ನಿರುದ್ಯೋಗ, ಸಾಲದ ಸಮಸ್ಯೆ: 2018-20ರಲ್ಲಿ ಎಷ್ಟು ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಾ..?

ಮಹಾರಾಷ್ಟ್ರದಲ್ಲಿ 19,909 ಆತ್ಮಹತ್ಯೆಗಳು ವರದಿಯಾಗಿವೆ. ತಮಿಳುನಾಡು (16,883), ಮಧ್ಯಪ್ರದೇಶ (14,578), ಪಶ್ಚಿಮ ಬಂಗಾಳ (13,103) ಮತ್ತು ಕರ್ನಾಟಕ (12,259) ನಂತರದ ಸ್ಥಾನದಲ್ಲಿವೆ.

Written by - Puttaraj K Alur | Last Updated : Feb 9, 2022, 09:27 PM IST
  • 2018ರಿಂದ 2020ರ ನಡುವೆ ಭಾರತದಲ್ಲಿ ನಿರುದ್ಯೋಗ, ಸಾಲದ ಸಮಸ್ಯೆಯಿಂದ 25 ಸಾವಿರಕ್ಕೂ ಹೆಚ್ಚು ಜನರ ಆತ್ಮಹತ್ಯೆ
  • 9,140 ಜನರು ನಿರುದ್ಯೋಗದಿಂದ ಮತ್ತು 16,091 ಜನರು ಸಾಲದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ
  • ಅಂಕಿಅಂಶಗಳ ಪ್ರಕಾರ 2020ರ ಸಾಂಕ್ರಾಮಿಕ ವರ್ಷದಲ್ಲಿ ನಿರುದ್ಯೋಗಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ
ನಿರುದ್ಯೋಗ, ಸಾಲದ ಸಮಸ್ಯೆ: 2018-20ರಲ್ಲಿ ಎಷ್ಟು ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಾ..? title=
NCRB ದತ್ತಾಂಶದಲ್ಲಿ ಆಘಾತಕಾರಿ ಮಾಹಿತಿ

ನವದೆಹಲಿ: 2018ರಿಂದ 2020ರ ನಡುವೆ ಭಾರತದಲ್ಲಿ ನಿರುದ್ಯೋಗ ಅಥವಾ ಸಾಲದ ಸಮಸ್ಯೆ(Unemployment and Bankruptcy)ಯಿಂದ 25 ಸಾವಿರಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಅವಧಿಯಲ್ಲಿ 9,140 ಜನರು ನಿರುದ್ಯೋಗದಿಂದ ಮತ್ತು 16,091ಜನರು ಆರ್ಥಿಕ ದಿವಾಳಿತನ ಅಥವಾ ಸಾಲದ ಕಾರಣ(Inability to Pay Loans)ದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಕೇಂದ್ರ ಸರ್ಕಾರವು ಬುಧವಾರ ಮೇಲ್ಮನೆಗೆ ಮಾಹಿತಿ ನೀಡಿದೆ.

ರಾಜ್ಯಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನ(Budget Session)ದ ಚರ್ಚೆ ವೇಳೆ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ(Nityanand Rai), ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(NCRB) ಒದಗಿಸಿದ ದತ್ತಾಂಶವನ್ನು ಆಧರಿಸಿ ಈ ಅಂಕಿಅಂಶಗಳನ್ನು ನೀಡಲಾಗಿದೆ’ ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: ವಂಶದ ರಾಜಕಾರಣ ಪ್ರಜಾಪ್ರಭುತ್ವದ ದೊಡ್ಡ ಶತ್ರು-ಪ್ರಧಾನಿ ಮೋದಿ

ಕಳೆದ ಕೆಲವು ವಾರಗಳಿಂದ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರ(Central Government)ದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ನಿರುದ್ಯೋಗ ಸಮಸ್ಯೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೇಶದ ಜನರಿಗೆ ಒಳ್ಳೆಯ ದಿನಗಳು ದುರ್ಗಮವಾಗಿವೆ ಅಂತಾ ಈ ಅಂಕಿ ಅಂಶಗಳನ್ನು ಉಲ್ಲೇಖಿಸಿ ಟೀಕಸಿದ್ದರು.

ಅಂಕಿಅಂಶಗಳ ಪ್ರಕಾರ 2020ರ ಸಾಂಕ್ರಾಮಿಕ(COVID-19)ವರ್ಷದಲ್ಲಿ ನಿರುದ್ಯೋಗಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಅತಿಹೆಚ್ಚು(3,548) ಪ್ರಕರಣಗಳು ದಾಖಲಾಗಿವೆ. 2018ರಲ್ಲಿ 2,741 ಮಂದಿ ನಿರುದ್ಯೋಗದ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ, 2019ರಲ್ಲಿ 2,851 ಮಂದಿ ಉದ್ಯೋಗವಿಲ್ಲದೆ ಸಾವಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ನಮ್ಮ ದೇಶಕ್ಕೆ ಪಾಠ ಮಾಡಬೇಡಿ: ಪಾಕ್​ಗೆ ಓವೈಸಿ ತಿರುಗೇಟು

2020ರಲ್ಲಿ ಕನಿಷ್ಠ 5,213 ಜನರು ದಿವಾಳಿತನ ಅಥವಾ ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, 2019ರಲ್ಲಿ 5,908 ಮತ್ತು 2018ರಲ್ಲಿ 4,970 ಜನರು ಈ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ಎನ್‌ಸಿಆರ್‌ಬಿ ದತ್ತಾಂಶ(NCRB Data)ವು 2020ರಲ್ಲಿ ದೇಶದಲ್ಲಿ ಒಟ್ಟು 153,052 ಆತ್ಮಹತ್ಯೆಗಳನ್ನು ದಾಖಲಿಸಿದೆ. ಇದು 2019ಕ್ಕೆ ಹೋಲಿಸಿದರೆ ಶೇ.10ರಷ್ಟು ಹೆಚ್ಚಳವಾಗಿದೆ. 2019ಕ್ಕಿಂತ 2020ರ ಅವಧಿಯಲ್ಲಿ ಆತ್ಮಹತ್ಯೆಗಳ ಪ್ರಮಾಣವು ಶೇ.8.7ರಷ್ಟು ಹೆಚ್ಚಾಗಿದೆ. ಆತ್ಮಹತ್ಯೆಗಳ ಪ್ರಮಾಣವು ಪ್ರತಿ 1,00,000 ಜನಸಂಖ್ಯೆಗೆ ಆಗಿವೆ ಎಂದು ತಿಳಿದುಬಂದಿವೆ.  

ಮಹಾರಾಷ್ಟ್ರದಲ್ಲಿ 19,909 ಆತ್ಮಹತ್ಯೆಗಳು ವರದಿ(Indians Suicide)ಯಾಗಿವೆ. ತಮಿಳುನಾಡು (16,883), ಮಧ್ಯಪ್ರದೇಶ (14,578), ಪಶ್ಚಿಮ ಬಂಗಾಳ (13,103) ಮತ್ತು ಕರ್ನಾಟಕ (12,259) ನಂತರದ ಸ್ಥಾನದಲ್ಲಿವೆ. ಈ ರಾಜ್ಯಗಳು ಒಟ್ಟು ಆತ್ಮಹತ್ಯೆಗಳಲ್ಲಿ ಕ್ರಮವಾಗಿ ಶೇ.13, ಶೇ.11, ಶೇ.9.5, ಶೇ.8.6 ಮತ್ತು ಶೇ.8 ರಷ್ಟಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News