ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ನಲ್ಲಿ ಬುಧುವಾರದಂದು ನಡೆದ ರ್ಯಾಲಿಯೊಂದರಲ್ಲಿ ತಮ್ಮ ಕುರಿತಾಗಿ ಮಾಡಿರುವ ಭಾಷಣದ ವಿಚಾರವಾಗಿ ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಮೋದಿಗೆ ಮಾನಹಾನಿ ನೋಟಿಸ್ ಜಾರಿ ಮಾಡಿದ್ದಾರೆ. ಈಗ ಈ ನೋಟಿಸ್ ಸ್ವೀಕರಿಸಿದ 36 ಗಂಟೆಗಳೊಳಗೆ ಮೋದಿ ಬೇಷರತ್ತಾದ ಕ್ಷಮೆ ಕೋರಬೇಕೆಂದು ಹೇಳಿದ್ದಾರೆ.
TMC leader & nephew of West Bengal CM Mamata Banerjee, Abhishek Banerjee through his lawyer sends a defamation notice to Prime Minister Narendra Modi for alleged derogatory remarks made against him in a public rally on 15 May, held in Diamond Harbour in West Bengal. (file pic) pic.twitter.com/3kYEcyiQBu
— ANI (@ANI) May 18, 2019
ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಿಂದ ಮರು ಆಯ್ಕೆ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯ ನೀಲಂಜನ್ ರಾಯ್ ಪರವಾಗಿ ಪ್ರಚಾರಕ್ಕೆ ಬಂದ ವೇಳೆ ಪ್ರಧಾನಿ ನೀಡಿದ ಹೇಳಿಕೆಗೆ ವಿಚಾರವಾಗಿ ಈಗ ಅವರು ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಾ :ಪಶ್ಚಿಮ ಬಂಗಾಳದಲ್ಲಿ ಬುವಾ ಭತಿಜಾ ಆಡಳಿತವು ಗೊಂಡಾಕ್ರಸಿಯಾಗಿ ಪರಿವರ್ತನೆಯಾಗಿದೆ.ಆದ್ದರಿಂದ ಜನರು ಬಿಜೆಪಿಗೆ ಶಕ್ತಿಯನ್ನು ತುಂಬುವುದರ ಮೂಲಕ ಇದಕ್ಕೆ ಕೊನೆ ಹಾಡಬೇಕು ಎಂದು ಹೇಳಿದ್ದರು.
ಈಗ ಪ್ರಧಾನಿಗೆ ಮಾನಹಾನಿ ನೋಟಿಸ್ ಜಾರಿ ಮಾಡಿರುವ ವಿಷಯವನ್ನು ಅಭಿಷೇಕ್ ಬ್ಯಾನರ್ಜಿಯವರ ಮಾಧ್ಯಮಗಳ ಮುಂದೆ ಬಿಡುಗಡೆಗೊಳಿಸಿದ್ದು, ಪ್ರಧಾನಿ ಭಾಷಣವು ಸುಳ್ಳು, ದುರುದ್ದೇಶಪೂರಿತ ಮತ್ತು ಮಾನನಷ್ಟ ವಿಷಯಗಳಿಂದ ಕೂಡಿದೆ.ಇದರಲ್ಲಿ ರಾಜಕೀಯ ಲೆಕ್ಕಾಚಾರ ಮತ್ತು ಚೇಷ್ಟೆಯ ಉದ್ದೇಶವಿದೆ.ನಿಮ್ಮ ಬುವಾ ಭತಿಜಾ ಉಲ್ಲೇಖವು ನನ್ನ ಮತ್ತು ಮಮತಾ ಬ್ಯಾನರ್ಜಿಗೆ ಸಂಬಂಧಿಸಿದೆ ಎಂದು ನೋಟಿಸ್ ನಲ್ಲಿ ಬರೆಯಲಾಗಿದೆ.