ನವದೆಹಲಿ : ಪುಣೆ ಕ್ಷೇತ್ರದ ಭೀಮಾ-ಖೋರೆಗಾಂವ್ ಹಿಂಸಾಚಾರಕ್ಕೆ ಆರ್.ಎಸ್.ಎಸ್ ಕಾರಣ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಬುಧವಾರ ದೂರಿದ್ದಾರೆ ಮತ್ತು ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಹಿಂಸಾಚಾರದಲ್ಲಿ ಯುವಕನೊಬ್ಬ ಮೃತಪಟ್ಟ ವಿಷಯ ಲೋಕಸಭೆಯಲ್ಲಿ ಕೋಲಾಹಲ ಹೆಚ್ಚಿಸಿತು. ಈ ಕುರಿತಾಗಿ ಪ್ರತಿಕ್ರಯಿಸಿದ ಖರ್ಗೆ ಸಮಾಜದಲ್ಲಿ ಬಿರುಕು ಮೂಡಿಸಲು ಆರ್ಎಸ್ಎಸ್ಗೆ ಸೇರಿದ ಮೂಲಭೂತವಾದಿಗಳು ಭೀಮಾ-ಖೊರೆಗಾಂವ್ನ ಹಿಂಸಾಚಾರದ ಹಿಂದೆ ಇದ್ದಾರೆ ಎಂದು ದೂರಿದರು.
ಭೀಮಾ-ಕೊರೆಗಾಂವ್ ಹಿಂಸಾಚಾರದಲ್ಲಿ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡಬೇಕು. ಈ ವಿಚಾರವಾಗಿ ಪ್ರಧಾನಿಗಳು ಹೇಳಿಕೆಯನ್ನು ನೀಡಬೇಕು, ಆದರೆ ಅವರು ಮೌನಿ ಬಾಬಾ ಇಂತಹ ವಿಷಯಗಳ ಬಗ್ಗೆ, ಮಾತನಾಡುವುದಿಲ್ಲ ಎಂದು ಮೋದಿ ಕುರಿತಾಗಿ ಖರ್ಗೆ ವ್ಯಂಗವಾಡಿದ್ದಾರೆ.
ಮಂಗಳವಾರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆರ್ಎಸ್ಎಸ್ ಮತ್ತು ಪ್ರಧಾನಿ ಮೋದಿ ನೇತೃತ್ವದ ರಾಷ್ಟ್ರೀಯ ಡೆಮಾಕ್ರಟಿಕ್ ಅಲೈಯನ್ಸ್ (ಎನ್ಡಿಎ) ಸರ್ಕಾರದ ಹಿಂಸಾಚಾರದ ವಿಚಾರವಾಗಿ ದೂರಿದರು.
A central pillar of the RSS/BJP’s fascist vision for India is that Dalits should remain at the bottom of Indian society. Una, Rohith Vemula and now Bhima-Koregaon are potent symbols of the resistance.
— Office of RG (@OfficeOfRG) January 2, 2018
ಆರ್ಎಸ್ಎಸ್ / ಬಿಜೆಪಿಯ ಫ್ಯಾಸಿಸ್ಟ್ ದೃಷ್ಟಿಕೋನವು ದಲಿತರನ್ನು ಯಾವಾಗಲೂ ಭಾರತೀಯ ಸಮಾಜದ ಶ್ರೇಣಿಯಲ್ಲಿ ಕೆಳಗೆ ಉಳಿಯಬೇಕು ಎನ್ನುವುದಾಗಿದ್ದು ಆದ್ದರಿಂದ ಉನಾ, ರೋಹಿತ್ ವೆಮುಲಾ ಮತ್ತು ಈಗ ಭೀಮಾ-ಕೊರೆಗಾಂವ್ ಘಟನೆಗಳು ಅದರ ಸಂಕೇತಗಳಾಗಿ ಘಟಿಸುತ್ತಿವೆ" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಪುಣೆ ಸಮೀಪ 200 ವರ್ಷಗಳ ಭೀಮಾ ಕೊರೆಗಾಂವ್ ಯುದ್ಧ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸೋಮವಾರ ನಡೆದ ಘರ್ಷಣೆಯಲ್ಲಿ ಯುವಕನ ಮರಣದ ನಂತರ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಜನವರಿ 1, 1818 ರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಮತ್ತು ಮರಾಠಾ ಒಕ್ಕೂಟದ ಪೇಶ್ವಾಯರ ನಡುವೆ ಕೊರೆಗಾಂವ್ ಭೀಮಾದಲ್ಲಿ ಯುದ್ದ ನಡೆದಿತ್ತು