ಮಹಾರಾಷ್ಟ್ರ ವಿವಾದ: ಸಂಸತ್ತಿನಲ್ಲಿ ಗದ್ದಲ, ಲೋಕಸಭಾ ಕಲಾಪ ಮುಂದೂಡಿಕೆ

ಮಹಾರಾಷ್ಟ್ರದ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸತ್ತಿನಲ್ಲಿ ದನಿ ಎತ್ತಿದೆ.

Last Updated : Nov 25, 2019, 11:57 AM IST
ಮಹಾರಾಷ್ಟ್ರ ವಿವಾದ: ಸಂಸತ್ತಿನಲ್ಲಿ ಗದ್ದಲ, ಲೋಕಸಭಾ ಕಲಾಪ ಮುಂದೂಡಿಕೆ  title=

ನವದೆಹಲಿ: ಮಹಾರಾಷ್ಟ್ರ(Maharashtra)ದ ರಾಜಕೀಯ ಪ್ರಕ್ಷುಬ್ಧತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸತ್ತಿನಲ್ಲಿ ದನಿ ಎತ್ತಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ನೇತೃತ್ವದಲ್ಲಿ ಪ್ರತಿಪಕ್ಷ ಸಂಸದರು ಇಂದು ಸಂಸತ್ ಭವನದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು. ಅದೇ ಸಮಯದಲ್ಲಿ, ಸದನದೊಳಗಿನ ಪ್ರತಿಪಕ್ಷ ಸಂಸದರು ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವವನ್ನು ಕೊಂದಿದೆ ಎಂದು ಆರೋಪಿಸಿದರು. ವಿರೋಧ ಪಕ್ಷದ ನಾಯಕರು ಘೋಷಣೆಗಳನ್ನು ಮುಂದುವರಿಸಿದ್ದರಿಂದ ಲೋಕಸಭೆ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.

ವಾಸ್ತವವಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಮತ್ತು ಕಾಂಗ್ರೆಸ್ ಮುಖ್ಯ ವಿಪ್ ಕೆ.  ಸುರೇಶ್ ಮಹಾರಾಷ್ಟ್ರದ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮುಂದೂಡಿಕೆ ನಿರ್ಣಯ ಮಂಡಿಸಿದ್ದಾರೆ. ಈ ಕಾರಣದಿಂದಾಗಿ, ಸದನದಲ್ಲಿ ಇಂದು ಸಾಕಷ್ಟು ಕೋಲಾಹಲ ಏರ್ಪಟ್ಟಿತು. ಸದನದಲ್ಲಿ ನಡೆದ ಪ್ರತಿಭಟನಾ ವೇಳೆ ವಿರೋಧ ಪಕ್ಷದ ಸದಸ್ಯರು 'ಸಂವಿಧಾನವನ್ನು ಕೊಲ್ಲುವುದನ್ನು ನಿಲ್ಲಿಸಿ ... '(Stop Murder Of Democracy) ಎಂಬ ಘೋಷಣೆಗಳನ್ನು ಕೂಗಿದರು.

ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ನಾನು ಸದನದಲ್ಲಿ ಪ್ರಶ್ನೆಯನ್ನು ಕೇಳಲು ಬಯಸಿದ್ದೆ, ಆದರೆ ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿರುವುದರಿಂದ ಈ ಪ್ರಶ್ನೆಯನ್ನು ಈಗ ಕೇಳುವುದರಲ್ಲಿ ಅರ್ಥವಿಲ್ಲ" ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಾತನಾಡಿ, ಕಾಂಗ್ರೆಸ್, ಶಿವಸೇನೆ ಮತ್ತು ಎನ್‌ಸಿಪಿ ಪ್ರಜಾಪ್ರಭುತ್ವವನ್ನು ಜುಗಾಡ್ ತಂತ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರ ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಸಭಾ ಸಂಸದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ನಾಯಕ ಬಿನೊಯ್ ವಿಶ್ವಂ ಅವರು ಮಹಾರಾಷ್ಟ್ರದ ತುರ್ತು ವಿಷಯದ ಬಗ್ಗೆ ಚರ್ಚಿಸಲು ಸದನದ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡಿದ್ದಾರೆ.

ಮತ್ತೊಂದೆಡೆ, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ದಾಳಿ ಮಾಡಿದ್ದಾರೆ.  "ಮಹಾರಾಷ್ಟ್ರ ಸಂಸ್ಥೆಗಳು ಮತ್ತು ಸಂವಿಧಾನವನ್ನು ಧಿಕ್ಕರಿಸುವ ಬಿಜೆಪಿ ಕರ್ನಾಟಕದ ಆಟವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಟಿವಿ ಮಾಧ್ಯಮಗಳು ತೋರಿಸುತ್ತಿವೆ" ಎಂದು ಪ್ರಿಯಾಂಕಾ ಬರೆದಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟ್ವೀಟ್ ನಲ್ಲಿ "ಮಹಾರಾಷ್ಟ್ರದಲ್ಲಿ 12000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಬಿಜೆಪಿ ಸರ್ಕಾರದ ಜೇಬಿನಿಂದ ಯಾವುದೇ ಸಹಾಯ ಹೊರಬರಲಿಲ್ಲ. ನಾವು ಜನಾದೇಶವನ್ನು ಬಹಿರಂಗವಾಗಿ ಅಪಹರಿಸುವ ಹಂತವನ್ನು ತಲುಪಿದ್ದೇವೆಯೇ? '' ಎಂದು ಪ್ರಶ್ನಿಸಿದ್ದಾರೆ.
 

Trending News