ಡೆಹ್ರಾಡೂನ್: ಡೆಹ್ರಾಡೂನ್ನ ಸಾರ್ವಜನಿಕ ಸಾರಿಗೆ ವ್ಯವಸ್ಥೆ(Transport system)ಯನ್ನು ಸುಧಾರಿಸಲು ಈಗ ಹೊಸ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಡೆಹ್ರಾಡೂನ್ನಲ್ಲಿ ರೋಪ್ವೇ ಮೂಲಕ ಸಾರಿಗೆ ವ್ಯವಸ್ಥೆ ಶೀಘ್ರದಲ್ಲೇ ಸಿದ್ಧವಾಗಲಿದೆ. ಈ ಯೋಜನೆಯನ್ನು ಜಾರಿಗೆ ತರಲು ಉತ್ತರಾಖಂಡ ಸರ್ಕಾರ ದೆಹಲಿ ಮೆಟ್ರೊ ಸಹಾಯವನ್ನು ಪಡೆದುಕೊಂಡಿದೆ. ಡೆಹ್ರಾಡೂನ್ನಲ್ಲಿ ಮೆಟ್ರೋ ಯೋಜನೆ ಸ್ಥಗಿತಗೊಂಡ ಬಳಿಕ ಡೆಹ್ರಾಡೂನ್ನಲ್ಲಿ ರೋಪ್ ವೇ ಮೂಲಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಸರ್ಕಾರದ ಕ್ರಮವು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಡೆಹ್ರಾಡೂನ್ನಲ್ಲಿ ರೋಪ್ವೇ ನಿರ್ಮಾಣಕ್ಕಾಗಿ ಡಿಪಿಆರ್ ತಯಾರಿಸುವ ಕೆಲಸವನ್ನು ದೆಹಲಿ ಮೆಟ್ರೊಗೆ ವಹಿಸಲಾಗಿತ್ತು. ದೆಹಲಿ ಮೆಟ್ರೋ ಮತ್ತು ಉತ್ತರಾಖಂಡ ಸರ್ಕಾರದ ಉನ್ನತ ಅಧಿಕಾರಿಗಳ ನಡುವಿನ ಒಪ್ಪಂದದ ಪ್ರಕಾರ ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಡಿಪಿಆರ್ ಸಿದ್ಧವಾಗಲಿದೆ. ಇದರ ನಂತರ, ಸುಮಾರು 2 ವರ್ಷಗಳಲ್ಲಿ ರೋಪ್ವೇ ಮೂಲಕ ಸಾರಿಗೆ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು. ದೆಹಲಿ ಮೆಟ್ರೋ ರೈಲು ನಿಗಮ(Delhi Metro Rail Corporation) ಮತ್ತು ಉತ್ತರಾಖಂಡ ಮೆಟ್ರೋ ಯೋಜನೆ(Uttarakhand Metro Project)ಯ ಅಧಿಕಾರಿಗಳು ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿವೆ. ಡಿಪಿಆರ್ ತಯಾರಿಸಲು ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿ ಉತ್ತರಾಖಂಡ ಸರ್ಕಾರ ದೆಹಲಿ ಮೆಟ್ರೊಗೆ 43 ಲಕ್ಷ ರೂಪಾಯಿ ಚೆಕ್ ನೀಡಿತು.
ಡೆಹ್ರಾಡೂನ್ (Dehradun) ನಲ್ಲಿ ಪ್ರವಾಸಿಗರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಜೊತೆಗೆ ರಾಜ್ಯದ ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ. ಈ ಯೋಜನೆ ಪೂರ್ಣಗೊಳ್ಳಲು 2 ರಿಂದ ಎರಡೂವರೆ ವರ್ಷಗಳು ತೆಗೆದುಕೊಳ್ಳುತ್ತದೆ. ಈ ಯೋಜನೆ ಮೆಟ್ರೋಗಿಂತ ಕಡಿಮೆ ವೆಚ್ಚದಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆಗೆ ಸುಮಾರು 2,000 ಕೋಟಿ ರೂ. ಅಗತ್ಯವಿದೆ ಎಂದು ಉತ್ತರಾಖಂಡದ ನಗರಾಭಿವೃದ್ಧಿ ಸಚಿವ ಮದನ್ ಕೌಶಿಕ್ ಹೇಳಿದ್ದಾರೆ.
ರೋಪ್ವೇ ಯೋಜನೆಯಲ್ಲಿ ಎರಡು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುವುದು. ರೋಪ್ವೇಯಲ್ಲಿ ಚಲಿಸುವ ಕ್ಯಾಬ್ಗಳು ಅಥವಾ ಟ್ಯಾಕ್ಸಿಗಳು ಇರುತ್ತವೆ. ಇದರಲ್ಲಿ, ಒಂದು ಸಮಯದಲ್ಲಿ 10 ರಿಂದ 12 ಜನರಿಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ. ಮೊದಲ ಮಾರ್ಗವನ್ನು ಘಂಟಘರ್ ಮೂಲಕ ರೆಸ್ಪ್ನಾ ವರೆಗೆ ಅಭಿವೃದ್ಧಿಪಡಿಸಲಾಗುವುದು ಮತ್ತು ಎರಡನೇ ಮಾರ್ಗವನ್ನು ಐಎಸ್ಬಿಟಿಯಿಂದ ರಾಜ್ಪುರ ರಸ್ತೆವರೆಗೆ ಮಾಡಲಾಗುವುದು ಎಂದವರು ತಿಳಿಸಿದರು. ಡೆಹ್ರಾಡೂನ್ನ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಇದೊಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ಡೆಹ್ರಾಡೂನ್ ನಗರವು ಸಾರ್ವಜನಿಕ ಸಾರಿಗೆಗಾಗಿ ರೋಪ್ವೇ ವ್ಯವಸ್ಥೆಯನ್ನು ಬಳಸುತ್ತಿರುವ ದೇಶದ ಮೊದಲ ನಗರವಾಗಲಿದೆ. ದೇಶದ ಬೇರೆ ಯಾವುದೇ ಸ್ಥಳ ಮತ್ತು ನಗರಗಳಲ್ಲಿ ಸಾರ್ವಜನಿಕ ಸಾರಿಗೆಗಾಗಿ ರೋಪ್ವೇ ವ್ಯವಸ್ಥೆಯನ್ನು ಇಲ್ಲಿಯವರೆಗೆ ಬಳಸುತ್ತಿಲ್ಲ ಎಂದು ಉತ್ತರಾಖಂಡ ಸರ್ಕಾರ ಹೇಳಿಕೊಂಡಿದೆ.
ರೋಪ್ವೇ ಯೋಜನೆಯ ಮುಖ್ಯಾಂಶಗಳು:
- 20 ರಿಂದ 25 ಕಿ.ಮೀ. ಅಂತರದಲ್ಲಿ ರೋಪ್ವೇ ನಿರ್ಮಾಣ.
- ರೋಪ್ವೇ ಯೋಜನೆಗೆ 2000-2200 ಕೋಟಿ ರೂ.
- ರೋಪ್ವೇ ಯೋಜನೆಯ ಡಿಪಿಆರ್ 5 ತಿಂಗಳಲ್ಲಿ ಸಿದ್ಧವಾಗಲಿದೆ.
- ಟೆಂಡರ್ ಮಾಡಿದ 2 ವರ್ಷಗಳಲ್ಲಿ ಯೋಜನೆಯನ್ನು ಸಿದ್ಧಪಡಿಸಬೇಕು.
- ಯೋಜನೆಯಡಿ ಇದಕ್ಕಾಗಿ ಎರಡು ಮಾರ್ಗಗಳನ್ನು ಮಾಡಲಾಗುವುದು.
- ಮೊದಲ ಮಾರ್ಗ: ಎಫ್ಆರ್ಐನಿಂದ ಕ್ಲಾಕ್ ಟವರ್ ಮೂಲಕ ರೆಸ್ಪ್ನಾ ವರೆಗೆ.
- ಎರಡನೆಯ ಮಾರ್ಗ: ಐಎಸ್ಬಿಟಿಯಿಂದ ರಾಜ್ಪುರ ರಸ್ತೆವರೆಗೆ
- ರೋಪ್ವೇಯ ಸಾರಿಗೆ ಸಾಮರ್ಥ್ಯ ಸುಮಾರು 10 ಪ್ರಯಾಣಿಕರು.