"ನಾಯಿ ಸತ್ತಾಗ ಸಂತಾಪ ಸೂಚಿಸುವವರು 250 ರೈತರು ಸತ್ತಾಗ ಸೂಚಿಸುತ್ತಿಲ್ಲ"

ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಮೇಘಾಲಯ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಇಂದು ಬೆಂಬಲಿಸಿದ್ದಲ್ಲದೆ ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿದ್ದಾರೆ.

Last Updated : Mar 17, 2021, 11:13 PM IST
"ನಾಯಿ ಸತ್ತಾಗ ಸಂತಾಪ ಸೂಚಿಸುವವರು 250 ರೈತರು ಸತ್ತಾಗ ಸೂಚಿಸುತ್ತಿಲ್ಲ"    title=
ಸಾಂದರ್ಭಿಕ ಚಿತ್ರ

ನವದೆಹಲಿ: ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಮೇಘಾಲಯ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಇಂದು ಬೆಂಬಲಿಸಿದ್ದಲ್ಲದೆ ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿದ್ದಾರೆ.

ದೆಹಲಿಯ ಗಡಿಯ ಹೊರಗೆ ನಾಲ್ಕು ತಿಂಗಳ ಕಾಲ ನಡೆಯುತ್ತಿರುವ ಆಂದೋಲನದಿಂದಾಗಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಮಲಿಕ್ (Satya Pal Malik) ಭವಿಷ್ಯ ನುಡಿದಿದ್ದಾರೆ.'ನಾಯಿ ಸತ್ತಾಗಲೂ ಸಂತಾಪ ಸೂಚಿಸಲಾಗುತ್ತದೆ, ಆದರೆ 250 ರೈತರು ಸಾವನ್ನಪ್ಪಿದ್ದಾರೆ, ಆದರೆ ಯಾರೂ ಸಂತಾಪ ವ್ಯಕ್ತಪಡಿಸಲಿಲ್ಲ" ಎಂದು ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Coronavirus: ಮಹಾರಾಷ್ಟ್ರದ ಈ ನಗರದಲ್ಲಿ ಮಾರ್ಚ್ 21ರವರೆಗೆ ಲಾಕ್‌ಡೌನ್

'ಈ ಆಂದೋಲನವು ಈ ರೀತಿ ಮುಂದುವರಿದರೆ ದೀರ್ಘಾವಧಿಯಲ್ಲಿ, ಪಶ್ಚಿಮ ಯುಪಿ, ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ಬಿಜೆಪಿ ಸೋಲುತ್ತದೆ" ಎಂದು ಅವರು ಹೇಳಿದರು.ಪ್ರತಿಭಟನೆಯ ಕುರಿತು ತಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ ಎಂದು ಮಲಿಕ್ ಹೇಳಿದ್ದಾರೆ. "ರೈತರನ್ನು ಬರಿಗೈಯಿಂದ ಹಿಂದಕ್ಕೆ ಕಳುಹಿಸಬಾರದು. ಸರ್ಕಾರ ಅವರೊಂದಿಗೆ ಶೀಘ್ರದಲ್ಲೇ ಮಾತುಕತೆ ನಡೆಸಬೇಕು" ಎಂದು ಹೇಳಿದರು.

ಗವರ್ನರ್ ಆಗಿ ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಅವರು ಚಿಂತೆ ಮಾಡುತ್ತಿದ್ದಾರೆಯೇ ಎಂದು ಕೇಳಿದಾಗ,ಇದಕ್ಕೆ ಉತ್ತರಿಸಿದ ಅವರು "ನಾನು ಅವರಿಗೆ ಹಾನಿ ಮಾಡುತ್ತಿದ್ದೇನೆ ಎಂದು ಸರ್ಕಾರ ಭಾವಿಸಿದರೆ ನಾನು ಪಕ್ಕಕ್ಕೆ ಇಳಿಯುತ್ತೇನೆ. ನಾನು ರಾಜ್ಯಪಾಲನಲ್ಲದಿದ್ದರೂ ಮಾತನಾಡುತ್ತೇನೆ" ಎಂದು ಅವರು ಹೇಳಿದರು.

ಇದನ್ನೂ ಓದಿ: CORONAVIRUS: ಈ ರಾಜ್ಯದಲ್ಲಿ ಲಾಕ್ ಡೌನ್ ಹಾಗೂ ನೈಟ್ ಕರ್ಪ್ಯೂ ಜಾರಿ

ವಿವಾದಗಳಿಗೆ ಪರಿಚಿತವಾಗಿರುವ ಶ್ರೀ ಮಲಿಕ್, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದರು, ನಂತರ ಅವರನ್ನು ಗೋವಾಕ್ಕೆ ವರ್ಗಾಯಿಸಲಾಯಿತು. ಕಳೆದ ಆಗಸ್ಟ್ ನಲ್ಲಿ ಗೋವಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯಗಳ ಮಧ್ಯೆ ಅವರನ್ನು ಮತ್ತೆ ಮೇಘಾಲಯಕ್ಕೆ ಸ್ಥಳಾಂತರಿಸಲಾಯಿತು.

ಇದನ್ನೂ ಓದಿ: ದೇಶದ ಶೇ 61 ರಷ್ಟು ಕೊರೊನಾ ಪ್ರಕರಣ ದಾಖಲಾತಿ ಈ ರಾಜ್ಯದಲ್ಲಿ..! 

ಕಳೆದ ವರ್ಷ ಕೇಂದ್ರವು ಜಾರಿಗೆ ತಂದ ಕಾನೂನುಗಳ ವಿರುದ್ಧ ನವೆಂಬರ್ ಅಂತ್ಯದಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಕೃಷಿ ಆದಾಯವನ್ನು ಸುಧಾರಿಸಲು ಸಹಾಯ ಮಾಡುವ ದೀರ್ಘಾವಧಿಯ ಸುಧಾರಣೆಗಳನ್ನು ಮುಂದಿಟ್ಟಿದ್ದಾರೆ.ಆದಾಗ್ಯೂ, ರೈತರು ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಬಯಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News