ್ ಖಂಡೇಲ್ ಹೇಳಿದ್ದಾರೆ.
ಈ ವ್ಯಕ್ತಿ ಈ ಹಿಂದೆಯೂ ಸುಳ್ಳು ಕರೆಗಳನ್ನು ಮಾಡಿದ್ದ ಮತ್ತು ಪೊಲೀಸ್ ಎಸ್‌ಒಎಸ್ ಸೇವೆಯಾದ ಡಯಲ್ 100 ನ ಸಿಬ್ಬಂದಿಯೊಂದಿಗೆ ಹಲವಾರು ಸಂದರ್ಭಗಳಲ್ಲಿ ಜಗಳವಾಡಿದ್ದಾನೆ ಎಂದಿದ್ದಾರೆ.
ಆರೋಪಿಯ ವಿರುದ್ಧ ಕ್ರಿಮಿನಲ್ ಬೆದರಿಕೆ ಮತ್ತು ಸಾರ್ವಜನಿಕ ಸೇವಕರಿಗೆ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಸಂಜೀವನಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಶನಿವಾರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Pig heart to Human:ಮಾನವನಿಗೆ 'ಹಂದಿ ಹೃದಯ' ಅಳವಡಿಸಿದ ವೈದ್ಯರ ತಂಡ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.