ರ‍್ಯಾಲಿಯಲ್ಲಿ ಭಾಷಣಕ್ಕೆ ಸಿಗಲಿಲ್ಲ ಅವಕಾಶ: 'ಮಿಸ್ ಯು ಪಪ್ಪಾ' ಎಂದು ಟ್ವೀಟ್ ಮಾಡಿದ ತೇಜ್ ಪ್ರತಾಪ್ ಯಾದವ್

ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖಂಡ ಲಾಲು ಪ್ರಸಾದ್ ಯಾದವ್ ನೆನೆದು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಶುಕ್ರವಾರ  ಭಾವನಾತ್ಮಕ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. 

Last Updated : May 17, 2019, 01:11 PM IST
ರ‍್ಯಾಲಿಯಲ್ಲಿ ಭಾಷಣಕ್ಕೆ ಸಿಗಲಿಲ್ಲ ಅವಕಾಶ: 'ಮಿಸ್ ಯು ಪಪ್ಪಾ' ಎಂದು ಟ್ವೀಟ್ ಮಾಡಿದ ತೇಜ್ ಪ್ರತಾಪ್ ಯಾದವ್ title=
Image Courtesy: Instagram/@tejpratapyadavrjd

ಪಾಟ್ನಾ: ಪಾಟಲಿಪುತ್ರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಲು ಅವಕಾಶ ನಿರಾಕರಿಸಿದ ಬಳಿಕ ತನ್ನ ತಂದೆ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖಂಡ ಲಾಲು ಪ್ರಸಾದ್ ಯಾದವ್ ನೆನೆದು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಶುಕ್ರವಾರ  ಭಾವನಾತ್ಮಕ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. 

"ನನ್ನ ತಂದೆಯ ಅನುಪಸ್ಥಿತಿಯ ಕಾರಣದಿಂದ ನನಗೆ ಮಾತನಾಡಲುಅನುಮತಿ ನೀಡಲಿಲ್ಲ. ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಪ್ಪಾ" ಎಂದು ತಂದೆಯೊಂದಿಗಿನ ಕಾರ್ಟೂನ್ ಜೊತೆ ತೇಜ್ ಪ್ರತಾಪ್ ಟ್ವೀಟ್ ಮಾಡಿದ್ದಾರೆ.

ಸದ್ಯ ಅರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಬಹುಕೋಟಿ ಮೇವು ಹರಗಣ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. 

Trending News