ನವದೆಹಲಿ: ಮಕ್ಕಳ ಪೌಷ್ಠಿಕಾಂಶದ ಮಟ್ಟವನ್ನು ಕಾಪಾಡಲು ಸಹಾಯ ಮಾಡುವ ಸಲುವಾಗಿ, ಮಧ್ಯಾಹ್ನದ ಊಟ ಯೋಜನೆಯಡಿ (Midday Meal Scheme) ಮಕ್ಕಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಆರ್ಥಿಕ ಸಹಾಯವನ್ನು ಕಳುಹಿಸಲಾಗುವುದು. ಸರ್ಕಾರದ ಈ ಯೋಜನೆಯಿಂದ ಸುಮಾರು 11.8 ಕೋಟಿ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನದ ಊಟ ಯೋಜನೆಯ ಎಲ್ಲಾ ಅರ್ಹ ಮಕ್ಕಳಿಗೆ ಅಡುಗೆ ವೆಚ್ಚಕ್ಕೆ ಸಮನಾದ ಮೊತ್ತವನ್ನು ನೀಡುವ ಪ್ರಸ್ತಾಪಕ್ಕೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ (Ramesh Pokhriyal Nishank) ಅನುಮೋದನೆ ನೀಡಿದ್ದಾರೆ.
ಈ ನಿರ್ಧಾರವು ಮಕ್ಕಳ ಪೌಷ್ಠಿಕಾಂಶದ ಮಟ್ಟವನ್ನು ಕಾಪಾಡುವುದಲ್ಲದೆ, ಸವಾಲಿನ ಸಾಂಕ್ರಾಮಿಕ ಸಮಯದಲ್ಲಿ ಅವರ ರೋಗನಿರೋಧಕ ಶಕ್ತಿ (Immunity)ಯನ್ನು ರಕ್ಷಿಸಲು ಸಹಕಾರಿಯಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ - CBSE Class 12 Exams 2021: CBSE 12ನೇ ತರಗತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹೈ ಲೆವಲ್ ಮೀಟಿಂಗ್ ಮುಕ್ತಾಯ... ಇಲ್ಲಿದೆ ನಿರ್ಧಾರ!
11.8 ಕೋಟಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಸಿಗಲಿದೆ:
ಕೇಂದ್ರ ಸರ್ಕಾರದ ಈ ಒಂದು ಬಾರಿಯ ವಿಶೇಷ ಕಲ್ಯಾಣ ಕ್ರಮವು ದೇಶಾದ್ಯಂತದ 11.20 ಲಕ್ಷ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಗಳಲ್ಲಿ ಓದುತ್ತಿರುವ ಸುಮಾರು 11.8 ಕೋಟಿ ಮಕ್ಕಳಿಗೆ (Students) ಪ್ರಯೋಜನವನ್ನು ನೀಡುತ್ತದೆ.
ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅಣ್ಣಾ ಯೋಜನೆ (ಪಿಎಂ-ಜಿಕೆಎ) ಅಡಿಯಲ್ಲಿ ಸುಮಾರು 80 ಕೋಟಿ ಫಲಾನುಭವಿಗಳಿಗೆ ತಿಂಗಳಿಗೆ 5 ಕೆಜಿ ದರದಲ್ಲಿ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವುದಾಗಿ ಭಾರತ ಸರ್ಕಾರ ಘೋಷಿಸಿರುವುದಕ್ಕಿಂತ ಇದು ಭಿನ್ನವಾಗಿದೆ.
(2/5) The GoI announces distribution of free-of-cost food grains @ 5 Kg per person per month to nearly 80 Crore beneficiaries under Pradhan Mantri Garib Kalyan Anna Yojana (PM-GKAY).
— Dr. Ramesh Pokhriyal Nishank (@DrRPNishank) May 28, 2021
ಇದನ್ನೂ ಓದಿ - CBSE ವಿದ್ಯಾರ್ಥಿಗಳಿಗೆ ಪ್ರಮುಖ ಸುದ್ದಿ, ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಮಹತ್ವದ ಬದಲಾವಣೆ
ಶಿಕ್ಷಣ ಸಚಿವರ ಟ್ವೀಟ್ :
ಎಂಡಿಎಂ ಯೋಜನೆಯಡಿ ಸುಮಾರು 11.8 ಕೋಟಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಡಿಬಿಟಿ ಮೂಲಕ ಆರ್ಥಿಕ ನೆರವು ನೀಡಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಟ್ವೀಟ್ ಮಾಡಿದ್ದಾರೆ. ಇದಕ್ಕಾಗಿ ಇನ್ನೂ 1200 ಕೋಟಿ ರೂಪಾಯಿಗಳನ್ನು ನಿಧಿಯಲ್ಲಿ ನೀಡಲಾಗುವುದು ಎಂದವರು ತಿಳಿಸಿದ್ದಾರೆ.
About 11.8 crore students to be benefited as GoI to provide Monetary Assistance through Direct Benefit Transfer (DBT) under the MDM Scheme. An additional fund of about Rs. 1200 Cr to be provided for this purpose. (1/5)
— Dr. Ramesh Pokhriyal Nishank (@DrRPNishank) May 28, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.