ಮಹಾರಾಷ್ಟ್ರ ವಿಧಾನಸಭಾ ಚುನಾವಣೆ; ಬಿಜೆಪಿ ಪರವಾಗಿ ಇಂದು ಸಿಎಂ ಬಿಎಸ್‌ವೈ ಪ್ರಚಾರ

ಮಹಾರಾಷ್ಟ್ರದಲ್ಲಿ 1.20 ಕೋಟಿ ಲಿಂಗಾಯತ ಮತಗಳಿದ್ದು, ಅವರ ಮತಗಳನ್ನು ತಮ್ಮ ಪಕ್ಷದತ್ತ ಸೆಳೆಯಲು ಯಡಿಯೂರಪ್ಪ ಇಂದು ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

Last Updated : Oct 16, 2019, 08:53 AM IST
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ; ಬಿಜೆಪಿ ಪರವಾಗಿ ಇಂದು ಸಿಎಂ ಬಿಎಸ್‌ವೈ ಪ್ರಚಾರ title=
File image

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ ಭೇಟೆ ನಡೆಸಲಿದ್ದಾರೆ. ರಾಜ್ಯದಲ್ಲಿ 1.20 ಕೋಟಿ ಲಿಂಗಾಯತ ಮತಗಳಿದ್ದು, ಅವರ ಮತಗಳನ್ನು ತಮ್ಮ ಪಕ್ಷದತ್ತ ಸೆಳೆಯಲು ಬಿಎಸ್‌ವೈ ಅಖಾಡಕ್ಕಿಳಿದಿದ್ದಾರೆ.

ಮಹಾರಾಷ್ಟ್ರದ ಸುಮಾರು 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲಿಂಗಾಯತ ಮತದಾರರ ಪ್ರಾಬಲ್ಯವಿದ್ದು, ಇಲ್ಲಿನ ಸಾಂಗ್ಲಿ, ಅಕ್ಕಲಕೋಟ್, ಲಾತೂರ್, ಚಕೂರ್, ಸೊಲ್ಲಾಪುರ ಜಿಲ್ಲೆಗಳಲ್ಲಿ ಇಂದು ಬಿಎಸ್‌ವೈ ಪ್ರಚಾರ ನಡೆಸಲಿದ್ದಾರೆ.

ಬುಧವಾರ(ಅ.16) ಬೆಳಗ್ಗೆ ಬೆಳಗಾವಿಯಿಂದ ಮುಂಬೈಗೆ ಹೊರಡಲಿರುವ ಸಿಎಂ ಯಡಿಯೂರಪ್ಪ ಹೆಲಿಕಾಪ್ಟರ್ ಮೂಲಕ ಸಾಂಗ್ಲಿಯ ಸಂಖ್​ಗೆ ತೆರಳಲಿದ್ದಾರೆ. ದಿನವಿಡೀ ಸಾಂಗ್ಲಿ, ಅಕ್ಕಲಕೋಟ್, ಲಾತೂರ್, ಚಕೂರ್, ಸೊಲ್ಲಾಪುರ ಜಿಲ್ಲೆಗಳಲ್ಲಿ ಮತ ಭೇಟೆ ನಡೆಸಲಿರುವ ಬಿಎಸ್‌ವೈ ಲಾತೂರ್​ನಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Trending News