ಜೂಜಿಗಾಗಿ ಹೆಂಡತಿಯನ್ನೇ ಅತ್ಯಾಚಾರ ಮಾಡಲು ಸೂಚಿಸಿದ ಭೂಪ..!

ಜೂಜಾಟ ಮತ್ತು ಮದ್ಯದ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬಹಣವಿಲ್ಲದೆ ಓಡಿಹೋದ ನಂತರ ತನ್ನ ಹೆಂಡತಿಯನ್ನೇ ಜೂಜಿಗೆ ಇಟ್ಟು ತನ್ನ ಪಾಲನ್ನು ಕಳೆದುಕೊಂಡ ನಂತರ ಸ್ನೇಹಿತ ಮತ್ತು ಸಂಬಂಧಿಕರಿಗೆ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲು ಸೂಚಿಸಿರುವ ಘಟನೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಐಎಎನ್‌ಎಸ್ ಸುದ್ದಿಸಂಸ್ಥೆ  ವರದಿ ಮಾಡಿದೆ.

Last Updated : Aug 2, 2019, 08:47 PM IST
 ಜೂಜಿಗಾಗಿ ಹೆಂಡತಿಯನ್ನೇ ಅತ್ಯಾಚಾರ ಮಾಡಲು ಸೂಚಿಸಿದ ಭೂಪ..!   title=
ಸಾಂದರ್ಭಿಕ ಚಿತ್ರ

ನವದೆಹಲಿ: ಜೂಜಾಟ ಮತ್ತು ಮದ್ಯದ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬಹಣವಿಲ್ಲದೆ ಓಡಿಹೋದ ನಂತರ ತನ್ನ ಹೆಂಡತಿಯನ್ನೇ ಜೂಜಿಗೆ ಇಟ್ಟು ತನ್ನ ಪಾಲನ್ನು ಕಳೆದುಕೊಂಡ ನಂತರ ಸ್ನೇಹಿತ ಮತ್ತು ಸಂಬಂಧಿಕರಿಗೆ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲು ಸೂಚಿಸಿರುವ ಘಟನೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಐಎಎನ್‌ಎಸ್ ಸುದ್ದಿಸಂಸ್ಥೆ  ವರದಿ ಮಾಡಿದೆ.

ಆ ಮಹಿಳೆ ಪೊಲೀಸರಿಗೆ ದೂರು ನೀಡಲು ಹೋದಾಗ ದೂರು ದಾಖಲಿಸಲು ನಿರಾಕರಿಸಿದರು ಎನ್ನಲಾಗಿದೆ.ಈ ಹಿನ್ನಲೆಯಲ್ಲಿ ಆಕೆಯು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾಳೆ. ನ್ಯಾಯಾಲಯದ ಆದೇಶದ ನಂತರ ಜೌನ್‌ಪುರ ಜಿಲ್ಲೆಯ ಜಾಫರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ನ್ನು ದಾಖಲಿಸಲಾಗಿದೆ. ಆ ಮಹಿಳೆ ಹೇಳುವಂತೆ ತನ್ನ ಗಂಡನು ಮಧ್ಯಪಾನದ ದಾಸನಾಗಿದ್ದನು. ಆದ್ದರಿಂದ ತಮ್ಮನ್ನು ಜೂಜಿಗೆ ಇಟ್ಟಿದ್ದಾನೆ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ವರದಿಗಳ ಪ್ರಕಾರ ಮಹಿಳೆಯ ಗಂಡನ ಸ್ನೇಹಿತ ಅರುಣ್ ಮತ್ತು ಸಂಬಂಧಿ ಅನಿಲ್ ಆಗಾಗ್ಗೆ ತಮ್ಮ ಮನೆಗೆ ಕುಡಿಯಲು ಮತ್ತು ಜೂಜಾಟಕ್ಕೆ ಹೋಗುತ್ತಿದ್ದರು. ಯಾವಾಗ ಜೂಜಿನಲ್ಲಿ ಸೋತನೋ ಆಗ ಈ ಇಬ್ಬರಿಗೂ ಸಾಮೂಹಿಕ ಅತ್ಯಾಚಾರ ಮಾಡಲು ಸೂಚಿಸಿದ್ದಾನೆ ಎನ್ನಲಾಗಿದೆ. ಈ ಘಟನೆ ನಂತರ ಅವನು ತನ್ನ ಹೆಂಡತಿ ಕ್ಷಮೆ ಕೇಳಿ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಆದರೆ ಮತ್ತೆ ದಾರಿ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ತನ್ನ ಸ್ನೇಹಿತರಿಗೆ ಮತ್ತೊಮ್ಮೆ ಸಾಮೂಹಿಕ ದೌರ್ಜನ್ಯಕ್ಕೆ ಅವಕಾಶ ಮಾಡಿಕೊಟ್ಟನು ಎನ್ನಲಾಗಿದೆ.

ಮಹಿಳೆ ಪೊಲೀಸರಿಗೆ ದೂರು ನೀಡಿದಾಗ ಅವರು ದೂರು ದಾಖಲಿಸಲು ನಿರಾಕರಿಸಿದರು, ಅದರ ನಂತರ ಆಕೆ ನ್ಯಾಯಾಲಯಕ್ಕೆ ಮೊರೆ ಹೋದ ನಂತರ ನ್ಯಾಯಾಲಯ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತು ಎನ್ನಲಾಗಿದೆ.

Trending News