ಸಹೋದರರು, ಚಿಕ್ಕಪ್ಪನಿಂದ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್, ಬಳಿಕ ತಲೆ ಕತ್ತರಿಸಿ ಹತ್ಯೆ!

ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 12 ವರ್ಷದ ಬಾಲಕಿ ಮಾರ್ಚ್ 13ರಂದು ಶಾಲೆಗೇ ಹೋದವಳು ಮನೆಗೆ ಹಿಂತಿರುಗದ ಕಾರಣ ಆಕೆಗಾಗಿ ಕುಟುಂಬದವರು ಎಲ್ಲೆಡೆ ಹುಡುಕಾಟ ನಡೆಸಿದ್ದರು.

Last Updated : Mar 19, 2019, 01:50 PM IST
ಸಹೋದರರು, ಚಿಕ್ಕಪ್ಪನಿಂದ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್, ಬಳಿಕ ತಲೆ ಕತ್ತರಿಸಿ ಹತ್ಯೆ! title=

ಸಾಗರ: ಮಧ್ಯಪ್ರದೇಶದ ಸಾಗರದಲ್ಲಿ12 ವರ್ಷದ ದಲಿತ ಬಾಲಕಿಯನ್ನು ಅಪಹರಿಸಿದ ಸಹೋದರರು ಮತ್ತು ಚಿಕ್ಕಪ್ಪ ಸಾಮೂಹಿಕ ಅತ್ಯಾಚಾರ ನಡೆಸಿ, ಕಟ್ಟು ಹಿಸುಕಿ ತಲೆ ಕತ್ತರಿಸಿ ಹತ್ಯೆ ಮಾಡಿರುವ ಅಮಾನುಷ ಘಟನೆ ನಡೆದಿದೆ. 

ಘಟನೆ ಸಂಬಂಧ ಅಪ್ರಾಪ್ತ ಬಾಲಕಿಯ ಮೂವರು ಸಹೋದರರು, ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಪೊಲೀಸರು ಬಂಧಿಸಿದ್ದು, ಇವರಲ್ಲಿ ಓರ್ವ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 12 ವರ್ಷದ ಬಾಲಕಿ ಮಾರ್ಚ್ 13ರಂದು ಶಾಲೆಗೇ ಹೋದವಳು ಮನೆಗೆ ಹಿಂತಿರುಗದ ಕಾರಣ ಆಕೆಗಾಗಿ ಕುಟುಂಬದವರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಬಳಿಕ ಆಕೆಯ ತಂದೆ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಆದರೆ, ಒಂದು ದಿನದ ಬಳಿಕ ಬರ್ಖೇಡಿ ಗ್ರಾಮದ ಹೊರವಲಯದಲ್ಲಿ ಬಾಲಕಿಯ ಮೃತದೇಹ ತಲೆ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

ಅದೇ ಗ್ರಾಮದ ವಾಸಿಯಾಗಿದ್ದ ಚೋಟೆ ಪಟೇಲ್‌ ಎಂಬಾತ ಹತ್ಯೆ ಮಾಡಿರುವ ಕುರಿತು ಆಕೆಯ ಚಿಕ್ಕಪ್ಪ ಆರೋಪಿಸಿದ ಬಳಿಕ ಶಂಕೆ ವ್ಯಕ್ತಪಡಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಭೂಮಿ ವಿವಾದದಲ್ಲಿ ಪಟೇಲ್ ಮತ್ತು ಕುಟುಂಬದ ನಡುವೆ ಬಿರುಕಿತ್ತು ಎಂದು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದ್ದು,  ವಿಚಾರಣೆ ಕೈಗೊಂಡಾಗ ಅಪರಾಧದಲ್ಲಿ ಆಕೆಯ ಸಹೋದರರು ಮತ್ತು ಚಿಕ್ಕಪ್ಪ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ಅಧೀಕ್ಷಕ ಅಮಿತ್‌ ಸಂಘಿ ತಿಳಿಸಿದ್ದಾರೆ.
 

Trending News