ಗ್ಲೋಬಲ್ ಎಂಟರ್ಪ್ರೆನರ್ಶಿಪ್ ಶೃಂಗಸಭೆಯಲ್ಲಿ ಮೋದಿ-ಇವಾಂಕ ಭೇಟಿ

                        

Last Updated : Nov 28, 2017, 05:12 PM IST
ಗ್ಲೋಬಲ್ ಎಂಟರ್ಪ್ರೆನರ್ಶಿಪ್ ಶೃಂಗಸಭೆಯಲ್ಲಿ ಮೋದಿ-ಇವಾಂಕ ಭೇಟಿ title=

ಭಾರತ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಆಯೋಜನೆಯಲ್ಲಿ ನಡೆದ ಗ್ಲೋಬಲ್ ಎಂಟರ್ಪ್ರೆನರ್ಶಿಪ್ ಶೃಂಗಸಭೆ- 2017 ರಲ್ಲಿ ಪ್ರಧಾನಿ ಮೋದಿ ಮತ್ತು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಮತ್ತು ಸಲಹೆಗಾರರಾದ ಇವಾಂಕಾ ಟ್ರಂಪ್ ಶೃಂಗಸಭೆ ಆರಂಭವಾಗುವ ಸ್ವಲ್ಪ ಸಮಯದ ಮುಂಚಿತವಾಗಿ ಭೇಟಿ ಮಾಡಿದರು. ಮೋದಿ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇವಾಂಕ ಅವರನ್ನು ಭೇಟಿ ಮಾಡಿದರು. ಆ ಸಂದರ್ಭದಲ್ಲಿ ಇಬ್ಬರು ಮಹಿಳಾ ಉದ್ಯಮಶೀಲತೆ ಮತ್ತು ಸಬಲೀಕರಣದ ಬಗ್ಗೆ ಉತ್ಕೃಷ್ಟ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 

ನೀತಿ ಆಯೋಗ್ ಸಿಇಒ ಅಮಿತಾಭ್ ಕಾಂಟ್ ಪ್ರಕಾರ ಶೃಂಗಸಭೆ ಪ್ರಾಥಮಿಕವಾಗಿ ನಾಲ್ಕು ವಿಷಯಾಧಾರಿತ ವಲಯಗಳಾದ - ಶಕ್ತಿ ಮತ್ತು ಮೂಲಸೌಕರ್ಯ; ಆರೋಗ್ಯ ಮತ್ತು ಜೀವ ವಿಜ್ಞಾನಗಳು; ಹಣಕಾಸು ತಂತ್ರಜ್ಞಾನ ಮತ್ತು ಡಿಜಿಟಲ್ ಆರ್ಥಿಕತೆ ಮತ್ತು ಮಾಧ್ಯಮ ಮತ್ತು ಮನರಂಜನಾ ವಲಯಗಳ ಮೇಲೆ ಕೇಂದ್ರಿಕೃತವಾಗಿರುತ್ತದೆ ಎಂದು ತಿಳಿದುಬಂದಿದೆ.

Trending News