ಸೋಲು ಸಮೀಪಿಸುತ್ತಿದ್ದಂತೆ ಸಚಿವೆ, ನಟಿ ರೋಜಾ ಟ್ವೀಟ್‌ ವೈರಲ್‌..!

Minister roja tweets : ಆಂಧ್ರಪ್ರದೇಶ ಚುನಾವಣಾ ಫಲಿತಾಂಶಗಳು ವೈಎಸ್‌ಆರ್‌ಸಿಪಿಗೆ ದೊಡ್ಡ ಹೊಡೆತ ನೀಡಿದೆ. ವೈಎಸ್‌ ಜಗನ್‌ಗೆ ಆಂಧ್ರದ ಜನತೆ ಅನಿರೀಕ್ಷಿತ ಟ್ವಿಸ್ಟ್‌ ಕೊಟ್ಟಂತಿದೆ. ಈ ಕ್ರಮದಲ್ಲಿ, ಆಡಳಿತಾರೂಢ ವೈಎಸ್‌ಆರ್‌ಸಿಪಿಯ ಹಲವು ಸಚಿವರು ಮತ್ತು ಪ್ರಮುಖ ನಾಯಕರು ಈಗಾಗಲೇ ಹಿಂದುಳಿದಿದ್ದಾರೆ.

Written by - Krishna N K | Last Updated : Jun 4, 2024, 02:53 PM IST
    • ಆಂಧ್ರ ಪ್ರದೇಶ ಅಸೆಂಬ್ಲಿ ಚುನಾವಣೆ ಫಲಿತಾಂಶ 2024 ದೇಶದ ಗಮನ ಸೆಳೆಯುತ್ತಿದೆ.
    • ಎಪಿಯಲ್ಲಿ ವಿಧಾನಸಭಾ ಚುನಾವಣಾ ಎಣಿಕೆಯಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ.
    • ಇದರ ಬೆನ್ನಲ್ಲೆ ನಟಿ, ಸಚಿವೆ ರೋಜಾ ಟ್ಟೀಟ್‌ ವೈರಲ್‌ ಆಗುತ್ತಿದೆ..
ಸೋಲು ಸಮೀಪಿಸುತ್ತಿದ್ದಂತೆ ಸಚಿವೆ, ನಟಿ ರೋಜಾ ಟ್ವೀಟ್‌ ವೈರಲ್‌..! title=

Minister roja AP assembly election results 2024: ಆಂಧ್ರ ಪ್ರದೇಶ ಅಸೆಂಬ್ಲಿ ಚುನಾವಣೆ ಫಲಿತಾಂಶ 2024 ದೇಶದ ಗಮನ ಸೆಳೆಯುತ್ತಿದೆ. ಎಪಿಯಲ್ಲಿ ವಿಧಾನಸಭಾ ಚುನಾವಣಾ ಎಣಿಕೆಯಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ವೈಎಸ್‌ಆರ್‌ಸಿಪಿಯ ಕನಸುಗಳು ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಮೈತ್ರಿ ಕೂಟದ ಒಡೆತಕ್ಕೆ ಛಿದ್ರ ಛಿದ್ರವಾಗುತ್ತಿವೆ.  ಇದರ ಬೆನ್ನಲ್ಲೆ ನಟಿ, ಸಚಿವೆ ರೋಜಾ ಟ್ಟೀಟ್‌ ವೈರಲ್‌ ಆಗುತ್ತಿದೆ..

ಆಂಧ್ರಪ್ರದೇಶ ಚುನಾವಣಾ ಫಲಿತಾಂಶಗಳು ವೈಎಸ್‌ಆರ್‌ಸಿಪಿಗೆ ದೊಡ್ಡ ಹೊಡೆತ ನೀಡಿದೆ. ವೈಎಸ್‌ ಜಗನ್‌ಗೆ ಆಂಧ್ರದ ಜನತೆ ಅನಿರೀಕ್ಷಿತ ಟ್ವಿಸ್ಟ್‌ ಕೊಟ್ಟಂತಿದೆ. ಈ ಕ್ರಮದಲ್ಲಿ, ಆಡಳಿತಾರೂಢ ವೈಎಸ್‌ಆರ್‌ಸಿಪಿಯ ಹಲವು ಸಚಿವರು ಮತ್ತು ಪ್ರಮುಖ ನಾಯಕರು ಈಗಾಗಲೇ ಹಿಂದುಳಿದಿದ್ದಾರೆ. 

ಇದನ್ನ ಓದಿ:ಸಿದ್ದರಾಮಯ್ಯ ತವರು ಕ್ಷೇತ್ರ ಮತ್ತೇ ಕೈ ವಶ: ಸಚಿವರ ಪುತ್ರನಿಗೆ ಜೈ ಎಂದ ಮತದಾರ

ಈ ಸಂದರ್ಭದಲ್ಲಿ, ಈ ಫಲಿತಾಂಶಗಳು ವೈಎಸ್‌ಆರ್‌ಸಿಪಿಗೆ ದೊಡ್ಡ ಆಘಾತ ಎಂದು ಪರಿಗಣಿಸಬಹುದು. ಇನ್ನೊಂದೆಡೆ ಸೋಲಿನತ್ತ ದಾಪುಗಾಲು ಹಾಕುತ್ತಿರುವ ಸಚಿವರು ಭಾವುಕರಾಗಿ ಟ್ವೀಟ್ ಮಾಡುತ್ತಿದ್ದಾರೆ. ಈ ಪೈಕಿ ಸಚಿವೆ ರೋಜಾ ಟ್ವೀಟ್  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ʼಶಕ್ತಿಯುತ ವ್ಯಕ್ತಿ ಎಂದರೆ ಬದಲಾವಣೆ ತರುವ ವ್ಯಕ್ತಿ: ಭಯವನ್ನು ವಿಶ್ವಾಸಕ್ಕೆ, ಹಿನ್ನಡೆಯನ್ನು ಪುನರಾಗಮನಕ್ಕೆ, ತಪ್ಪುಗಳನ್ನು ನಿರ್ಧಾರ ಮತ್ತು ತಪ್ಪುಗಳಲ್ಲಿ ಸರಿಪಡಿಸುವವʼ ಎಂದು ಬರೆದುಕೊಂಡು ಫೋಟೋ ಹಂಚಿಕೊಂಡಿದ್ದಾರೆ. ಅಂದಹಾಗೆ, ರೋಜಾ ಎಪಿ ವಿಧಾನಸಭಾ ಚುನಾವಣೆಯಲ್ಲಿ ನಗರಿಯಿಂದ ಸ್ಪರ್ಧಿಸುತ್ತಿದ್ದಾರೆ. 

ಇದನ್ನೂ ಓದಿ: Chikkaballapura Lok Sabha Election Result LIVE: ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್: 48877 ಮತಗಳ‌ ಮುನ್ನಡೆ

ನಗಾರಿಯಿಂದ ಬಂದ ಸಚಿವೆ ರೋಜಾ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿದ್ದಾರೆ. ಕಳೆದ 5 ವರ್ಷಗಳಲ್ಲಿ ರೋಜಾ ಹಲವು ಸಂದರ್ಭಗಳಲ್ಲಿ ಟಿಡಿಪಿ ಮತ್ತು ಜನಸೇನಾ ನಾಯಕರ ಮೇಲೆ ಅಬ್ಬರಿಸಿದ್ದರು. ವೈರಲ್‌ ಕಾಮೆಂಟ್ ಸಹ ಮಾಡಿ ಸುದ್ದಿಯಲ್ಲಿದ್ದರು. ಚಂದ್ರಬಾಬು ಮತ್ತು ಪವನ್ ಕಲ್ಯಾಣ್ ಅವರ ವಯಕ್ತಿಕ ವಿಚಾರಗಳನ್ನು ಬಯಲಿಗೆಳೆದು ವ್ಯಂಗ್ಯವಾಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News