ಪತ್ನಿ ತಲೆ ಕತ್ತರಿಸಿ ಬೀದಿಗಳಲ್ಲಿ ಹಿಡಿದು ಓಡಾಡಿದ ಪತಿ! ಮುಂದೇನಾಯ್ತು?

 ಒಂದು ಕೈಯಲ್ಲಿ ಪತ್ನಿಯ ಕತ್ತರಿಸಿದ ತಲೆ, ಮತ್ತೊಂದು ಕೈಯಲ್ಲಿ ರಕ್ತಸಿಕ್ತವಾದ ಚಾಕು ಹಿಡಿದು ಓಡಾಡಿದ ಭಯಾನಕ ದೃಶ್ಯ ಆ ಕಾಲೋನಿಯ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Last Updated : Aug 12, 2019, 12:41 PM IST
ಪತ್ನಿ ತಲೆ ಕತ್ತರಿಸಿ ಬೀದಿಗಳಲ್ಲಿ ಹಿಡಿದು ಓಡಾಡಿದ ಪತಿ! ಮುಂದೇನಾಯ್ತು? title=

ವಿಜಯವಾಡ: ವ್ಯಕ್ತಿಯೋರ್ವ ತನ್ನ ಹೆಂಡತಿಯ ತಲೆ ಕತ್ತರಿಸಿ ನಗರದ ಬೀದಿಗಳಲ್ಲಿ ಹಿಡಿದು ಓಡಾಡಿದ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದ ವಿಜಯವಾಡದ ಸತ್ಯನಾರಾಯಣಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಗರ ಕಾಲೋನಿಯಲ್ಲಿ ಭಾನುವಾರ ನಡೆದಿದೆ. 

ಪ್ರದೀಪ್ ಕುಮಾರ್ ಎಂಬಾತ ತನ್ನ ಪತ್ನಿ ಮಣಿಕ್ರಾಂತಿ(23)ಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಆಕೆಯ ತಲೆ ಕತ್ತರಿಸಿದ್ದಾನೆ. ಬಳಿಕ ಒಂದು ಕೈಯಲ್ಲಿ ಪತ್ನಿಯ ಕತ್ತರಿಸಿದ ತಲೆ, ಮತ್ತೊಂದು ಕೈಯಲ್ಲಿ ರಕ್ತಸಿಕ್ತವಾದ ಚಾಕು ಹಿಡಿದು ಓಡಾಡಿದ ಭಯಾನಕ ದೃಶ್ಯ ಆ ಕಾಲೋನಿಯ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಳಿಕ ಆರೋಪಿ ಪ್ರದೀಪ್ ತನ್ನ ಹೆಂಡತಿಯ ಕತ್ತರಿಸಿದ ತಲೆಯನ್ನು ಹತ್ತಿರದ ನಾಲೆಯಲ್ಲಿ ಬಿಸಾಡಿ, ಸತ್ಯನಾರಾಯಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸದ್ಯ ಆ ಕತ್ತರಿಸಿದ ತಲೆಗಾಗಿ ನಾಲೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ತಲೆಯಿಲ್ಲದ ಮಹಿಳೆಯ ಶವವನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ವಿಜಯ್ ರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಕಳೆದ 5 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಪ್ರದೀಪ್, ಪತ್ನಿ ಜೊತೆ ಜಗಳವಾಡಿ ಬಂಧಿಸಲ್ಪಟ್ಟಿದ್ದ. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಬಹುಶಃ ಆ ಘಟನೆಗೆ ಸೇಡು ತೀರಿಸಿಕೊಳ್ಳಲು ಆಟ ಪತ್ನಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ರಾವ್ ತಿಳಿಸಿದ್ದಾರೆ.

Trending News